ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಅತ್ಯಾಕರ್ಷಕವಾದ ಸಿಂಪಲ್ ಹಾಗೂ ಡಿಸೆಂಟ್ ಉಡುಪುಗಳು ಈ ರ್ಯಾಂಪ್‌ನ ಮೆರಗು ಹೆಚ್ಚಿಸಿದ್ದವು. ಎಲಿಗೆಂಟ್ ಲುಕ್ ನೀಡುವ ಹ್ಯಾಂಡ್‌ಲೂಮ್ ಸೀರೆ ಹಾಗೂ ಡಿಸೈನರ್‌ವೇರ್ ಧರಿಸಿದ ಮಾಡೆಲ್‌ಗಳು ಹೆಜ್ಜೆ ಹಾಕುತ್ತಿದ್ದರೇ, ಪ್ರೇಕ್ಷಕರು ಕಣ್ಣರಳಿಸಿ ನೋಡುತ್ತಿದ್ದರು.
ಖಾದಿ, ಕಾಟನ್ ಹಾಗೂ ಕೈ ಮಗ್ಗದಿಂದ ಸಿದ್ಧಪಡಿಸಿದ ಹ್ಯಾಂಡ್‌ಲೂಮ್ ಸೀರೆ ಹಾಗೂ ಡಿಸೈನರ್‌ವೇರ್‌ಗಳು ಒಂದಕ್ಕಿಂತ ಒಂದು ಡಿಸೆಂಟ್ ಲುಕ್ ನೀಡಿದ್ದವು. ಗ್ಲಾಮರ್‌ರಹಿತ ಶೋ ಇದಾಗಿತ್ತು ಎಂದರೆ ಅತಿಶಯೋಕ್ತಿಯಾಗದು. ಆದರೆ, ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಶೋ ಯಶಸ್ವಿಯಾಗಿತ್ತು.
ಅಂದಹಾಗೆ, ಇದು ನಡೆದದ್ದು ಉದ್ಯಾನನಗರಿಯ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್) ಕ್ಯಾಂಪಸ್‌ನಲ್ಲಿ. ಹ್ಯಾಂಡ್‌ಲೂಮ್‌ನಿಂದ ಸಿದ್ಧಪಡಿಸಲಾದ ಉತ್ಸನ್ನಗಳ ಪ್ರದರ್ಶನ ಅದರೊಂದಿಗೆ ಸೀರೆ ಹಾಗೂ ಮೆನ್ಸ್ ಡಿಸೈನರ್‌ವೇರ್‌ಗಳು ಸೇರಿದಂತೆ ನಾನಾ ವಿನ್ಯಾಸದ ಉಡುಪುಗಳನ್ನುಈ ಫ್ಯಾಷನ್ ಶೋನಲ್ಲಿ ಪ್ರದರ್ಶಿಸಲಾಯಿತು.
ಗ್ಲಾಮರ್‌ರಹಿತ ಫ್ಯಾಷನ್ ಶೋ
ಸ್ಟ್ರೈಪ್ಸ್, ಚೆಕ್ಸ್, ಡಬ್ಬಲ್ ಶೇಡ್, ಮಲ್ಟಿಪಲ್ ಬಾರ್ಡರ್, ಪೋಲ್ಕಾ ಡಾಟ್ಸ್, ಸಿಲ್ಕ್ ಮಿಕ್ಸ್‌ನ ಹ್ಯಾಂಡ್‌ಲೂಮ್ ಸೀರೆಗಳನ್ನು ಉಟ್ಟು ಮಾಡೆಲ್‌ಗಳು ಹೆಜ್ಜೆ ಹಾಕಿದರು. ಇನ್ನು ಮೆನ್ಸ್ ರೌಂಡ್‌ನಲ್ಲಿ ಹ್ಯಾಂಡ್‌ಲೂಮ್‌ನಲ್ಲಿ ಸಿದ್ಧಪಡಿಸಿದ ಪರಿಸರ ಸ್ನೇಹಿ ಪಂಚೆ, ಧೋತಿ ಹಾಗೂ ಶಲ್ಯ-ಶಾಲುಗಳನ್ನು ಧರಿಸಿ ಹೆಜ್ಜೆ ಹಾಕಿದರು.
ಕಲಾತ್ಮಕವಾಗಿ ಸಿದ್ಧಪಡಿಸಲಾದ ನಡೆದ ಫ್ಯಾಷನ್ ಶೋನಲ್ಲಿ ಹ್ಯಾಂಡ್‌ಮೇಡ್ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಒಟ್ಟಾರೆ, ಯಾವುದೇ ಎಕ್ಸ್‌ಪೋಸ್‌ಗೆ ಅವಕಾಶವಿಲ್ಲದ ಗ್ಲಾಮರ್‌ರಹಿತ ವಾದ ಫ್ಯಾಷನ್ ಶೋ ಇದಾಗಿತ್ತು.
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪರವರು ಸೇರಿದಂತೆ ಕ್ಷೇತ್ರದ ಗಣ್ಯರು, ಡಿಸೈನರ್‌ಗಳು, ಮಾಡೆಲ್‌ಗಳು ಹಾಗೂ ನಿಫ್ಟ್ನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಫ್ಟ್ ಕ್ಯಾಂಪಸ್‌ನಲ್ಲಿ ಫ್ಯಾಷನ್ ಶೋ ಮಾತ್ರವಲ್ಲ, ಇದರೊಂದಿಗೆ ಹ್ಯಾಂಡ್‌ಲೂಮ್ ಹಾಗೂ ದೇಸಿ ಕಲಾವಿದರನ್ನು ಉತ್ತೇಜಿಸುವ ಸಲುವಾಗಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ವಸ್ತುಪ್ರದರ್ಶನವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Show : ಚೆಂದುಳ್ಳಿ ಚೆಲುವೆಯರ ಫ್ಯಾಷನ್ ಮಾಯೆ