Site icon Vistara News

Fashion Resolution | ಹೊಸ ವರ್ಷಕ್ಕೆ ಅಳವಡಿಸಿಕೊಳ್ಳಬೇಕಾದ ಫ್ಯಾಷನ್‌ಗೆ ಸಂಬಂಧಿಸಿದ 5 ರೆಸೊಲ್ಯೂಶನ್ಸ್

Fashion Resolution

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೊಸ ವರ್ಷಕ್ಕೆ ನಿಮ್ಮ ಜೀವನಶೈಲಿಗೆ ಸಂಬಂಧಿಸಿದ ರೆಸೊಲ್ಯೂಶನ್‌ ಮಾಡಿದರೆ ಸಾಲದು ! ಅದರೊಂದಿಗೆ ಫ್ಯಾಷನ್‌ಗೆ ಸಂಬಂಧಿಸಿದ ೫ ಪ್ರಮುಖ ರೆಸೊಲ್ಯೂಶನ್‌ಗಳನ್ನು ಅಳವಡಿಸಿಕೊಂಡು ಫಾಲೋ ಮಾಡಿ. ಪ್ರತಿನಿತ್ಯದ ಜೀವನದಲ್ಲಿ ಬದಲಾವಣೆ ಗಮನಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

೧. ಪರಿಸರ ಸ್ನೇಹಿ ಫ್ಯಾಷನ್‌ ಉಡುಪು -ಆಕ್ಸೆಸರೀಸ್‌ ಬಳಸಿ

ಈ ವರ್ಷದಿಂದ ಆದಷ್ಟೂ ಪರಿಸರ ಸ್ನೇಹಿ ಉಡುಪುಗಳನ್ನು ಖರೀದಿಸಿ ಹಾಗೂ ಬಳಸಿ. ಇದೀಗ ಸಾಕಷ್ಟು ಬ್ರಾಂಡ್‌ಗಳು ಇಕೋ ಫ್ರೆಂಡ್ಲಿಯಾಗಿವೆ. ಅಂತಹವನ್ನು ಆಯ್ಕೆ ಮಾಡಿ ಖರೀದಿಸಿ. ಅಷ್ಟ್ಯಾಕೆ! ಸ್ಥಳೀಯ ಸಾಕಷ್ಟು ಕಾಟನ್‌ ಬ್ರಾಂಡ್‌ಗಳಿವೆ. ಅಂತಹ ಉಡುಪುಗಳನ್ನು ಖರೀದಿಸುವುದನ್ನು ರೂಢಿ ಮಾಡಿಕೊಳ್ಳಿ. ನಿಮ್ಮ ಫ್ಯಾಷನ್‌ ಎಕೋ ಫ್ರೆಂಡ್ಲಿಯಾಗಿ ಬದಲಿಸಿಕೊಳ್ಳಿ.

೨. ದೇಸಿ ಫ್ಯಾಷನ್‌ಗೂ ಆದ್ಯತೆ ನೀಡಿ

ನೀವು ಬಳಸುವ ಫ್ಯಾಷನ್‌ವೇರ್‌ಗಳಲ್ಲಿ ಹೆಚ್ಚಿಗೆ ದೇಸಿ ಫ್ಯಾಷನ್‌ಗೆ ಆದ್ಯತೆ ನೀಡಿ. ವಿದೇಶಿ ಬ್ರಾಂಡ್‌ಗಳಿಗಿಂತ ದೇಸಿ ಫ್ಯಾಷನ್‌ವೇರ್‌ಗಳಿಗೆ ಹೆಚ್ಚಿನ ಸ್ಥಾನ ನಿಮ್ಮ ವಾರ್ಡ್​ರೋಬ್​ನಲ್ಲಿ ನೀಡಿ. ಇದು ನಮ್ಮತನ ಹಾಗೂ ಸಂಸ್ಕೃತಿಯನ್ನು ಬೆಳೆಸಿದಂತಾಗುವುದು ಎಂಬುದನ್ನು ಮರೆಯದಿರಿ.

