Site icon Vistara News

Festive Fashion: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್‌ ಲೆಹೆಂಗಾ ಎಂಟ್ರಿ

Festive Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೆಚ್ಚಿಸಲು ಟ್ರೆಡಿಷನಲ್‌ ಲುಕ್‌ ನೀಡುವ ಲೆಹೆಂಗಾಗಳು ಎಂಟ್ರಿ ನೀಡಿವೆ. ಈ ಹಿಂದೆ ನಾರ್ತ್‌ ಇಂಡಿಯನ್‌ ಲುಕ್‌ನಲ್ಲಿ ಬಿಡುಗಡೆಯಾಗುತ್ತಿದ್ದ ಲೆಹೆಂಗಾಗಳಿಗೆ ಇದೀಗ ನಮ್ಮ ಸಂಸ್ಕೃತಿಗೆ ಹೊಂದುವಂತಹ ಸಾಂಪ್ರದಾಯಿಕ ಟಚ್‌ ಸಿಕ್ಕಿದೆ.

ಬ್ಲೌಸ್‌ಗೆ ಜುವೆಲ್‌ ಡಿಸೈನ್‌, ಲೆಹೆಂಗಾಗೆ ಹ್ಯಾಂಡ್‌ ಎಂಬ್ರಾಯ್ಡರಿ, ಬೀಡ್ಸ್‌ ಟಸೆಲ್ಸ್‌, ರೇಶಮ್‌ ಎಂಬ್ರಾಯ್ಡರಿ ಹೀಗೆ ಸ್ಥಳಿಯ ವಿನ್ಯಾಸ ಮಿಕ್ಸ್‌ ಮ್ಯಾಚ್‌ ಆಗಿವೆ. ಲೈಟ್‌ ಪಾಸ್ಟೆಲ್‌ ಶೆಡ್ಸ್‌ನಿಂದಿಡಿದು ಟ್ರೆಡಿಷನಲ್‌ ವೈಬ್ರೆಂಟ್‌ ಕಲರ್‌ನ ಲೆಹೆಂಗಾಗಳು ಫೆಸ್ಟಿವ್‌ ಸೀಸನ್‌ನಲ್ಲಿ ಯುವತಿಯರ ಮನ ಸೆಳೆದಿವೆ.

‘ ಇನ್ನುಈ ಬಾರಿಯ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡಲು ನಮ್ಮತನವನ್ನು ಬಿಂಬಿಸುವ ಟ್ರೆಡಿಷನಲ್‌ ಲುಕ್‌ ನೀಡುವ ಲೆಹೆಂಗಾಗಳು ಫ್ಯಾಷನ್‌ ಮಾರುಕಟ್ಟೆಯಲ್ಲಿ ನಾನಾ ವಿನ್ಯಾಸದಲ್ಲಿ ಬಿಡುಗಡೆಯಾಗಿದ್ದು, ನೋಡಲು ಒಂದಕ್ಕಿಂತ ಒಂದು ವಿಭಿನ್ನವಾಗಿವೆ, ಅತ್ಯಾಕರ್ಷಕವಾಗಿವೆ. ಧರಿಸಿದಾಗ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ನಟಿ, ಮಾಡೆಲ್‌ ಚಂದನಾ ಗೌಡ.

ಸ್ಥಳೀಯ ವಿನ್ಯಾಸದ ಟಚ್‌

“ ಉತ್ತರ ಭಾರತದವರ ಪ್ರೀತಿ-ಪಾತ್ರ ಉಡುಪಾಗಿರುವ ಲೆಹೆಂಗಾಗಳು ದಕ್ಷಿಣ ಭಾರತದವರನ್ನು ಸೆಳೆದಿರುವುದು ಹೊಸ ವಿಷಯವೇನಲ್ಲ. ಆದರೆ, ಇದೀಗ ಇಲ್ಲಿನ ಸ್ಥಳಿಯ ವಿನ್ಯಾಸಗಾರರು ಈ ಲೆಹೆಂಗಾಗಳಿಗೆ ಸಾಂಪ್ರದಾಯಿಕ ವಿನ್ಯಾಸದ ಟಚ್‌ ನೀಡಿರುವುದು ಸಂತಸದ ವಿಚಾರ. ಲೆಹೆಂಗಾಗಳನ್ನು ಇಲ್ಲಿನ ಡಿಸೈನ್‌ಗೂ ಪರಿವರ್ತಿಸಬಹುದು ಎಂಬುದನ್ನು ನಾವು ಪ್ರೂವ್‌ ಮಾಡಿದ್ದೇವೆ” ಎನ್ನುತ್ತಾರೆ ವಿಭಿನ್ನ ಡಿಸೈನರ್‌ ಅಶ್ವಿನಿ ಗೌಡ.

