ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಯಂಗ್ ಲುಕ್ ನೀಡುವ ವ್ರಾಪ್ ಹೆಡ್‌ಬ್ಯಾಂಡ್‌ಗಳು ಇಂದು ಟ್ರೆಂಡಿಯಾಗಿವೆ. ಜತೆಗೆ ಫಂಕಿ ಲುಕ್ ನೀಡುವ ಇವು ಲೆಕ್ಕವಿಲ್ಲದಷ್ಟು ಪ್ರಿಂಟ್ಸ್ ಹಾಗೂ ಕ್ಲಾತ್‌ನಲ್ಲಿ ದೊರೆಯುತ್ತಿವೆ.
ಸಾಮಾನ್ಯ ಹೆಡ್‌ಬ್ಯಾಂಡ್‌ಗಳಿಗಿಂತ ಡಿಫರೆಂಟ್ ಲುಕ್ ನೀಡುವ ಇವನ್ನು ಲೈಲಾಕ್, ಜಾರ್ಜೆಟ್, ಕ್ರೇಪ್, ಸಿಲ್ಕ್‌ನಂತಹ ಫ್ಯಾಬ್ರಿಕ್‌ನಲ್ಲಿ ಸುತ್ತಲಾಗಿರುತ್ತದೆ. ಫೈಬರ್ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿರುವ ಹೆಡ್‌ಬ್ಯಾಂಡ್‌ಗಳ ಮೇಲೆ ವ್ರಾಪ್ ಮಾಡಲಾಗಿರುತ್ತದೆ. ಹಾಗಾಗಿ ಇವನ್ನು ವ್ರಾಪ್ ಹೆಡ್‌ಬ್ಯಾಂಡ್ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮ್ಯಾಚಿಂಗ್ ವ್ರಾಪ್ ಹೆಡ್‌ಬ್ಯಾಂಡ್ಸ್
ವ್ರಾಪ್ ಹೆಡ್‌ಬ್ಯಾಂಡ್‌ಗಳು, ಮ್ಯಾಚಿಂಗ್ ಹೆಡ್‌ಬ್ಯಾಂಡ್‌ಗಳು ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೆ, ಇವು ನಾನಾ ಪ್ರಿಂಟ್ಸ್ ಹಾಗೂ ಕಲರ್‌ನ ಫ್ಯಾಬ್ರಿಕ್‌ನಲ್ಲಿ ಮಾಡಲ್ಪಟ್ಟಿರುತ್ತವೆ. ಹಾಗಾಗಿ ಧರಿಸುವ ಉಡುಪುಗಳಿಗೆ ಮ್ಯಾಚಿಂಗ್ ಧರಿಸಬಹುದು.
ಸಾದಾ ವ್ರಾಪ್ ಹೆಡ್‌ಬ್ಯಾಂಡ್ಸ್
ಸಾದಾ ಕ್ಲಾತ್ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಲಾಗುವ ಈ ವ್ರಾಪ್ ಹೆಡ್‌ಬ್ಯಾಂಡ್‌ಗಳು ಸಿಂಪಲ್ ಲುಕ್ ನೀಡುತ್ತವೆ. ಅಲ್ಲದೇ ಯಾವುದೇ ಕ್ಯಾಶುವಲ್ ಔಟಿಂಗ್ ಹಾಗೂ ದಿನನಿತ್ಯದ ಯಾವುದೇ ಸಂದರ್ಭಕ್ಕೂ ಧರಿಸಬಹುದು. ಲೆಕ್ಕವಿಲ್ಲದಷ್ಟು ಬಣ್ಣಗಳಲ್ಲಿ ಇವು ಲಭ್ಯ.
ಪ್ರಿಂಟೆಡ್ ವ್ರಾಪ್ ಹೆಡ್‌ಬ್ಯಾಂಡ್ಸ್
ಟ್ರಾಪಿಕಲ್, ಫ್ಲೋರಲ್, ಅನಿಮಲ್ಸ್ ಹಾಗೂ ಜೆಮೆಟ್ರಿಕಲ್ ಪ್ರಿಂಟ್ಸ್ ಇರುವಂತಹ ಕ್ಲಾತ್ ಮೆಟಿರಿಯಲ್‌ನಿಂದ ಸಿದ್ಧಪಡಿಸಲಾಗಿರುವ ಈ ಹೆಡ್‌ಬ್ಯಾಂಡ್‌ಗಳು ಫಂಕಿ ಲುಕ್ ನೀಡುವುದು ಗ್ಯಾರಂಟಿ. ಅಲ್ಲದೇ ಇವು ಪಕ್ಕಾ ಔಟಿಂಗ್ ಹಾಲಿಡೇ ಫ್ಯಾಷನ್‌ಗೆಮ್ಯಾಚ್ ಆಗುತ್ತವೆ. ನೋಡಲು ಯಂಗ್ ಲುಕ್ ನೀಡುತ್ತವೆ. ಮಕ್ಕಳು ಮಾತ್ರವಲ್ಲ ಎಲ್ಲಾ ವಯೋಮಾನದ ಹೆಣ್ಣುಮಕ್ಕಳು ಧರಿಸಬಹುದಾಗಿದ್ದು ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವ್ರಾಪ್ ಹೆಡ್‌ಬ್ಯಾಂಡ್ ಪ್ರಿಯರಿಗೆ ಟಿಪ್ಸ್
· ಫಂಕಿ ಲುಕ್‌ಗಾಗಿ ವ್ರಾಪ್ ಹೆಡ್‌ಬ್ಯಾಂಡ್ ಧರಿಸಬಹುದು.
· ಪ್ರಿಂಟೆಡ್ ಹಾಗೂ ಕಾಮನ್ ಕಲರ್‌ನದ್ದು ಯಾವುದೇ ಉಡುಪಿಗಾದರೂ ಧರಿಸಬಹುದು.
· ಫುಟ್‌ವೇರ್‌ಗೂ ಮ್ಯಾಚ್ ಆಗಬೇಕು.
· ಧರಿಸುವ ಉಡುಪು ಆದಷ್ಟೂ ಕ್ಯಾಶುವಲ್ ಆಗಿರಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Trend | ಅಸೆಮ್ಮಿಟ್ರಿಕಲ್ ಡ್ರೆಸ್ ಹಂಗಾಮಾ