Site icon Vistara News

Festive Shopping: ವರಮಹಾಲಕ್ಷ್ಮಿ ಹಬ್ಬದ ಸೀರೆ ಶಾಪಿಂಗ್‌ಗೆ 7 ಐಡಿಯಾ

Festive Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬದ ಸೀರೆ ಶಾಪಿಂಗ್‌ ಎಲ್ಲೆಡೆ ಭರದಿಂದ ಸಾಗಿದೆ. ಸೀರೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂದಹಾಗೆ, ಈ ಹಬ್ಬಕ್ಕೆ ನೀವೂ ಸೀರೆ ಖರೀದಿಸುತ್ತಿದ್ದೀರಾ? ಹಾಗಾದಲ್ಲಿ ಖರೀದಿಗೆ ಮುನ್ನ ಅಥವಾ ಖರೀದಿಸುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

  1. ವಾರ್ಡ್ ರೋಬ್ ಚೆಕ್‌ ಮಾಡಿ

ಸೀರೆ ಶಾಪಿಂಗ್‌ಗೆ ಹೋಗುವ ಮುನ್ನ ನಿಮ್ಮ ವಾರ್ಡ್‌ರೋಬ್‌ನಲ್ಲಿ ಯಾವ್ಯಾವ ವರ್ಣದ ವಿನ್ಯಾಸದ ಹಾಗೂ ಶೇಡ್‌ನ ಸೀರೆಗಳಿವೆ ಎಂಬುದನ್ನು ತಿಳಿದುಕೊಂಡಿರಿ. ಖರೀದಿ ಅತುರದಲ್ಲಿ ಸೇಮ್‌ ಟು ಸೇಮ್‌ ವಿನ್ಯಾಸದ ಅದೇ ವರ್ಣದ ಸೀರೆಗಳನ್ನು ಕೊಂಡು ಬರುವಂತಾಗಬಾರದು.

  1. ಬಜೆಟ್‌ ಪ್ಲಾನಿಂಗ್‌ ಮಾಡಿ

ಸೀರೆ ಖರೀದಿಗೆ ಪ್ಲಾನ್‌ ಮಾಡಿದ ತಕ್ಷಣ ಎಷ್ಟು ಬೆಲೆಯ ಸೀರೆಗಳನ್ನು ಖರೀದಿಸಬೇಕು? ಎಷ್ಟು ಸೀರೆಯ ಅಗತ್ಯವಿದೆ ಎಂಬುದರ ಬಗ್ಗೆ ಮೊದಲೇ ನಿರ್ಧರಿಸಿ, ತೆರಳಿ. ಕೊಳ್ಳುವಾಗ ಈ ಬಗ್ಗೆ ಚರ್ಚಿಸುವ ಅಗತ್ಯವಿರುವುದಿಲ್ಲ ಹಾಗೂ ಗೊಂದಲವುಂಟಾಗುವುದಿಲ್ಲ.

  1. ಆನ್‌ಲೈನ್‌ ಖರೀದಿ

ಇಂಟರ್‌ನೆಟ್‌ನಲ್ಲಿ ಫೆಸ್ಟಿವ್‌ ಸೀಸನ್‌ಗೆ ಟ್ರೆಂಡಿಯಾಗಿರುವ ಸೀರೆಗಳ ಝಲಕ್‌ ನೋಡಿ. ಆನ್‌ಲೈನ್‌ನಲ್ಲಿ ಖರೀದಿಸುವುದಾದಲ್ಲಿ ಪ್ರಿಂಟ್ಸ್‌, ಕ್ವಾಲಿಟಿ ಬಗ್ಗೆ ಗ್ಯಾರಂಟಿ ಇರುವುದಿಲ್ಲ. ಬ್ರಾಂಡೆಡ್‌ ಹಾಗೂ ಬೋಟಿಕ್‌ ಸೀರೆಗಳಾದಲ್ಲಿ ಮಾತ್ರ ಎಕ್ಸ್‌ಚೇಂಜ್‌ ಸೌಲಭ್ಯ ಇರುತ್ತದೆ. ಹಾಗಾಗಿ ಬ್ರಾಂಡೆಡ್‌ ಸೀರೆಗಳಿಗೆ ಆದ್ಯತೆ ನೀಡಿ. ಆಗ ಹೆಚ್ಚು ತಲೆಬಿಸಿ ಇರುವುದಿಲ್ಲ.

