Site icon Vistara News

Eye Makeup Care: ಐ ಶ್ಯಾಡೋ ಹಚ್ಚುವ ಮುನ್ನ 5 ಸಂಗತಿ ತಿಳಿದಿರಲಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮುಖದ ಅಂದವನ್ನು ಹೆಚ್ಚಿಸುವಲ್ಲಿ ಐ ಶ್ಯಾಡೋ ಪಾತ್ರ ಕೂಡ ದೊಡ್ಡದು. ಇಡೀ ಮೇಕಪ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣುವ ಕಂಗಳ ಸೌಂದರ್ಯ, ಐ ಶ್ಯಾಡೋನಿಂದ ಹೆಚ್ಚಾಗುತ್ತದೆ. ಈ ಬಗ್ಗೆ ಮೇಕಪ್‌ ಆರ್ಟಿಸ್ಟ್‌ ಗಂಗಾ ಐದು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲು ತಿಳಿಸಿದ್ದಾರೆ.

  1. ಮಾನ್ಸೂನ್‌ ಕಲರ್ಸ್‌ಗೆ ಆದ್ಯತೆ

ಐ ಶ್ಯಾಡೋ ಮೇಕಪ್‌ ಮಾಡುವಾಗ ಆದಷ್ಟೂ ಟ್ರೆಂಡಿ ಕಲರ್ಸ್‌ ಚೂಸ್‌ ಮಾಡಿ. ಕೆಲವೊಮ್ಮೆ ಟ್ರೆಂಡ್‌ ಫಾಲೋ ಮಾಡುತ್ತಾ ಸೂಟ್‌ ಆಗದಿದ್ದನ್ನು ಹಚ್ಚಿಕೊಳ್ಳಬೇಡಿ. ಈ ಸೀಸನ್‌ಗೆ ಹೊಂದುವಂತಹ ಐ ಶ್ಯಾಡೋ ಆಯ್ಕೆ ಮಾಡಿ. ಡ್ರೆಸ್‌ಕೋಡ್‌ ಕೂಡ ಇದಕ್ಕೆ ಮ್ಯಾಚ್‌ ಆಗಬೇಕು.

  1. ರೆಪ್ಪೆಯ ಸ್ಕಿನ್‌ಟೋನ್‌ಗೆ ತಕ್ಕಂತಿರಲಿ

ರೆಪ್ಪೆಯ ಸ್ಕಿನ್‌ ಟೋನ್‌ಗೆ ತಕ್ಕಂತೆ ಐ ಶ್ಯಾಡೋ ಹಚ್ಚುವ ವಿಧಾನ ಬಳಸಿ. ಜಿಡ್ಡಿನಾಂಶ ಹೊಂದಿದ ರೆಪ್ಪೆ ನಿಮ್ಮದ್ದಾಗಿದ್ದಲ್ಲಿ ಪ್ರೈಮರ್‌ ಜತೆಗೆ ಫೌಂಡೇಷನ್‌ ಬಳಸಬೇಕಾಗುತ್ತದೆ. ಇಲ್ಲವಾದಲ್ಲಿ ಪ್ಯಾಚ್‌ವರ್ಕ್ನಂತೆ ಕಾಣಬಹುದು. ಡ್ರೈ ರೆಪ್ಪೆಯಾಗಿದ್ದಲ್ಲಿ ಆಯಿಲ್‌ ಬೇಸ್ಡ್‌ ಶ್ಯಾಡೋ ಬಳಸಬಹುದು. ಮೇಕಪ್‌ಗೆ ಮುನ್ನೈ ಶ್ಯಾಡೋ ಹಚ್ಚಿ. ಮೇಕಪ್‌ ನಂತರವಾದಲ್ಲಿ ಕಂಗಳ ಕೆಳಗೆ ಟಿಶ್ಯೂ ಪೇಪರ್‌ ಇರಿಸಿ, ನಂತರ ಐ ಮೇಕಪ್‌ ಮಾಡಿ. ಇಲ್ಲವಾದಲ್ಲಿ ಒಂದಕ್ಕೊಂದು ಮಿಕ್ಸ್‌ ಆಗುವ ಸಂಭವವಿರುತ್ತದೆ. ಕಣ್ಣಿನ ರೆಪ್ಪೆಯ ತನಕ ಹಚ್ಚಬೇಡಿ. ಐ ಲೈನರ್‌ ಹಾಗೂ ಮಸ್ಕರಾಗೆ ಟಚ್‌ ಆಗಕೂಡದು.

