ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ನಡೆದ ಈ ಸಾಲಿನ ಡ್ಯಾಝ್ಲಿಂಗ್ ಪಜೆಂಟ್ ಆಡಿಷನ್‌ನಲ್ಲಿ ಮಿಸ್, ಮಿಸ್ಟರ್, ಮಿಸೆಸ್ ಹಾಗೂ ಕಿಡ್ಸ್ ಕೆಟಗರಿಯಲ್ಲಿ ಭಾವಿ ಮಾಡೆಲ್‌ಗಳು ಕ್ಯಾಟ್ ವಾಕ್ ಮಾಡಿದರು. ಜತೆಜತೆಗೆ ತಮ್ಮ ಟ್ಯಾಲೆಂಟ್ ಅನ್ನು ಪ್ರದರ್ಶಿಸಿದರು.
ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ನೀಡಲಾಗುವ ಫಂಡ್ ರೈಸಿಂಗ್ ಪಜೆಂಟ್ ಇದಾಗಿದ್ದು, ಮಾಡೆಲಿಂಗ್‌ಗೆ ಎಂಟ್ರಿ ನೀಡಲು ಬಯಸುವವರಿಗೆ ಸದಾವಕಾಶ ಕಲ್ಪಿಸಲಾಗಿತ್ತು.
ಮಕ್ಕಳ ಕ್ಯಾಟ್ ವಾಕ್
ಕೆಲವು ಮಕ್ಕಳು ವಾಕ್ ಮಾಡಿದ ನಂತರ ತಮ್ಮ ಟ್ಯಾಲೆಂಟ್ ತೋರಿಸಲು ಹಾಡು ಹಾಡಿದರೆ, ಮತ್ತೆ ಕೆಲವರು ನೃತ್ಯ ಪ್ರದರ್ಶನ ಮಾಡಿದರು. ಇನ್ನು ಕೆಲವರು ವಿಭಿನ್ನವಾಗಿ ಟ್ಯಾಲೆಂಟ್ ಪ್ರದರ್ಶಿಸಿದರು. ನೋಡುಗರ ಮನ ಸೆಳೆದರು. ಪ್ರತಿ ಮಕ್ಕಳು ಕ್ಯೂಟ್ ಆಗಿ ಕ್ಯಾಟ್‌ವಾಕ್ ಮಾಡಿದ್ದು ಜ್ಯೂರಿ ಸದಸ್ಯರ ಮನ ಗೆದ್ದಿತು.
ಭಾವಿ ಮಿಸ್, ಮಿಸ್ಟರ್‌ಗಳ ಕ್ಯಾಟ್‌ವಾಕ್:
ವಯಸ್ಸಿನ ಭೇದವಿಲ್ಲದೇ ಸ್ಪರ್ಧಿಸಿದ್ದ ಸ್ಪರ್ಧಾಳುಗಳಲ್ಲಿ ಕೆಲವರು ಮಿಸ್ ಹಾಗೂ ಮಿಸ್ಟರ್ ಕೆಟಗರಿಗಾಗಿ ಆಕರ್ಷಕ ಡಿಸೈನರ್‌ವೇರ್‌ನಲ್ಲಿ ಹೆಜ್ಜೆ ಹಾಕಿದರು. ಇನ್ನು ಮಿಸೆಸ್ ಕೆಟಗರಿಯಲ್ಲೂ ಸುಮಾರು ೬೦ ವಯಸ್ಸಿನ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇವರಲ್ಲಿ ಒಂದಿಬ್ಬರು ಮಹಿಳೆಯರು ಸಮಾಜಸೇವೆ ಮಾಡುತ್ತಲೇ ಈ ಕ್ಷೇತ್ರ ಎಂಟ್ರಿಯಾಗಲು ನಿರ್ಧರಿಸಿರುವುದನ್ನು ತಿಳಿಸಿದರು.
ಟೈಟಲ್ ಗೆದ್ದಲ್ಲಿ ಸಮಾಜಸೇವೆಗೆ ಸುಲಭ
ಈಗಾಗಲೇ ಸಮಾಜಸೇವೆ ಮಾಡುತ್ತಿರುವ ಮಹಿಳೆಯರು ಜ್ಯೂರಿ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಅಚ್ಚರಿ ಮೂಡಿಸಿದರು. ಈಗಾಗಲೇ ಸಮಾಜ ಸೇವೆಯಲ್ಲಿ ತಾವು ಬ್ಯುಸಿಯಾಗಿದ್ದು, ಇದರೊಂದಿಗೆ ಸ್ಪರ್ಧೆಯಲ್ಲಿ ವಿಜೇತರಾದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲು ಸುಲಭವಾಗುತ್ತದೆ. ಜನರು ಗುರುತಿಸುತ್ತಾರೆ ಎಂದು ಹೇಳಿದರು.
ಸಮಾಜ ಸೇವಕಿ, ಯೋಗ ಎಕ್ಸ್‌ಪರ್ಟ್ ಮಮತಾ ದೇವರಾಜ್, ಮಾಡೆಲ್ ಪ್ರಿಯಾ, ಸೋಶಿಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಅರುಣ್, ಸ್ನೇಹಾ, ಬಾಲನಟ ಓಂ ಸೇರಿದಂತೆ ಹಲವರು ಜ್ಯೂರಿ ತಂಡದಲ್ಲಿದ್ದರು. ಇನ್ನು ಸಂಸ್ಥೆಯ ರಜನಿ ಸಂತೋಷ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶುಭಾ ರಾಜಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Winter Fashion | ಲಂಡನ್‌ನಲ್ಲಿ ಕರೀನಾ-ಕರೀಷ್ಮಾ ಕಪೂರ್ ವಿಂಟರ್ ಫ್ಯಾಷನ್ ಮಂತ್ರ