Site icon Vistara News

Diabetic Control: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

Diabetic Controle

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ ಎಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು. ಹಾಗಾಗಿ ಮಧುಮೇಹ ಸಮಸ್ಯೆ ಇದೆ ಎಂದಾಗ ಹಲವರಿಗೆ ಬೇಸರವಾಗುತ್ತದೆ. ಯಾಕೆಂದರೆ ಇದರಿಂದ ಸಿಹಿ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಬಡಿಸುವ ಪಾಯಸ, ಹೋಳಿಗೆ ತಿಂದು ಎಲ್ಲರೂ ಬಾಯಿ ಚಪ್ಪರಿಸಿಕೊಂಡರೆ ಮಧುಮೇಹಿಗಳು ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಈ ಸಮಸ್ಯೆಗಳಿಂದ ಪಾರಾಗಲು ಸುಲಭ ತಂತ್ರವಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Diabetic Controle) ನಿಯಂತ್ರಿಸಿಕೊಳ್ಳಬೇಕು. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.

  1. ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸೇವನೆ: ನಿಮ್ಮ ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಪ್ರೋಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ನೀವು ದಿನವಿಡೀ ಉತ್ಸಾಹದಿಂದ ಇರಬಹುದು.
  2. ಆ್ಯಪಲ್ ಸೈಡರ್ ವಿನೆಗರ್ ಸೇವನೆ : ಇದರಲ್ಲಿ ಅಸಿಟಿನ್ ಆಮ್ಲವಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಊಟಕ್ಕೆ ಅರ್ಧ ಗಂಟೆಯ ಮೊದಲು ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.
  3. ಮೆಗ್ನೀಸಿಯಂ ಭರಿತ ಆಹಾರ ಸೇವನೆ: ಆಹಾರದಲ್ಲಿ ಬಾಳೆಹಣ್ಣು, ಬಾದಾಮಿ, ಕೋಕೋ ಮತ್ತು ಹಸಿರು ಸೊಪ್ಪುಗಳನ್ನು ಸೇರಿಸಬೇಕು. ಇವುಗಳಲ್ಲಿ ಮೆಗ್ನೀಸಿಯಂ ಸಮೃದ್ಧವಾಗಿರುತ್ತದೆ. ಇದು ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಹೀರಿಕೊಳ್ಳುವಂತೆ ಉತ್ತೇಜಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
  4. ಊಟದ ಬಳಿಕ ವಾಕಿಂಗ್ : ಊಟವಾದ ತಕ್ಷಣ ನಿದ್ರೆ ಮಾಡಬಾರು. ಬದಲಾಗಿ ಊಟವಾದ ನಂತರ 10-15 ನಿಮಿಷ ಕಾಲ ಲಘು ವಾಕಿಂಗ್ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
  5. ಸರಿಯಾದ ಪ್ರಮಾಣದಲ್ಲಿ ಊಟದ ಸೇವನೆ : ನೀವು ಮಧ್ಯಾಹ್ನದ ವೇಳೆ 12ರಿಂದ 2 ಗಂಟೆಯೊಳಗೆ ನಿಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ. ಯಾಕೆಂದರೆ ಈ ಸಮಯದಲ್ಲಿ ಜೀರ್ಣಕ್ರಿಯೆ ವೇಗವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತೇಜಿಸುತ್ತದೆ.
  6. ದಾಲ್ಚಿನ್ನಿ- ಗ್ರೀನ್ ಟೀ ಸೇವನೆ : ಸಂಜೆಯ ವೇಳೆ ಗ್ರೀನ್ ಟೀಗೆ ದಾಲ್ಚಿನ್ನಿಯನ್ನು ಬೆರೆಸಿ ಕುದಿಸಿ ಕುಡಿಯಿರಿ. ಈ ಮಿಶ್ರಣವು ಜೀರ್ಣಕ್ರೀಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
  7. ರಾಗಿ ಸೇವನೆ : ನಿಮ್ಮ ಆಹಾರದಲ್ಲಿ ರಾಗಿ ಸೇರಿಸಿ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.
  8. ಸರಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ : ನೀವು ಅತಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಿ. ಅದಕ್ಕಾಗಿ ನೀವು ಹೊಟ್ಟೆ 80% ತುಂಬುವವರೆಗೆ ತಿನ್ನಿ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ:Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Exit mobile version