ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಳ್ಳು ಆರೋಗ್ಯವರ್ಧಕ ಮಾತ್ರವಲ್ಲ, ಸೌಂದರ್ಯ ವರ್ಧಕ (Sesame seeds Beauty tips) ಎಂಬುದು ನಿಮಗೆ ಗೊತ್ತೇ! ಹೌದು. ಎಳ್ಳನ್ನು ಸೌಂದರ್ಯ ವೃದ್ಧಿಸಿಕೊಳ್ಳಲು ಹೇಗೆಲ್ಲಾ ಬಳಸಬಹುದು ಎಂಬುದನ್ನು ಬ್ಯೂಟಿ ಎಕ್ಸ್‌ಪರ್ಟ್ಸ್ ಇಲ್ಲಿ ತಿಳಿಸಿದ್ದಾರೆ. ಟ್ರೈ ಮಾಡಿ ನೋಡಿ.
ಎಳ್ಳಿನ ಪುಡಿಯ ಸ್ಕ್ರಬ್
ಒಂದೆರೆಡು ಹನಿ ಹಾಲು ಅಥವಾ ಜೇನುತುಪ್ಪದೊಂದಿಗೆ ತರಿತರಿಯಾಗಿ ಪುಡಿ ಮಾಡಿದ ಕೊಂಚ ಎಳ್ಳಿನ ಪುಡಿಯನ್ನು ಮಿಶ್ರ ಮಾಡಿ ಮುಖಕ್ಕೆ ಸ್ಕ್ರಬ್‌ನಂತೆ ಬಳಸಬಹುದು. ಇದು ಡೆಡ್ ಸ್ಕಿನ್ ನಿವಾರಣೆ ಮಾಡುತ್ತದೆ.
ಎಳ್ಳಿನ ಫೇಸ್ ಪ್ಯಾಕ್
ಅರ್ಧ ಟೇಬಲ್ ಸ್ಪೂನ್ ಎಳ್ಳಿನ ಪುಡಿಗೆ ಕೊಂಚ ಅಕ್ಕಿ ಹಿಟ್ಟು , 1 ಟೀ ಸ್ಪೂನ್ ಜೇನುತುಪ್ಪ ಮಿಶ್ರ ಮಾಡಿ ಪೇಸ್ಟ್ ಮಾಡಿ. ಮುಖಕ್ಕೆ ಲೇಪಿಸಿ. 15 ನಿಮಿಷದ ನಂತರ ತಣ್ಣಗಿನ ನೀರಿನಲ್ಲಿ ವಾಶ್ ಮಾಡಿ. ಇದು ಮುಖದ ಕಾಂತಿ ಹೆಚ್ಚಿಸುತ್ತದೆ.
ನ್ಯಾಚುರಲ್ ಮಾಯಿಶ್ಚರೈಸರ್
ಎಳ್ಳು-ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ, ಈ ಸೀಸನ್‌ನಲ್ಲಿ ದೇಹಕ್ಕೆ ಹಾಗೂ ತ್ವಚೆಗೆ ಅಗತ್ಯವಿರುವ ಮಾಯಿಶ್ಚರೈಸರ್ ಅಂಶವನ್ನು ಕಲ್ಪಿಸುತ್ತದೆ. ಎಳ್ಳೆಣ್ಣೆ ಮುಖಕ್ಕೆ ಹಚ್ಚುವುದರಿಂದ ತ್ವಚೆಯು ಸಾಫ್ಟ್ ಆಗುತ್ತದೆ.
ಕಲೆಯ ನಿವಾರಣೆ
ಎಳ್ಳೆಣ್ಣೆ ಆಗಾಗ್ಗೆ ಮುಖಕ್ಕೆ ಲೇಪಿಸಿ, ವಾಶ್ ಮಾಡುವುದರಿಂದ ಮುಖದ ಮೇಲಿನ ವೈಟ್‌ಹೆಡ್ಸ್, ಬ್ಲಾಕ್‌ಹೆಡ್ಸ್ ಹಾಗೂ ಕಲೆ ನಿವಾರಣೆಯಾಗುತ್ತದೆ.
ನ್ಯಾಚುರಲ್ ಕ್ಲೆನ್ಸರ್
ಎಳ್ಳೆಣ್ಣೆಯು ನ್ಯಾಚುರಲ್ ಕ್ಲೆನ್ಸರ್. ಮೃದುವಾಗಿ ಮಸಾಜ್ ಮಾಡುವುದರಿಂದ ಇದು ಡ್ಯಾಮೇಜ್ ಆಗಿರುವ ತ್ವಚೆಯನ್ನು ರಿಪೇರಿ ಮಾಡುತ್ತಲ್ಲದೇ, ಡೆಡ್ ಸ್ಕಿನ್ ನಿವಾರಣೆ ಮಾಡುತ್ತದೆ.
ಟ್ಯಾನ್ ನಿವಾರಕ
ನೈಸರ್ಗಿಕವಾಗಿ ಟ್ಯಾನ್ ಆಗುವುದನ್ನು ತಡೆಯುತ್ತದೆ. ಪಿಗ್ಮಂಟೇಷನ್ ನಿವಾರಿಸುತ್ತದೆ. ಸ್ಕಿನ್ ಅಲರ್ಜಿಯನ್ನು ಪರಿಹರಿಸುತ್ತದೆ.
ಎಳ್ಳೆಣ್ಣೆಯನ್ನು ಮುಖದ ತ್ವಚೆಗೆ ಬಳಸುವುದು ಹೇಗೆ?
ನಿಮಗೆ ಅಗತ್ಯ ಇರುವಷ್ಟು ಎಳ್ಳೆಣ್ಣೆಯನ್ನು ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ. ಅದನ್ನು ಮುಖದ ಮೇಲೆಲ್ಲಾ ಸವರಿ. ನಿಧಾನವಾಗಿ ಮಸಾಜ್ ಮಾಡಿ. ಸ್ನಾನ ಮಾಡುವುದಕ್ಕಿಂತ ಸುಮಾರು 1 ಗಂಟೆ ಮುಂಚೆ ಹಚ್ಚುವುದು ಉತ್ತಮ. ಆಯುರ್ವೇದದಲ್ಲಿ ಎಳ್ಳೆಣ್ಣೆಯನ್ನು ನೈಸರ್ಗಿಕ ಕ್ಲೆನ್ಸರ್ ಎನ್ನಲಾಗುತ್ತದೆ. ಯಾವುದೇ ಕಾರಣಕ್ಕೂ ಇಡೀ ರಾತ್ರಿ ಹಚ್ಚಿ ಮಲಗಬೇಡಿ. ತ್ವಚೆಗೆ ಹೊಂದಿಕೊಂಡಲ್ಲಿ ಮಾತ್ರ ಬಳಸುವುದನ್ನು ಮುಂದುವರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಚಳಿಗಾಲದಲ್ಲಿ ಟಿನೇಜ್ ಹುಡುಗಿಯರನ್ನು ಆಕರ್ಷಿಸಿದ 3 ಶೈಲಿಯ ಲೇಯರ್ ಲುಕ್