  1. ಸೀರೆ ಶೋ ರೂಮ್ ಗಳಲ್ಲಿ ಖರೀದಿಸಿ

ಆದಷ್ಟೂ ಆಫ್‌ಲೈನ್‌ ಅಂದರೆ, ಅಂಗಡಿ ಅಥವಾ ಶೋ ರೂಮ್‌ಗೆ ಭೇಟಿ ನೀಡಿ ಖರೀದಿಸಿ. ಗ್ರಾಹಕ ಸ್ನೇಹಿ ಶೋರೂಂಗೆ ತೆರಳಿ. ಯಾಕೆಂದರೆ, ನಿಮಗೆ ಕಣ್ಣಿಗೆ ಕಾಣುವ ಸಾಕಷ್ಟು ಬಗೆಯ ಸೀರೆಗಳನ್ನು ಕಣ್ತುಂಬಿಸಿಕೊಳ್ಳಬಹುದಲ್ಲದೇ, ಧರಿಸಿ ಟ್ರಯಲ್‌ ಕೂಡ ನೋಡುವ ಅವಕಾಶವಿರುತ್ತದೆ.

  1. ಟ್ರೆಂಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಿ

ಟ್ರೆಂಡಿ ಡಿಸೈನ್‌ನ ಯಾವ್ಯಾವ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಫೆಸ್ಟಿವ್‌ ಸೀಸನ್‌ ಸ್ಪೆಷಲ್‌ ಸೀರೆಗಳ್ಯಾವುವು? ಬೆಲೆ ಎಷ್ಟಿವೆ. ನಿರ್ವಹಣೆ ಹೇಗೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ನಿಮಗೆ ಯಾವ ಶೈಲಿಯ ಸೀರೆ ಬೇಕು ಎಂದು ಗೊತ್ತಿದ್ದಲ್ಲಿ ಮೊಬೈಲ್‌ನಲ್ಲಿಅದರ ಫೋಟೋ ಹಿಡಿದಿಟ್ಟುಕೊಳ್ಳಿ. ಎಲ್ಲಾಸೀರೆಗಳನ್ನು ತೆಗೆಸುವ ಬದಲು ಚಿತ್ರ ತೋರಿಸಿ ಕೇಳಿ, ನೋಡಿ.

  1. ಬ್ರಾಂಡ್‌ ಹಾಗೂ ಗುಣಮಟ್ಟಕ್ಕೆ ಆದ್ಯತೆ

ಹಬ್ಬದ ಸೀಸನ್‌ನಲ್ಲಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ಸಿಲ್ಕ್‌ ಹಾಗೂ ಇನ್ನಿತರೇ ಫ್ಯಾಬ್ರಿಕ್‌ನ ಸೀರೆಗಳು ಮಾರುಕಟ್ಟೆಗೆ ಆಗಮಿಸುತ್ತವೆ. ಅವುಗಳ ಗುಣಮಟ್ಟ ಹಾಗೂ ಟೆಕ್ಸ್‌ಚರ್‌ ನೋಡಿ ಖರೀದಿಸಿ. ಕಲರ್‌ ಹಾಗೂ ಡಿಸೈನ್‌ಗೆ ಮಾರು ಹೋಗಬೇಡಿ.

  1. ಗುಂಪು ಗುಂಪಾಗಿ ತೆರಳಬೇಡಿ

ಮಾನ್ಸೂನ್‌ಗೆ ಸೂಟ್‌ ಆಗುವ ಸಿಂಪಲ್‌ ಔಟ್‌ಫಿಟ್‌ ಧರಿಸಿ ಖರೀದಿಗೆ ಹೊರಡಿ. ಟ್ರಯಲ್‌ ನೋಡಲು ಸುಲಭವಾಗುವುದು. ನೀವೂ ಕೂಡ ರಿಲ್ಯಾಕ್ಸ್‌ ಆಗಿರಬಹುದು. ಗುಂಪು ಗುಂಪಾಗಿ ತೆರಳಬೇಡಿ. ಇದರಿಂದ ಕೊಳ್ಳುವಾಗಿನ ಕನ್‌ಫ್ಯೂಸ್‌ ತಪ್ಪುತ್ತದೆ. ಮಕ್ಕಳನ್ನು ಶಾಪಿಂಗ್‌ಗೆ ಕರೆದೊಯ್ಯುವುದನ್ನು ಆದಷ್ಟೂ ಆವಾಯ್ಡ್‌ ಮಾಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

Exit mobile version