ಫಾಸ್ಟ್ ಫುಡ್ ಬಗ್ಗೆ ನಿಮಗೆ ಗೊತ್ತೇ ಇದೆ. ಸ್ಲೋ ಫುಡ್ ಬಗ್ಗೆ ಗೊತ್ತೇ? ಇಲ್ಲವಾದರೆ ಹೆಚ್ಚು ತಿಳಿದುಕೊಳ್ಳಲು ಇದು ಸುಸಮಯ. ಫಾಸ್ಟ್ ಫುಡ್‌ನಿಂದ ಸ್ಲೋ ಫುಡ್‌ನತ್ತ ಬದಲಾಯಿಸಲೂ ಇದು ಸಕಾಲ.
ಇಂದಿನ ಜೀವನದ ಅತಿ ವೇಗವಾಗಿದೆ. ಸಾಮಾನ್ಯ ಆಹಾರಕ್ಕಿಂತ ಮೊದಲೇ ಬೇಯಿಸಿದ ಅಥವಾ ಕಡಿಮೆ ಸಮಯದಲ್ಲಿ ಬೇಯಿಸಬಹುದಾದ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚು. ಇದೇ ʼಫಾಸ್ಟ್ ಫುಡ್ʼ ಮೂಲ.
ಸಾಮಾನ್ಯ ಆಹಾರಕ್ಕಿಂತ ಹೆಚ್ಚು ರುಚಿ ನೀಡುವ ಆಹಾರ ಪದಾರ್ಥಗಳು ಗಬಗಬನೆ ತಿಂದು ಮುಗಿಸಲು ಅನುಕೂಲಕರ. ಇವು ಹೆಚ್ಚು ಲವಣಗಳು, ಸಕ್ಕರೆ, ಫೈಬರ್ ಮತ್ತು ಹೆಚ್ಚು ಮಸಾಲೆಗಳನ್ನು ಹೊಂದಿರುತ್ತವೆ.
ನಾವು ದಿನನಿತ್ಯ ಹಲವಾರು ರೀತಿಯ ಪಾಸ್ಟ್ ಪುಡ್ ತಿನ್ನುತ್ತೇವೆ. ʼಫಾಸ್ಟ್ ಫುಡ್ʼ ಅಂದಾಗ ಪಿಜ್ಜಾ, ಮ್ಯಾಗಿ, ಬರ್ಗರ್, ಪಾನಿಪುರಿ, ಸೇವ್‌ಪುರಿ, ನೂಡಲ್ಸ್, ಗೋಬಿ ಮಂಚೂರಿ, ಸೂಪ್, ಚಿಪ್ಸ್, ಪಾಪ್‌ಕಾರ್ನ್, ಹಾಟ್‌ಡಾಗ್, ಫ್ರೆಂಚ್‌ಪ್ರೈಸ್, ಚಾಕಲೇಟ್, ಕ್ಯಾಂಡೀಸ್, ಸಮೊಸಾ, ಮೊಮೊಸ್, ದಹಿಪುರಿ, ಸ್ಯಾಂಡ್‌ವಿಚ್, ಕೇಕ್, ಕಟ್ಲೆಟ್, ಪಾಸ್ತಾ, ಕಚೋರಿ ನಮ್ಮ ಗಮನಕ್ಕೆ ಬಂದೇ ಬರುತ್ತವೆ.
ʼಫಾಸ್ಟ್ ಫುಡ್ʼ ನಾಲಿಗೆಗೆ ರುಚಿಕರವಾಗಿರುವುದು ನಿಜ. ಆದರೆ ನಮ್ಮ ದೇಹಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಕೊಡುವುದು ಖಂಡಿತವಾಗಿಯೂ ಸುಲಭವಲ್ಲ.
ಪೌಷ್ಟಿಕಾಂಶದ ವಿಷಯದಲ್ಲಿ ʼಫಾಸ್ಟ್ ಫುಡ್ʼ ಆಹಾರ ಅನಾರೋಗ್ಯಕರವಾದ ವಿವಿಧ ಪದಾರ್ಥಗಳನ್ನು ಹೊಂದಿರುತ್ತದೆ. ಇದು ಸಕ್ಕರೆ, ಉಪ್ಪು, ಸ್ಯಾಚುರೇಟೆಡ್ ಅಥವಾ ಟ್ರಾನ್ಸ್ ಕೊಬ್ಬುಗಳು, ಅನೇಕ ಸಂಸ್ಕರಿಸಿದ ಪದಾರ್ಥಗಳು, ಸೇರಿಸಿದ ಪ್ರಿಸರ್ವೇಟಿವ್‌ಗಳು ಅಧಿಕವಾಗಿರುತ್ತವೆ.
