ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬದ ನಂತರ ಮೇಕಪ್‌ರಹಿತ ವದನದ ರಿಲ್ಯಾಕ್ಸೇಷನ್ ಅತ್ಯಗತ್ಯ. ಇದು ತ್ವಚೆಯ ಸೌಂದರ್ಯ ಮರು ಪಡೆಯಲು ಸಹಕರಿಸುತ್ತದೆ. ಅಲ್ಲದೇ, ಚರ್ಮಕ್ಕೆ ಉಸಿರಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ ಭಾನಸುಧೆ.
ಅಂದಹಾಗೆ, ಬಹುತೇಕರು ದೀಪಾವಳಿಯನ್ನು ವಾರಗಟ್ಟಲೇ ಆಚರಿಸುತ್ತಾರೆ. ಮಹಿಳೆಯರು ಪಾರ್ಟಿ, ಸೆಲೆಬ್ರೇಷನ್ ಎಂದೆಲ್ಲಾ ಪ್ರತಿನಿತ್ಯ ಗ್ರ್ಯಾಂಡ್ ಮೇಕಪ್ ಮಾಡುತ್ತಾರೆ, ಪರಿಣಾಮವಾಗಿ ತ್ವಚೆಯು ಕಂಪ್ಲೀಟ್ ಮೇಕಪ್‌ನಿಂದಲೇ ಆವೃತವಾಗಿರುತ್ತದೆ. ಇದು ತ್ವಚೆಯ ಸಮಸ್ಯೆಗೆ ಎಡೆ ಮಾಡಿಕೊಡಬಹುದು. ಇಲ್ಲವೇ ಮುಖವು ಡ್ರೈ ಆಗಿ, ಡಲ್ ಆಗಲು ಕಾರಣವಾಗಬಹುದು. ಹಾಗಾಗಿ ಹಬ್ಬದ ನಂತರದ ಕೆಲವು ದಿನಗಳು ತ್ವಚೆಯನ್ನು ಮೇಕಪ್‌ರಹಿತವಾಗಿಸಬೇಕು. ಸೂಕ್ತ ಆರೈಕೆ ಮಾಡಿ, ಬ್ರೀತ್ ಮಾಡಲು ಅನುವು ಮಾಡಿಕೊಡಬೇಕು ಎನ್ನುತ್ತಾರವರು.
ಮನೆಯಲ್ಲೆ ಕ್ಲೆನ್ಸಿಂಗ್ ಮಾಡಿ
ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಮೇಲಿನ ಜಿಡ್ಡಿನ ಅಂಶ, ಡೆಡ್ ಸೆಲ್ಸ್, ಧೂಳು ಇಲ್ಲವೇ ಮೇಕಪ್‌ನ ಯಾವುದೇ ಕಣಗಳು ಉಳಿದಿದ್ದಲ್ಲಿ ಅದನ್ನು ಸುಲಭವಾಗಿ ತೆಗೆಯಬಹುದು. ಚರ್ಮದ ಮೇಲಿನ ರಂಧ್ರಗಳನ್ನು ಇದು ಕ್ಲಿಯರ್ ಮಾಡುತ್ತದೆ. ಮೊಡವೆಗಳು ಆಗದಂತೆ ತ್ವಚೆಯನ್ನು ಶುದ್ಧವಾಗಿರಿಸುತ್ತದೆ.
ಹರ್ಬಲ್ ಮಸಾಜ್ ಮಾಡಿ
ಮುಖಕ್ಕೆ ಹರ್ಬಲ್ ಸ್ಕ್ರಬ್ಬಿಂಗ್ ಮಾಡುವುದರಿಂದಲೂ ಮುಖದ ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಮನೆಯಲ್ಲೆ ಲಭ್ಯವಿರುವ ಓಟ್‌ಮಿಲ್, ಬೇಕಿಂಗ್ ಸೋಡಾ, ಕಾಫಿ ಪುಡಿ, ಸಕ್ಕರೆ ಹೀಗೆ ಪುಡಿಯಂತಿರುವ ಸಾಮಗ್ರಿಗಳಿಂದ ತ್ವಚೆಯ ಮೇಲೆ ಲೈಟಾಗಿ ಮಸಾಜ್ ಮಾಡಬಹುದು. ಇದು ಹಿಟ್ಟಿನಂತಿರಬಾರದು ಅಷ್ಟೇ! ಈ ರೀತಿ ಮಾಡುವುದರಿಂದ ಮುಖದ ಮೇಲ್ಮೈ ಪದರ ಕ್ಲೀನಾಗುತ್ತದೆ. ಡೆಡ್ ಸೆಲ್‌ಗಳು ಮಾಯವಾಗುತ್ತವೆ. ಇದನ್ನು ಎಕ್ಸ್‌ಫೋಲೈಟ್ ಎನ್ನಲಾಗುತ್ತದೆ.
ಮಾಯಿಶ್ಚರೈಸರ್ ಲೇಪಿಸಿ
ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ತ್ವಚೆಗೆ ಮ್ಯಾಚ್ ಆಗುವಂತಹ ಮಾಯಿಶ್ಚರೈಸರ್ ಹಚ್ಚಿ. ಹಬ್ಬದ ಸಮಯದಲ್ಲಿ ಹೆವಿ ಮೇಕಪ್ ಮಾಡಿ, ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಇದು ರೀ ಹೈಡ್ರೇಟ್ ಮಾಡುತ್ತದೆ.
ಗ್ಲೋಯಿಂಗ್ ಮಾಸ್ಕ್ ಬಳಸಿ
ನಿಮ್ಮ ಮುಖಕ್ಕೆ ಹಬ್ಬದ ಸಮಯದಲ್ಲಿ ಮೇಕಪ್ ಹಚ್ಚಿ ಡಲ್ ಆಗಿದ್ದಲ್ಲಿ ವಧನಕ್ಕೆ ಗ್ಲೋಯಿಂಗ್ ಮಾಸ್ಕ್‌ಗಳನ್ನು ಬಳಸಿ. ಉದಾಹರಣೆಗೆ, ಮುಖವನ್ನು ಶೈನಿಂಗ್ ಆಗಿಸುವ ಕಡ್ಲೆ ಹಿಟ್ಟಿನ ಮಾಸ್ಕ್, ಅವಾಕಾಡೋ, ಗ್ರೀನ್ ಟೀ ಇಲ್ಲವೇ ಯೋಗರ್ಟ್ ಮಾಸ್ಕ್‌ಗಳನ್ನು ಬಳಸಬಹುದು. ಮುಖಕ್ಕೆ ಹಚ್ಚಿದ ೨೦ ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ತಕ್ಷಣ ಮುಖಕ್ಕೆ ಸಾಬೂನು ಬಳಸಬಾರದು.
ಈ ಮೇಲಿನ ಒಂದಿಷ್ಟು ಸಿಂಪಲ್ ಆರೈಕೆ ಮಾಡಿದಲ್ಲಿ ನಿಮ್ಮ ಮುಖ ಮೊದಲಿನಂತೆ ಕಾಂತಿಯುಕ್ತವಾಗುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