Site icon Vistara News

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Diabetic Chutney

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ರಕ್ತ ಪರೀಕ್ಷೆ ಮಾಡಿಸಿದಾಗ ಕಂಡುಬರುವಂತಹ ಮೊದಲ ಕಾಯಿಲೆ ಎಂದರೆ ಅದು ಮಧುಮೇಹ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಒಮ್ಮೆ ಈ ಕಾಯಿಲೆ ಬಂದರೆ ಅದನ್ನು ವಾಸಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮಧುಮೇಹಿಗಳು ಆಹಾರದ ಬಗ್ಗೆ ಕಾಳಜಿವಹಿಸುವುದು ಅಗತ್ಯ.
ಮಧುಮೇಹಿಗಳು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವಂತಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಯಾವುದೇ ಫಂಕ್ಷನ್ ಗೆ ಹೋದರೂ ಸಿಹಿ ವಸ್ತುಗಳನ್ನು ಸೇವಿಸುವಂತಿಲ್ಲ. ಹಾಗಾಗಿ ಊಟದ ತಟ್ಟೆಯಲ್ಲಿರುವ ಪಾಯಸ, ಲಾಡು, ಸಿಟ್ಸ್ ಗಳನ್ನು ನೋಡಿ ಬಾಯಿ ಚಪ್ಪರಿಸಬೇಕೆ ವಿನಃ ಸೇವಿಸುವಂತಿಲ್ಲ. ಇದು ಕೆಲವರಿಗೆ ಬೇಸರವನ್ನುಂಟುಮಾಡುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅದಕ್ಕಾಗಿ ಮಧುಮೇಹಿಗಳು ಚಟ್ನಿಗಳನ್ನು (Diabetic Chutney) ಸೇವಿಸಿ. ಆದರೆ ಚಟ್ನಿ ತಯಾರಿಸುವಾಗ ಈ ಸಲಹೆ ಪಾಲಿಸಿ.

Diabetic Chutney

ಮಧುಮೇಹಿಗಳಿಗೆ ಚಟ್ನಿ ತಯಾರಿಸುವಾಗ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಪದಾರ್ಥಗಳನ್ನು ಹೆಚ್ಚು ಬಳಸಿ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸುವುದಿಲ್ಲ. ಹಸಿರು ಸೊಪ್ಪುಗಳು, ತರಕಾರಿಗಳು, ಟೊಮೆಟೊ ಮತ್ತು ಸೌತೆಕಾಯಿಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಹಾಗಾಗಿ ಪುದೀನಾ, ಟೊಮೆಟೊ ಚಟ್ನಿ ತಯಾರಿಸಿ ಸೇವಿಸಿ.

ಮಧುಮೇಹಿಗಳು ಸಕ್ಕರೆಯಂಶವಿರುವ ವಸ್ತುಗಳನ್ನು ತರಕಾರಿಯಲ್ಲಿ ಬಳಸುವುದನ್ನು ತಪ್ಪಿಸಬೇಕು. ಕೆಲವು ಆಹಾರ ಪದಾರ್ಥಗಳಲ್ಲಿ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ಅವುಗಳನ್ನು ಚಟ್ನಿ ತಯಾರಿಸಲು ಬಳಸಲಾಗುತ್ತದೆ. ಉದಾಹರಣೆಗೆ ಮಾವಿನ ಹಣ್ಣು ನೈಸರ್ಗಿಕ ಸಕ್ಕರೆಯಂಶವನ್ನು ಹೊಂದಿದೆ. ಇದನ್ನು ಬಳಸಿ ಚಟ್ನಿ ತಯಾರಿಸುತ್ತಾರೆ. ಮತ್ತು ಈ ಚಟ್ನಿ ಎಲ್ಲರಿಗೂ ಬಹಳ ಪ್ರಿಯವಾದುದು. ಆದರೆ ಮಧುಮೇಹಿಗಳು ಈ ಚಟ್ನಿಯ ಸೇವನೆಯನ್ನು ತಪ್ಪಿಸಿ.

ಮಧುಮೇಹಿಗಳು ಚಟ್ನಿ ತಯಾರಿಸುವಾಗ ನೆನೆಪಿಡಬೇಕಾದ ವಿಚಾರವೆಂದರೆ ನೀವು ಚಟ್ನಿಯಲ್ಲಿ ಫೈಬರ್ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಯಾಕೆಂದರೆ ಇವು ನಿಮ್ಮ ಹೊಟ್ಟೆ ದೀರ್ಘಕಾಲ ತುಂಬಿರುವಂತೆ ಮಾಡುತ್ತವೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಡೆಯುತ್ತವೆ. ಹೆಚ್ಚಿನ ತರಕಾರಿ ಮತ್ತು ಹಣ್ಣುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆಯಂತೆ. ಆದರೆ ಸಕ್ಕರೆಯಂಶ ಹೆಚ್ಚಾಗಿರುವ ತರಕಾರಿ ಹಣ್ಣುಗಳಿಂದ ಬಳಸಬೇಡಿ. ಇದರಿಂದ ಸಮಸ್ಯೆಯಾಗಬಹುದು.

Diabetic Chutney

ಮಧುಮೇಹಿಗಳು ಸಕ್ಕರೆಯಂತೆ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ. ಹಾಗಾಗಿ ಮಧುಮೇಹಿಗಳಿಗೆ ಚಟ್ನಿ ತಯಾರಿಸುವಾಗ ಚಟ್ನಿಗೆ ಹೆಚ್ಚು ಉಪ್ಪನ್ನು ಸೇರಿಸಬೇಡಿ. ಉಪ್ಪು ಚಟ್ನಿಯ ರುಚಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಉಪ್ಪು ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಚಟ್ನಿಗೆ ಉಪ್ಪನ್ನು ಕಡಿಮೆ ಬಳಸಿ ಸೇವಿಸಿ.

ಇದನ್ನೂ ಓದಿ: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

ಮಧುಮೇಹಿಗಳು ಚಟ್ನಿ ಸೇವಿಸಿದ ಮಾತ್ರಕ್ಕೆ ಅವರು ಆರೋಗ್ಯವಾಗಿರುವುದಿಲ್ಲ, ಜೊತೆಗೆ ಅವರು ಪ್ರತಿದಿನ ವ್ಯಾಯಾಮಗಳನ್ನು ಮಾಡಬೇಕು. ತಮ್ಮ ದೇಹ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಮಧುಮೇಹಿಗಳು ಸೇವಿಸುವ ಕೆಲವು ಆಹಾರದಲ್ಲಿ ಕಾರ್ಬೋಹೈಡ್ರೆಟ್ ಹೆಚ್ಚಾಗಿರುತ್ತದೆ. ಹಾಗಾಗಿ ಇದರಿಂದ ನಿಮ್ಮ ತೂಖ ಹೆಚ್ಚಾಗಬಹುದು. ಹಾಗಾಗಿ ನಿಮ್ಮ ತೂಕವನ್ನು ನಿಯಂತ್ರಿಸಲು ಪ್ರತಿದಿನ ವ್ಯಾಯಾಮವನ್ನು ಮಾಡಬೇಕು.

Exit mobile version