೩. ಸ್ಥಳೀಯ ಫ್ಯಾಷನ್‌ ಉದ್ದಿಮೆಯನ್ನು ಪ್ರೋತ್ಸಾಹಿಸಿ

ಆದಷ್ಟೂ ವಿದೇಶಿ ಬ್ರಾಂಡ್‌ಗಳಿಗಿಂತ ನಮ್ಮ ರಾಷ್ಟ್ರದಲ್ಲಿ ಲೆಕ್ಕವಿಲ್ಲದಷ್ಟು ಚಿಕ್ಕ-ಪುಟ್ಟ ಲೋಕಲ್‌ ಬ್ರಾಂಡ್‌ಗಳಿವೆ. ಅವುಗಳು ಸಿದ್ಧಪಡಿಸುವಂತಹ ಉಡುಪು ಹಾಗೂ ಸೀರೆಗಳಿಗೆ ಆದ್ಯತೆ ನೀಡಿ. ಅವುಗಳನ್ನು ಪ್ರೋತ್ಸಾಹಿಸಿದಂತಾಗುವುದು. ಈ ಕ್ಷೇತ್ರ ಅಭಿವೃದ್ಧಿಯಾಗುವುದು.

೪. ಉಡುಪುಗಳ ಖರೀದಿ ಬಾಕರಾಗದಿರಿ

ಕಂಡ ಕಂಡಲ್ಲೆಲ್ಲಾ ಉಡುಪುಗಳನ್ನು ಖರೀದಿಸುವ ರೂಢಿಯನ್ನು ಬಿಡಿ. ಮೊದಲು ನಿಮ್ಮ ವಾರ್ಡ್​ರೋಬ್​ನಲ್ಲಿರುವ ಎಲ್ಲಾ ಉಡುಪುಗಳು ಬಳಕೆಯಾಗುತ್ತಿವೆಯೇ ಎಂಬುದನ್ನು ಗಮನಿಸಿ. ಇಲ್ಲವಾದಲ್ಲಿ ಬಳಸಿ. ತೀರಾ ಅಗತ್ಯವಿದ್ದಲ್ಲಿ ಮಾತ್ರ ಒಂದರ ಮೇಲೊಂದರಂತೆ ಉಡುಪುಗಳನ್ನು ಖರೀದಿಸಿ. ಸುಮ್ಮನೆ ವಾರ್ಡ್ರೋಬ್‌ ತುಂಬಿಕೊಳ್ಳಲು ಖರೀದಿಸಬೇಡಿ.

೫. ಉಡುಪುಗಳ ಮರುಬಳಕೆ ಮಾಡಿ

ಉಡುಪುಗಳು ಹಳೆ ಡಿಸೈನ್‌ ಆಗಿದೆ ಎಂದೆಲ್ಲಾ ಮೂಲೆಗೆ ತುರುಕಬೇಡಿ. ಬದಲಿಗೆ ಅವಕ್ಕೆ ನಿಮ್ಮ ಕ್ರಿಯೆಟಿವಿಟಿ ಬಳಸಿ ಹೊಸ ರೂಪ ನೀಡಿ. ಸೀಸನ್‌ಗೆ ತಕ್ಕಂತೆ ಮಿಕ್ಸ್ ಮ್ಯಾಚ್‌ ಮಾಡಿ ಹೊಸ ರೂಪ ನೀಡಿ. ಆದಷ್ಟೂ ಮರು ಬಳಕೆ ಮಾಡಿ. ಇಲ್ಲವಾದಲ್ಲಿ ಅಗತ್ಯವಿರುವವರಿಗೆ ಕೊಟ್ಟು ಬಿಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Jacket Saree Fashion | ಚಳಿಗಾಲದಲ್ಲಿ ಟ್ರೆಂಡಿಯಾದ ಜಾಕೆಟ್‌ ಸೀರೆ ಫ್ಯಾಷನ್‌

Exit mobile version