Site icon Vistara News

Fashion News : ಮನಗೆದ್ದ ಸ್ಮೃತಿ ಸಾಧನಾ ವರ್ಷದ ಮೊದಲ ಫ್ಯಾಷನ್‌ ಶೋ

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಮೃತಿ ಸಾಧನಾ ಸಂಸ್ಥೆಯ ಈ ವರ್ಷದ ʼನನ್ನ ರಾಜ್ಯ ನನ್ನ ಹೆಮ್ಮೆʼ ಕಾರ್ಯಕ್ರಮದ ಅಂಗವಾಗಿ ೩ ರೌಂಡ್‌ನಲ್ಲಿ ನಡೆದ ಫ್ಯಾಷನ್‌ ಶೋ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಪ್ರಿಯಾ ಪ್ರಶಾಂತ್‌ ಕುಮಾರ್‌ ರ್ಯಾಂಪ್‌ ಝಲಕ್‌

ಡಿಸೈನರ್‌ ಬಕ್ಷ್ ಅಲಿ ಹಾಗೂ ಶೋ ಸ್ಟಾಫರ್‌ ಪ್ರಿಯಾ ಪ್ರಶಾಂತ್‌ ಸಾರಥ್ಯದಲ್ಲಿ ನಡೆದ ಈ ಫ್ಯಾಷನ್‌ ಶೋನಲ್ಲಿ ಟ್ರೆಡಿಷನಲ್‌ವೇರ್‌ಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿತ್ತು. ಮಿಸೆಸ್‌ ಇಂಡಿಯಾ ಕರ್ನಾಟಕ ೨೦೧೬ ಶುಭಾ ಶ್ರೀರಾಮ್‌ ಅವರೊಂದಿಗೆ ಪ್ರಿಯಾ ಪ್ರಶಾಂತ್‌ ಅವರು ಶೋ ಸ್ಟಾಪರ್‌ ಆಗಿ ರ್ಯಾಂಪ್‌ನ ಕಳೆ ಹೆಚ್ಚಿಸಿದರು. ಭಾವನಾ, ರೇಷ್ಮಾ, ಶ್ವೇತಾ ಮೌರ್ಯ ಇವರೊಂದಿಗೆ ವಾಕ್‌ ಮಾಡಿದರು.

ಡೈಮಂಡ್‌ ಜ್ಯುವೆಲರಿ ರೌಂಡ್‌

ವಂಡರ್‌ ಡೈಮಂಡ್‌ ಜ್ಯುವೆಲರಿಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್‌ ಮೇಲೆ ವಾಕ್‌ ಮಾಡಿದರು. ಜೊತೆಗೆ ಟ್ರೆಂಡಿ ಜ್ಯುವೆಲರಿಗಳ ಪ್ರದರ್ಶನ ಕೂಡ ಮಾಡಿದರು. ನೋಡಲು ಮನಮೋಹಕವಾಗಿದ್ದ ಈ ಶೋನಲ್ಲಿ ಪ್ರೊಫೆಷನಲ್‌ ಮಾಡೆಲ್‌ಗಳಿಂದಿಡಿದು ಸಾಮಾನ್ಯ ಬ್ಯೂಟಿಷಿಯನ್‌ಗಳು ಸಹ ಪಾಲ್ಗೊಂಡಿದ್ದರು.

Fashion News

ಕಿಡ್ಸ್‌ ಫ್ಯಾಷನ್‌ ಶೋ

ಇವೆಲ್ಲದರ ನಡುವೆ ಮಕ್ಕಳ ಫ್ಯಾಷನ್‌ ಶೋ ಕೂಡ ನಡೆಯಿತು. ನಾನಾ ಟ್ರೆಂಡಿ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಕ್ಕಳು ಮಾಡೆಲ್‌ ಪ್ರಿಯಾ ಪ್ರಶಾಂತ್‌ ಅವರ ಕೊರಿಯಾಗ್ರಾಫಿಯಲ್ಲಿ ವಾಕ್‌ ಮಾಡಿ ಎಲ್ಲರ ಕಣ್ಮನ ಸೆಳೆದರು.

ನಾನಾ ಕ್ಷೇತ್ರದ ಗಣ್ಯರು ಭಾಗಿ

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್‌ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಸಾಕಷ್ಟು ಮಹಿಳೆಯರು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತಿದೆ. ಇಂತಹ ನಾನಾ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಆಗಾಗ್ಗೆ ಅಯೋಜಿಸುತ್ತಿದೆ. ಅದರಲ್ಲೂ ಫ್ಯಾಷನ್‌ ಶೋಗಳು ಆಗಾಗ ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ ವೀಣಾ ಭಟ್‌, ನಟ, ನಿರೂಪಕ ನಿರಂಜನ್‌ ದೇಶಪಾಂಡೆ ಸೇರಿದಂತೆ ನಾನಾ ಕ್ಷೇತ್ರದವರು ಪಾಲ್ಗೊಂಡಿದ್ದರು. ಡಾನ್ಸರ್ಸ್, ಬ್ಯೂಟಿಶಿಯನ್ಸ್, ಡಿಸೈನರ್‌ ಹೀಗೆ ನಾನಾ ಕಲಾವಿದರು ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Star Fashion : ಅಜೆರ್ಬೈಜಾನ್‌ನ ವಿಂಟರ್‌ ಸ್ಟ್ರೀಟ್‌ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್‌

Exit mobile version