  1. ಔಟ್‌ಫಿಟ್‌ಗೆ ಮ್ಯಾಚ್‌ ಆಗುವುದು ಅಗತ್ಯ

ಕಂಗಳ ಮಾದಕತೆಯನ್ನು ಹೆಚ್ಚಿಸುವ ಐ ಶ್ಯಾಡೋ ಟ್ರೈ ಮಾಡುವ ಮೊದಲು ನೀವು ಧರಿಸುವ ಉಡುಪು ಅದಕ್ಕೆ ಮ್ಯಾಚ್‌ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿನಿಮ್ಮ ಉಡುಪಿನ ಬಣ್ಣ ಒಂದು ಹಾಗೂ ಐ ಶ್ಯಾಡೋ ಮತ್ತೊಂದು ಬಣ್ಣ ಆದಲ್ಲಿ ಜೋಕರ್‌ನಂತೆ ಕಾಣಬಹುದು. ದೇಸಿ ಲುಕ್‌ಗಾದಲ್ಲಿಶೈನಿಂಗ್‌ ಬಣ್ಣ ಬಳಸಬೇಡಿ. ಕ್ಯಾಶುವಲ್‌ ಉಡುಪಿಗೆ ತಕ್ಕಂತೆ ಐ ಶ್ಯಾಡೋ ಕಲರ್‌ ಬಳಸಿ.

  1. ಆನ್‌ಲೈನ್‌ ಟ್ರೆಂಡ್‌ ವರ್ಸಸ್‌ ಆಫ್‌ಲೈನ್‌ ಟ್ರೆಂಡ್‌

ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಇರುವ ಐ ಶ್ಯಾಡೋ ಟ್ರೆಂಡ್‌ ಆಫ್‌ಲೈನ್‌ನಲ್ಲಿ ಇರುವುದಿಲ್ಲ. ಹಾಗಾಗಿ ಕನ್‌ಫ್ಯೂಸ್‌ ಆಗಬೇಡಿ. ನೀವೇನಾದರೂ ಆನ್‌ಲೈನ್‌ ಅಥವಾ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವ ಹಾಗಿದ್ದಲ್ಲಿ ಮಾತ್ರ ಮೊದಲೇ ಈ ಬಗ್ಗೆ ಅಪ್‌ಡೇಟ್‌ ಆಗಿರುವುದು ಅಗತ್ಯ. ಆನ್‌ಸ್ಕ್ರೀನ್‌ ಐ ಮೇಕಪ್‌ ವೈಬ್ರೆಂಟ್‌ ಆಗಿರುತ್ತದೆ. ಸುಮ್ಮನೆ ಹೇಗೋ ಇರುವಂತಹ ಐ ಮೇಕಪ್‌ ಫೋಟೋ ಅಪ್‌ಲೋಡ್‌ ಮಾಡಿ ಮುಜುಗರ ಎದುರಿಸಬೇಕಾದೀತು. ಹಾಗಾಗಿ ಎಚ್ಚರ. ಇನ್ನು ಆಫ್‌ಲೈನ್‌ ಸಮಾರಂಭಗಳಲ್ಲಿ ನಿಮಗೆ ಇಷ್ಟವಾದದನ್ನು ಚೂಸ್‌ ಮಾಡಬಹುದು.

  1. ಐ ಶ್ಯಾಡೋ ರಿಮೂವರ್‌

ಐ ಶ್ಯಾಡೋ ತೆಗೆಯುವಾಗ ಕ್ಲೆನ್ಸರ್‌ ಬಳಸಿ. ಕಣ್ಣಿನ ಜಾಗ ಸೂಕ್ಷ್ಮವಾಗಿರುವುದರಿಂದ ತಾಳ್ಮೆಯಿಂದ ಹತ್ತಿಯಲ್ಲಿಒರೆಸಬೇಕು. ಹೆಚ್ಚು ಉಜ್ಜಕೂಡದು. ಇದೀಗ ಮಾರುಕಟ್ಟೆಯಲ್ಲಿ ಮೇಕಪ್‌ ರಿಮೂವರ್‌ ದೊರೆಯುತ್ತವೆ. ಇವನ್ನು ಬಳಸಿ ಸುರಕ್ಷಿತವಾಗಿ ಐ ಮೇಕಪ್‌ ತೆಗೆಯಬಹುದು. ಅದರಲ್ಲೂ ಮಲಗುವ ಮುನ್ನ ಐ ಶ್ಯಾಡೋ ತೆಗೆಯುವುದನ್ನು ಮರೆಯಕೂಡದು.

ಲೇಖಕಿ ಫ್ಯಾಷನ್ ಪತ್ರಕರ್ತೆ

ಇದನ್ನೂ ಓದಿ | Makeup tricks: ಆಕರ್ಷಕ ಮೂಗಿಗಾಗಿ ಮೇಕಪ್ ಟ್ರಿಕ್ಸ್

Exit mobile version