Site icon Vistara News

Winter Cap Styling: ವಿಂಟರ್‌ ಸೀಸನ್‌ ಕ್ಯಾಪ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲು ಹೀಗೆ ಮಾಡಿ

Winter Cap Styling

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಹುಡುಗಿಯರು ಬೆಚ್ಚಗಿನ ಕ್ಯಾಪ್‌ ಧರಿಸುವುದು (winter Cap Styling) ಒಂದು ಫ್ಯಾಷನ್‌. ಹಾಗೆಂದು ಕ್ಯಾಪ್‌ ಧರಿಸಿದವರೆಲ್ಲರೂ ಆಕರ್ಷಕವಾಗಿ ಕಾಣಿಸುವುದಿಲ್ಲ. ಧರಿಸುವವರ ಮುಖದ ಚರ್ಯೆ, ಧರಿಸುವ ರೀತಿ ಹಾಗೂ ಡ್ರೆಸ್‌ಕೋಡ್‌ ಎಲ್ಲವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಕ್ಯಾಪ್‌ ಧರಿಸಿದವರೆಲ್ಲರೂ ಸಿನಿಮಾದಲ್ಲಿ ಕಾಣಿಸುವ ತಾರೆಯರಂತೆ ಕಾಣಿಸುವುದಿಲ್ಲ! ಅದಕ್ಕಾಗಿ ಧರಿಸುವವರು ಒಂದಿಷ್ಟು ಸಿಂಪಲ್‌ ಕ್ಯಾಪ್‌ ಸ್ಟೈಲಿಂಗ್‌ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ನೋಡಲು ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

“ವಿಂಟರ್‌ ಸೀಸನ್‌ನಲ್ಲಿ, ಅದರಲ್ಲೂ ಟ್ರಾವೆಲಿಂಗ್‌ ಅಥವಾ ಔಟಿಂಗ್‌ನಲ್ಲಿ ಹುಡುಗಿಯರು ಬೆಚ್ಚಗಿನ ಕ್ಯಾಪ್‌ ಅಥವಾ ಹ್ಯಾಟ್‌ ಧರಿಸುವುದು ಇದೀಗ ತೀರಾ ಕಾಮನ್‌ ಆಗಿದೆ. ಅಷ್ಟು ಮಾತ್ರವಲ್ಲ, ವಯಸ್ಸಿನ ಭೇದ-ಭಾವವಿಲ್ಲದೇ, ಧರಿಸುವುದುಸಾಮಾನ್ಯವಾಗಿದೆ. ಧರಿಸಲು ಇಚ್ಛಿಸುವವರು ಒಂದಿಷ್ಟು ಸ್ಟೈಲಿಶ್‌ ಟಿಪ್ಸ್‌ ಫಾಲೋ ಮಾಡಿದಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು” ಎಂದು ಸ್ಟೈಲಿಸ್ಟ್‌ ಜಾನ್‌ ತಿಳಿಸುತ್ತಾರೆ.

ಫ್ರೀ ಹೇರ್‌ಸ್ಟೈಲ್‌ಗೆ ಬೆಸ್ಟ್ ಮ್ಯಾಚಿಂಗ್‌

ಸಿಂಪಲ್‌ ಆಗಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲು ಫ್ರೀ ಹೇರ್‌ಸ್ಟೈಲ್‌ಗೆ ಕ್ಯಾಪ್‌ ಧರಿಸಿ. ನೀಳ ಕೂದಲಾದರೂ ಸರಿಯೇ, ಕರ್ಲಿಯಾದರೂ ಓಕೆ ಕಿವಿಯ ಮೇಲೆ ಬರುವಂತೆ ಧರಿಸಿದಾಗ ಆಕರ್ಷಕವಾಗಿ ಕಾಣಿಸುತ್ತದೆ.

ಜಡೆಗೆ ಟೋಪಿ ಬೇಡ

ಟೋಪಿ ಧರಿಸಿದಾಗ ಸಿಂಗಲ್‌ ಜಡೆ ಹಾಕುವುದು ಬೇಡ. ಎರಡೂ ಜಡೆ ಓಕೆ. ಒಂದು ಜಡೆಯಾದಲ್ಲಿ ನೋಡಲು ಚೆನ್ನಾಗಿ ಕಾಣುವುದಿಲ್ಲ ಎಂಬುದು ನೆನಪಿರಲಿ.

ಹ್ಯಾಟ್‌ ಶೈಲಿಯ ಕ್ಯಾಪ್‌

ಹ್ಯಾಟ್‌ ಶೈಲಿಯ ಟೋಪಿಯಾದಲ್ಲಿ ಆದಷ್ಟೂ ನಿಮ್ಮ ತಲೆಯ ಆಕಾರಕ್ಕೆ ಮ್ಯಾಚ್‌ ಆಗಬೇಕು. ಹಣೆಯನ್ನು ಇದು ಮುಚ್ಚುವುದರಿಂದ ಕಿವಿಗಳು ಬೆಚ್ಚಗಾಗುವುದಿಲ್ಲ, ನೋಡಲಷ್ಟೇ ಚೆನ್ನಾಗಿ ಕಾಣುತ್ತದೆ ಎಂಬುದು ನೆನಪಿರಲಿ.

ಮಫ್ಲರ್‌ ಕ್ಯಾಪ್‌

ಟ್ರಾವೆಲಿಂಗ್‌ಗೆ ಇದು ಸೂಕ್ತ. ಟೋಪಿಯ ಜೊತೆಯೇ ಮಫ್ಲರ್‌ ಇರುವುದರಿಂದ, ಕತ್ತನ್ನು ಸುತ್ತುವರಿಯುತ್ತದೆ, ಜೊತೆಗೆ ಇದು ಕತ್ತಿನ ಭಾಗವನ್ನು ಬೆಚ್ಚಗಿಡುತ್ತದೆ.

ಬೀನಿ ಕ್ಯಾಪ್‌ಗಳು

ಬೀನಿ ಶೈಲಿಯ ಕ್ಯಾಪ್‌ಗಳು ಉಲ್ಲನ್‌ ಆದರೂ ಸರಿಯೇ ಇತರೇ ಫ್ಯಾಬ್ರಿಕ್‌ನದ್ದಾದರೂ ಸರಿಯೇ ಕಿವಿಯನ್ನು ಮುಚ್ಚುವುದರೊಂದಿಗೆ ಫ್ರೀ ಹೇರ್‌ಸ್ಟೈಲ್‌ಗೆ ಸಖತ್ತಾಗಿ ಕಾಣುತ್ತದೆ.

ಫೇಕ್‌ ಫರ್‌ ಕ್ಯಾಪ್‌

ಫೇಕ್‌ ಫರ್‌ ಕ್ಯಾಪ್‌ಗಳು ಕೂಡ ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಕೋಟ್‌ ಜೊತೆ ಧರಿಸಿದಾಗ ನೋಡಲು ಕಂಪ್ಲೀಟ್‌ ವಿಂಟರ್‌ ಲುಕ್‌ ನೀಡುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sheer Puff Sleeve Blouse Fashion: ಮಹಿಳೆಯರ ಡಿಸೈನರ್‌ ಸೀರೆಗೆ ಬಂತು ಪಾರದರ್ಶಕ ಶೀರ್‌ ಪಫ್‌ ಬ್ಲೌಸ್‌ ಫ್ಯಾಷನ್‌!

Exit mobile version