ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಪಂಚದ ಫ್ಯಾಷನ್ ಹಬ್‌ಗಳಲ್ಲಿ ಒಂದಾದ ಮಿಲಾನ್ ಫ್ಯಾಷನ್‌ವೀಕ್‌ನಲ್ಲಿ ಈ ಬಾರಿ ಹೆಚ್ಚಾಗಿ ಪುರುಷರದ್ದೇ, ಅಂದರೆ ಮೆನ್ಸ್ ಮಾಡೆಲ್‌ಗಳದ್ದೇ ಕಾರುಬಾರು. ಸ್ಪ್ರಿಂಗ್ ಹಾಗೂ ಫಾಲ್ ವಿಂಟರ್ ೨೦೨೩ ಫ್ಯಾಷನ್ ವೀಕ್‌ನಲ್ಲಿ ಈ ಸೀಸನ್‌ನಲ್ಲಿ ಮುಂಬರುವ ಟ್ರೆಂಡಿ ಡಿಸೈನರ್‌ವೇರ್‌ಗಳದ್ದು ಮಾತ್ರವಲ್ಲ, ವಿಂಟರ್‌ವೇರ್ ಹಾಗೂ ನಾನ್ ವೇರಬಲ್ ಫ್ಯಾಷನ್‌ವೇರ್‌ಗಳ ಅನಾವರಣ ಮಾಡಲಾಯಿತು.
ಕೆಲವು ಡಿಸೈನರ್‌ಗಳ ಡಿಸೈನರ್‌ವೇರ್‌ಗಳು ಕುತೂಹಲ ಕೆರಳಿಸಿದರೆ, ಇನ್ನು ಕೆಲವು ಪ್ರಯೋಗಾತ್ಮಕ ಡಿಸೈನ್‌ಗಳಿಗೆ ನಾಂದಿ ಹಾಡಿತು. ಮತ್ತೆ ಕೆಲವು ಊಹೆಗೂ ಸಿಗದ ಡಿಸೈನ್‌ಗಳ ಕೆಟಗರಿ ಸೇರಿತಲ್ಲದೇ, ಧರಿಸದ ನಾನ್ ವೇರಬಲ್ ಕೆಟಗರಿಯಲ್ಲಿ ಕಾಣ ಸಿಕ್ಕಿತು. ನೆರೆದಿದ್ದವರಲ್ಲಿ ಬೆರಗು ಮೂಡಿಸಿತು.
ಭಾರತೀಯ ಡಿಸೈನರ್ ಧ್ರುವ ಕಪೂರ್ ಕೈಚಳಕ
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಫ್ಯಾಷನ್ ವೀಕ್‌ನಲ್ಲಿ ಭಾರತೀಯರು ಪಾಲ್ಗೊಳ್ಳುವುದು ಬಲು ವಿರಳ. ಒಮ್ಮೆ ನಡೆದಾಗ ಒಂದೋ ಎರಡೋ ಡಿಸೈನರ್‌ಗಳು ಮಾತ್ರ ಕಾಣ ಸಿಗುತ್ತಾರೆ. ಈ ಬಾರಿ ಡಿಸೈನರ್ ಧ್ರುವ ಕಪೂರ್ ತಮ್ಮ ಬ್ರಾಂಡ್‌ನ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ವೇರಬಲ್ ಕೆಟಗರಿಯಲ್ಲಿ ಧರಿಸಬಹುದಾದ ನಾನಾ ಬಗೆಯ ಸೀಸನ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್ ವಾಕ್ ಮಾಡಿದರು.
ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು
ಖ್ಯಾತ ಡಾಲ್ಸಿ ಮತ್ತು ಗಬಾನಾ ಬ್ರಾಂಡ್‌ನ ರ್ಯಾಂಪ್ ವಾಕ್‌ನಲ್ಲಿ ಓವರ್‌ಸೈಜ್ ಕೋಟ್, ಶೀರ್ ಶರ್ಟ್, ಗ್ಲಿಟ್ಟರ್ ಗಾರ್ಮೆಂಟ್‌ಗಳು ಕಂಡುಬಂದವು. ಇನ್ನು ಫೆಂಡಿ ಲೆಬೆಲ್‌ನ ಡಿಸೈನರ್ ವಾಕ್‌ನಲ್ಲಿ ಸಿಂಗಲ್ ಶೋಲ್ಡರ್ ಶರ್ಟ್, ಲಾಂಗ್ ಅಸ್ಸೆಮ್ಮಿಟ್ರಿಕಲ್ ಕೋಟ್, ನಿಟ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ವಾಕ್ ಮಾಡಿದರು.
ಜೆಡಬ್ಲ್ಯೂ ಆಂಡೆರ್‌ಸನ್ ಕಲೆಕ್ಷನ್‌ನಲ್ಲಿ ಹುಡುಗರ ಲೆದರ್ ಲಾಂಗ್ ಕೋಟ್ ಹಾಗೂ ವೈಬ್ರೆಂಟ್ ಶೇಡ್‌ನ ಡ್ರೆಸ್, ಶಿಯರ್ಲಿಂಗ್ ಕ್ರಾಪ್ ಜಾಕೆಟ್‌ಗಳು ಕಂಡು ಬಂದವು. ಈ ಕಲೆಕ್ಷನ್‌ನಲ್ಲಿ ನಾನ್ ವೆರಬಲ್ ಡಿಸೈನರ್‌ವೇರ್‌ಗಳು ಬೆರಗು ಮೂಡಿಸಿದವು. ಪ್ರದಾ ಕಲೆಕ್ಷನ್‌ನಲ್ಲಿ ವಿಂಗ್ ಕಾಲರ್ಸ್, ಸೂಟ್ ಜಾಕೆಟ್ಸ್ ಎಲ್ಲರನ್ನು ಸೆಳೆದವು. ಚಾಲ್ರ್ಸ್ ಜೆಫ್ರಿ ಲವರ್ ಬಾಯ್ ಲೆಬೆಲ್‌ನಲ್ಲಿ ಎಂಜಿನ್ ರೂಮ್ ಹೆಸರಿನ ಉಡುಪುಗಳು ಪ್ರದರ್ಶನಗೊಂಡವು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Fashion | ಲಂಗ-ದಾವಣಿ-ಸೀರೆಯ ಟ್ರೆಡಿಷನಲ್ ಲುಕ್‌ನಲ್ಲಿ ಕಂಗೊಳಿಸಿದ ನಟಿಯರು