Site icon Vistara News

Sankranti Celebration: ಪೊಂಗಲ್‌- ಸಂಕ್ರಾಂತಿ ಸೆಲೆಬ್ರೆಷನ್‌ಗೆ ಸಾಥ್‌ ನೀಡಲು ಬಂತು ಪರಿಸರಸ್ನೇಹಿ ಮಣ್ಣಿನ ಕುಡಿಕೆ

Sankranti Celebration

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ (Sankranti Celebration) ಎಳ್ಳು ಬೀರಲು ಹಾಗೂ ಪೊಂಗಲ್‌ನಲ್ಲಿ ಅಲಂಕಾರಕ್ಕಾಗಿ ಬಳಸುವ ಪರಿಸರ ಸ್ನೇಹಿ ಬಣ್ಣಬಣ್ಣದ ಮಣ್ಣಿನ ಡಿಸೈನರ್‌ ಕುಡಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಾನಾ ಡಿಸೈನ್‌ ಹಾಗೂ ಆಕಾರದಲ್ಲಿ ಇವು ದೊರೆಯುತ್ತಿವೆ. “ಸಂಕ್ರಾಂತಿ ಹಬ್ಬದಲ್ಲಿ ಹೆಣ್ಣು ಮಕ್ಕಳು ಎಳ್ಳು ಬೀರುವುದು ಸಾಮಾನ್ಯ. ಮೊದಲೆಲ್ಲಾ ಇದಕ್ಕಾಗಿ ಪ್ಲಾಸ್ಟಿಕ್‌ ಪುಟ್ಟ ಕವರ್‌ ಪ್ಯಾಕೆಟ್‌ಗಳನ್ನು ಬಳಸಲಾಗುತ್ತಿತ್ತು. ನಂತರ ಪ್ಲಾಸ್ಟಿಕ್‌ ಪುಟ್ಟ ಡಬ್ಬಗಳನ್ನು ಬಳಸುವುದು ಹೆಚ್ಚಾಯಿತು. ಈಗಲೂ ಇದೆ. ಇವುಗಳ ಮಧ್ಯೆ ಪರಿಸರ ಸ್ನೇಹಿ ಮಣ್ಣಿನ ಪುಟ್ಟ ಪುಟ್ಟ ಡಿಸೈನರ್‌ ಮಡಿಕೆ-ಕುಡಿಕೆಗಳು ಎಂಟ್ರಿ ನೀಡಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಈ ಮಣ್ಣಿನ ಕುಡಿಕೆಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಹಾಗಾಗಿ ಇವುಗಳಲ್ಲಿ ನಾನಾ ಬಗೆಯ ಡಿಸೈನ್‌ನವು ಎಂಟ್ರಿ ನೀಡಿವೆ. ಇನ್ನು ಅಲಂಕಾರಿಕ ಮಣ್ಣಿನ ಕುಡಿಕೆಗಳು ಬಂದಿವೆ. ಪ್ಲಾಸ್ಟಿಕ್‌ ಬೇಡ ಎನ್ನುವವರನ್ನು ಇವು ಸೆಳೆದಿವೆ. ಅಲ್ಲದೇ ಪೊಂಗಲ್‌ ಅಲಂಕಾರಕ್ಕೂ ಇವು ಬಳಕೆಯಾಗುತ್ತಿವೆ.

ಪೊಂಗಲ್‌ ಅಲಂಕಾರಕ್ಕೂ ಮಣ್ಣಿನ ಮಡಿಕೆ-ಕುಡಿಕೆ

ಪೊಂಗಲ್‌ ಅಲಂಕಾರಕ್ಕೂ ಮಣ್ಣಿನ ಮಡಿಕೆ-ಕುಡಿಕೆಗಳು ಬಂದಿವೆ. ಕುಂದನ್‌, ಪರ್ಲ್, ಬೀಡ್ಸ್‌ ಹೀಗೆ ನಾನಾ ಲೇಸ್‌ನಿಂದ ಮಾಡಿದ ಡಿಸೈನ್‌ಗಳು ಈ ಕುಡಿಕೆಗಳನ್ನು ಮತ್ತಷ್ಟು ಸುಂದರಗೊಳಿಸಿವೆ. ಮನೆಯೊಳಗಿನ ಹಬ್ಬದ ಅಲಂಕಾರದಲ್ಲೂ ಇವು ಉಪಯೋಗವಾಗುತ್ತಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಪರಿಸರ ಪ್ರೇಮಿಗಳು ಇವನ್ನು ಹೆಚ್ಚಾಗಿ ಕೊಳ್ಳುತ್ತಾರೆ ಎನ್ನುತ್ತಾರೆ. ಅಲ್ಲದೇ ಇದು ಅಲಂಕಾರದಲ್ಲಿ ಟ್ರೆಡಿಷನಲ್‌ ಲುಕ್‌ ನೀಡುತ್ತದೆ ಎನ್ನುತ್ತಾರೆ.

ಕುಡಿಕೆಯಲ್ಲಿ ಎಳ್ಳನ್ನು ತುಂಬಿ ಬೀರುವ ಕಾನ್ಸೆಪ್ಟ್

“ಕಳೆದ ಒಂದಿಷ್ಟು ವರ್ಷಗಳಿಂದ ನಾವು ಎಳ್ಳನ್ನು ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿ ಹಾಕಿ ಬೀರುವುದನ್ನು ನಿಲ್ಲಿಸಿದ್ದೇವೆ. ಬದಲಿಗೆ ಪುಟ್ಟ ಕುಡಿಕೆಯಲ್ಲಿ ತುಂಬಿ ನೀಡುತ್ತೇವೆ. ಇದು ಸಾಂಪ್ರದಾಯಿಕವಾಗಿ ಕಾಣುತ್ತಲ್ಲದೇ, ಪರಿಸರ ಸ್ನೇಹಿ ಹಬ್ಬ ಮಾಡಿದಂತಾಗುತ್ತದೆ” ಎನ್ನುತ್ತಾರೆ ಬಸವನಗುಡಿಯ ನಿವಾಸಿ ರಾಜಶ್ರೀ ಹಾಗೂ ದೀಕ್ಷಾ. ಇನ್ನು, ಕೆಲವರು ಇದನ್ನು ಸಿಂಗಾರಕ್ಕೂ ಬಳಸುತ್ತಾರೆ. ಎಳ್ಳು ತುಂಬಿ ಅಲಂಕರಿಸುತ್ತಾರೆ. ಇಲ್ಲವೇ ಹೂವನ್ನು ತುಂಬಿ ಮನೆಯ ಕಾರ್ನರ್‌ನಲ್ಲಿಡುತ್ತಾರೆ. ಹೀಗೆ ನಾನಾ ಬಗೆಯಲ್ಲಿ ಈ ಮಣ್ಣಿನ ಪುಟ್ಟ ಕುಡಿಕೆಗಳು ಹಬ್ಬದ ಸಂಭ್ರಮದಲ್ಲಿ ಜೊತೆಯಾಗುತ್ತವೆ ಎನ್ನುತ್ತಾರೆ ಟೆಕ್ಕಿ ಜೀವಿತಾ, ಸ್ವಾತಿ ಹಾಗೂ ದಿಯಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sankranti Fashion 2024: ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಾದ ಟ್ರೆಡಿಷನಲ್‌ವೇರ್ಸ್ ಶಾಪಿಂಗ್‌

Exit mobile version