ಟ್ರೆಂಡ್‌ನಲ್ಲಿ ನಾನಾ ವಿನ್ಯಾಸದ ಲೆಹೆಂಗಾ

ಅಂದಹಾಗೆ. ಈ ಬಾರಿಯ ಫೆಸ್ಟಿವ್‌ ಸೀಸನ್‌ನಲ್ಲಿ ನಾನಾ ವಿನ್ಯಾಸದ ಸಾಂಪ್ರಾದಾಯಿಕ ಲುಕ್‌ ನೀಡುವ ರೇಷ್ಮೆ ಸೀರೆಯ ರಾಯಲ್‌ ಲುಕ್‌ ನೀಡುವ ವೆರೈಟಿ ಲೆಹೆಂಗಾಗಳು ಪಾಪ್ಯುಲರ್‌ ಆಗಿದ್ದು, ಇದಕ್ಕೆ ಪೂರಕ ಎಂಬಂತೆ, ಲಂಗ-ದಾವಣಿ ಸ್ಟೈಲ್‌ನವು , ಲೋಕಲ್‌ ಲುಕ್‌ ನೀಡುವ ದುಪಟ್ಟಾ, ಸೀರೆಯ ಬ್ಲೌಸ್‌ನಂತೆ ಕಾಣುವ ಕ್ರಾಪ್‌ ಬ್ಲೌಸ್‌ಗಳು ಸಾಥ್‌ ನೀಡಿವೆ.

ಬದಲಾದ ಲೆಹೆಂಗಾ ರೂಪ

ಈ ಬಾರಿ ನೋಡಲು ಸೀರೆಯ ಬ್ಲೌಸ್‌ ಕಟ್‌ನಂತಿರುವ ಬ್ಯಾಕ್‌ ಸೈಡ್‌ ಬಟನ್‌ ಹೊಂದಿರುವ ಲೆಹೆಂಗಾ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಬಾಜುಬಂದ್‌ ಜಾಗದಲ್ಲಿ ಕುಂದನ್‌, ಕಲಾಂಕಾರಿ ಹಾಗೂ ಮೊಟಿಫ್‌, ಎಂಬಾಲಿಶಿಂಗ್‌ ಡಿಸೈನ್‌ನವು ಸೆಮಿ ಸ್ಟಿಚ್‌ ಹಾಗೂ ರೆಡಿಮೇಡ್‌ ಲೆಹೆಂಗಾಗಳಲ್ಲಿ ಕಂಡು ಬರುತ್ತಿವೆ. ನಮ್ಮ ಟ್ರೆಡಿಷನಲ್‌ ಲುಕ್‌ಗೆ ಹೊಂದುವಂತೆ ರೇಷ್ಮೆಯ ಫ್ಯಾಬ್ರಿಕ್‌ ಹಾಗೂ ಸೆಮಿ ಸಿಲ್ಕ್‌ನಲ್ಲಿ ಸಿದ್ಧಪಡಿಸಿದಂತಹ ಲೆಹೆಂಗಾಗಳು ಚೆಕ್ಸ್‌, ಪ್ರಿಂಟೆಡ್‌ ವಿನ್ಯಾಸದವು ಯುವತಿಯರಿಗೆ ಪ್ರಿಯವಾಗಿವೆ.

ಲೆಹೆಂಗಾ ಪ್ರಿಯರಿಗಾಗಿ ಒಂದಿಷ್ಟು ಟಿಪ್ಸ್

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Fashion Trend | ಅಸೆಮ್ಮಿಟ್ರಿಕಲ್‌ ಡ್ರೆಸ್‌ ಹಂಗಾಮಾ

Exit mobile version