ಇದರಲ್ಲಿ ಕೆಲವು ಪ್ರಯೋಜನಕಾರಿ ಪೋಷಕಾಂಶಗಳ ಕೊರತೆಯೂ ಇರುತ್ತದೆ ಮತ್ತು ಈ ಆಹಾರವು ಕ್ಯಾಲೋರಿಗಳು, ಸೋಡಿಯಂ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುತ್ತದೆ.
ಇದರಿಂದ ತಪ್ಪಿಸಿಕೊಳ್ಳಲು ʼಸ್ಲೋ ಫುಡ್ʼ ಮೊರೆ ಹೋಗುವುದೊಂದೇ ದಾರಿ. ಇದು ಬೇರೇನೂ ಅಲ್ಲ. ನಮ್ಮಲ್ಲಿ ತಲೆ ತಲಾಂತರದಿಂದ ಜಾರಿಯಲ್ಲಿ ಇರುವುದೇ ಆಗಿದೆ.
ಸ್ಲೋ ಫುಡ್ ಎಂಬುದು ಒಂದು ರೀತಿಯಲ್ಲಿ ಆಹಾರದ ಆಂದೋಲನ. ಪರಿಸರ ಅಥವಾ ದೇಹದ ಆರೋಗ್ಯಕ್ಕೆ ಹಾನಿಯಾಗದಂತೆ ಉತ್ತಮ ರುಚಿಯನ್ನು ಹೊಂದಿರುವ, ಶುದ್ಧ, ಸ್ಥಳೀಯವಾಗಿ ತಯಾರಿಸಿದ ಆಹಾರವಿದು. ಸಾಂಪ್ರದಾಯಿಕ ಅಡುಗೆ ವಿಧಾನಗಳು ಮತ್ತು ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.
ಹಾಗಾದರೆ ʼಸ್ಲೋ ಪುಡ್ʼಗಳು ಯಾವವು?
ತರಕಾರಿಗಳು, ಹಣ್ಣುಗಳು, ಕಿರುಧಾನ್ಯಗಳ ಬ್ರೆಡ್, ಧಾನ್ಯಗಳು, ಹಾಲು, ಬೆಣ್ಣೆ, ಮೊಸರು, ತುಪ್ಪ, ರೆಡ್‌ಮೀಟ್ ಅಲ್ಲದ ಮಾಂಸ, ಪ್ರೊಟೀನ್ ಸಾಕಷ್ಟು ಹೊಂದಿರುವ ಇತರ ಆಹಾರಗಳು.
ʼಸ್ಲೋ ಪುಡ್ʼಗಳನ್ನು ಸಾಮಾನ್ಯವಾಗಿ ಮನೆಯಲ್ಲಿಯೆ ತಯಾರಿಸಿರುತ್ತಾರೆ. ಯಾವುದೇ ಕೆಮಿಕಲ್ ಬಳಸದೆ ಮಾಡುತ್ತಾರೆ. ಇವುಗಳಿಂದ ಆರೋಗ್ಯಕ್ಕೆ ಹಾನಿ ಇರುವುದಿಲ್ಲ.
ಯಾವುದು ಬೇಕೋ ನಿರ್ಧರಿಸಿ
ʼಫಾಸ್ಟ್ ಫುಡ್ʼ ಗಳನ್ನು ಹೆಚ್ಚಿನದಾಗಿ ರಸ್ತೆ ಬದಿ ಅಂಗಡಿಗಳಲ್ಲಿ, ಹೆಚ್ಚು ಹೆಚ್ಚು ಲವಣ ಬಳಸಿ ಮಾಡಿ ಮಾರುತ್ತಾರೆ. ಲವಣ, ಕೊಬ್ಬಿನ ಅಂಶಗಳ ಪ್ರಮಾಣ ಹೆಚ್ಚಿರುವುದರಿಂದ ಇವು ದೇಹಕ್ಕೆ ಕೆಡುಕನ್ನು ಉಂಟುಮಾಡುತ್ತವೆ. ಬೊಜ್ಜು ಬರುವುದು ಇದರ ಅತಿ ಹಾನಿಕರ ಸಂಗತಿ.
ಬಾಯಿ ಚಪಲ ತೀರಿಸಿಕೊಳ್ಳಲು ಇಂತಹ ಲವಣಯುಕ್ತ ತಿನಿಸುಗಳನ್ನು ದಿನೇದಿನೆ ತಿನ್ನುತ್ತಾ ಇದ್ದರೆ ಅನಾರೋಗ್ಯ ಉಂಟಾಗುವುದು ಖಚಿತ. ಆದ್ದರಿಂದ ಶುದ್ಧವಾದ, ಆರೋಗ್ಯಕರ, ಮನೆಯಲ್ಲಿಯೇ ಮಾಡಿದ ʼಸ್ಲೋ ಪುಡ್ʼಗಳನ್ನು ತಿನ್ನುವುದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಇದರಿಂದ ಆರೋಗ್ಯ ಹದಗೆಡುವುದಿಲ್ಲ.
ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…