ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬದಂದು ಉಡುವ ಶ್ವೇತ ವರ್ಣದ ಇಲ್ಲವೇ ಐವರಿ ವರ್ಣದ ಕಸವು ಅಥವಾ ಸಿಲ್ಕ್ ಮಿಕ್ಸ್ ಕಾಟನ್ ಸೀರೆಗೆ ಕಾಂಟ್ರಸ್ಟ್ ಶೇಡ್‌ನ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದು ಇದೀಗ ಟ್ರೆಂಡಿಯಾಗಿದೆ.
ಮಾನೋಕ್ರೊಮ್ ಶೇಡ್
ಆಯಾ ಸೀರೆಯ ಬಣ್ಣದ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದನ್ನು ಮಾನೋಕ್ರೋಮ್ ಬ್ಲೌಸ್ ಮ್ಯಾಚ್ ಎನ್ನಬಹುದು. ಇಲ್ಲವೇ ಸೀರೆಯೊಂದಿಗೆ ದೊರೆಯುವ ಸೇಮ್ ಕಲರ್‌ನ ಬ್ಲೌಸನ್ನು ಮತ್ತಷ್ಟು ಡಿಸೈನ್ ಮಾಡಿಸಿ, ಮ್ಯಾಚಿಂಗ್ ಮಾಡುವುದು ಈ ಕಾನ್ಸೆಪ್ಟ್‌ನಲ್ಲಿ ಸೇರುತ್ತದೆ.
ಕಾಂಟ್ರಾಸ್ಟ್ ಶೇಡ್:
ಸೀರೆಗೆ ತದ್ವಿರುದ್ಧವಾಗಿ ಮಾಡುವ ಬ್ಲೌಸ್ ಮ್ಯಾಚಿಂಗ್ ಇದಾಗಿದ್ದು, ಇತ್ತೀಚೆಗೆ ಇದು ಸಾಮಾನ್ಯವಾಗಿದೆ. ಇದರಿಂದ ಡಿಫರೆಂಟ್ ಲುಕ್ ಪಡೆಯಬಹುದು. ಕಳೆದ ಬಾರಿ ಧರಿಸಿದ್ಧ ಸೀರೆಯನ್ನು ಮತ್ತೊಮ್ಮೆ ಧರಿಸುವಾಗ ಈ ರೀತಿ ಕಾಂಟ್ರಾಸ್ಟ್ ಬ್ಲೌಸ್ ಧರಿಸಿ ಡಿಫರೆಂಟ್ ಲುಕ್ ನೀಡಬಹುದು. ಆಗ ಸೀರೆ ಹಳತೇನಿಸುವುದಿಲ್ಲ.
ಇನ್ನು ಗ್ರ್ಯಾಂಡ್ ಲುಕ್ ಬೇಕಿದ್ದಲ್ಲಿ ಕೂಡ ಈ ಕಾನ್ಸೆಪ್ಟ್ ಅಳವಡಿಸಿಕೊಳ್ಳಬಹುದು.
ಡಿಸೈನರ್ ಬ್ಲೌಸ್
ಕೇರಳದ ಕಸವು ಸೀರೆಗೆ ಇದೀಗ ಸೆಲೆಬ್ರಿಟಿಗಳು ಗ್ರ್ಯಾಂಡ್ ಲುಕ್ ನೀಡಲು ಡಿಸೈನರ್ ಬ್ಲೌಸ್‌ಗಳನ್ನು ಧರಿಸಲು ಆರಂಭಿಸಿದ್ದಾರೆ. ಇದು ಸೆಲೆಬ್ರಿಟಿ ಲುಕ್ ನೀಡುತ್ತದೆ. ಹ್ಯಾಂಡ್‌ಮೇಡ್ ವರ್ಕ್ ಇಲ್ಲವೇ ಗೋಲ್ಡನ್ ವರ್ಕ್‌ನ ಬ್ಲೌಸ್‌ಗಳನ್ನು ಸೀರೆಗೆ ಧರಿಸಬಹುದು.
ಪ್ರಿಂಟೆಡ್ ಬ್ಲೌಸ್
ಸೀರೆಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಕಾಣುವ ಪ್ರಿಂಟೆಡ್ ಬ್ಲೌಸ್‌ಗಳನ್ನು ಇವುಗಳೊಂದಿಗೆ ಪ್ರಯೋಗಿಸಬಹುದು. ಉದಾಹರಣೆಗೆ ಕಲಾಂಕಾರಿ ಬ್ಲೌಸ್, ಇಲ್ಲವೇ ಚೆಕ್ಸ್ ಅಥವಾ ಜಾಮೆಟ್ರಿಕಲ್ ಡಿಸೈನ್ ಪ್ರಿಂಟ್ ಇರುವಂತವನ್ನು ಈ ಸೀರೆಗ ಧರಿಸಬಹುದು. ನೋಡಲು ವಿಭಿನ್ನ ಲುಕ್ ನೀಡುತ್ತದೆ.
ಬ್ಲೌಸ್ ಮ್ಯಾಚ್ ಮಾಡುವ ಮುನ್ನ ಗಮನಿಸಿ
– ನೆಕ್‌ಲೈನ್ ಸೂಟ್ ಆಗಬೇಕು.
-ಸೀರೆ ಹಳತಾದಲ್ಲಿ ಡಿಸೈನರ್ ಬ್ಲೌಸ್ ಆಯ್ಕೆ ಮಾಡಿ
– ಬ್ಲೌಸ್‌ನ ಸ್ಲೀವ್ ಡಿಸೈನ್ ಕೂಡ ಹೊಸ ಲುಕ್ ನೀಡುತ್ತದೆ.
– ಹಬ್ಬದ ಸಂಭ್ರಮಕ್ಕೆ ಸೂಟ್ ಆಗುವಂತಿರಲಿ
(ಲೇಖಕಿ: ಫ್ಯಾಷನ್ ಪತ್ರಕರ್ತೆ)