ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಸಡಗರ ಹೆಚ್ಚಿಸಲು ಚಿನ್ನ, ವಜ್ರ ಹಾಗೂ ಪ್ಲಾಟಿನಂನ ನಾನಾ ಡಿಸೈನ್‌ನ ಟ್ರೆಂಡಿ ಆಭರಣಗಳು ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ. ವೈವಿಧ್ಯಮಯ ವಿನ್ಯಾಸದಲ್ಲಿ ಗ್ರಾಹಕರನ್ನು ಬರಸೆಳೆದಿವೆ.
ಟ್ರೆಂಡಿಯಾಗಿರುವ ಆಭರಣಗಳು
ಪ್ರತಿ ವರ್ಷವೂ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬಂಗಾರದ ಆಭರಣಗಳು ಮಾತ್ರವಲ್ಲ, ವಜ್ರ ಹಾಗೂ ಪ್ಲಾಟಿನಂ ಆಭರಣಗಳು ಅತಿ ಹೆಚ್ಚು ಬಿಕರಿಗೊಳ್ಳುತ್ತವೆ. ಹಬ್ಬದ ಸಮಯದಲ್ಲಿ ಆಭರಣ ಕೊಳ್ಳುಗರು ಹೆಚ್ಚಾಗಿರುವುದರಿಂದ ಲೆಕ್ಕವಿಲ್ಲದಷ್ಟು ಹೊಸ ವಿನ್ಯಾಸದ ಆಭರಣಗಳು ಮಾರುಕಟ್ಟೆಗೆ ಆಗಮಿಸುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ಪಂಕಜ್. ಅವರ ಪ್ರಕಾರ, ಫೆಸ್ಟೀವ್ ಸೀಸನ್‌ನಲ್ಲಿ ನಾನಾ ಶೈಲಿಯ ಚಿನ್ನದ ಬಿಗ್ ಚೋಕರ್ ನೆಕ್‌ಲೇಸ್‌ಗಳು, ಹಾರಗಳು ಹಾಗೂ ಗ್ರಾಂಡ್ ಲುಕ್ ನೀಡುವ ಲೆಯರ್ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಇನ್ನು ವಜ್ರದ ಸಿಂಪಲ್ ನೆಕ್ಲೇಸ್, ಸ್ಟಡ್ಸ್, ಪೆಂಡೆಂಟ್ಸ್ ಕೊಳ್ಳುವವರು ಹೆಚ್ಚಾಗಿದ್ದಾರೆ. ಇನ್ನು ಪ್ಲಾಟಿನಂ ಆಭರಣಗಳು ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ.
ಬಂಗಾರದ ಆಭರಣಗಳಿಗೆ ಕುಂದದ ಡಿಮ್ಯಾಂಡ್
ದೀಪಾವಳಿಯಲ್ಲಿ ಬಹುತೇಕರು ಎಥ್ನಿಕ್ ಲುಕ್ ಇರುವಂತಹ ಉಡುಪುಗಳನ್ನೇ ಚೂಸ್ ಮಾಡುವುದರಿಂದ ಬಂಗಾರದ ಆಭರಣ ಧರಿಸುವವರು ಹೆಚ್ಚು. ಇದು ಗ್ರ್ಯಾಂಡ್ ಲುಕ್ ನೀಡುವುದರಿಂದ ಈ ಆಭರಣಗಳಿಗೆ ಎಂದಿಗೂ ಬೇಡಿಕೆ ಕುಂದಿಲ್ಲ! ಎಂಬುದು ಜ್ಯುವೆಲರಿ ಮಾರಾಟಗಾರರ ಅಭಿಪ್ರಾಯ.
ವಜ್ರದ ಟ್ರೆಂಡಿ ಆಭರಣಗಳು
ಸೆಲೆಬ್ರಿಟಿಗಳು ಹೆಚ್ಚಾಗಿ ವಜ್ರದ ಆಭರಣಗಳನ್ನು ಇಷ್ಟಪಡುತ್ತಾರೆ. ಎಲ್ಲರೂ ಕೊಳ್ಳಬಹುದಾದ ಸಾಮಾನ್ಯ ಅಮೆರಿಕನ್ ಡೈಮಂಡ್‌ನಿಂದಿಡಿದು, ಸಾಲಿಟೈರ್‌ವರೆಗೂ ಹೊಸ ವಿನ್ಯಾಸದ ವಜ್ರಾಭರಣಗಳು ಈ ಸೀಸನ್‌ನಲ್ಲಿ ಕಾಲಿಟ್ಟಿವೆ. ಎಂದಿನಂತೆ ಸಿಂಪಲ್ ನೆಕ್‌ಪೀಸ್, ಸ್ಟಡ್ಸ್, ಬ್ರೇಸ್‌ಲೇಟ್, ಸಿಂಗಲ್ ಸ್ಟೋನ್ ಇರುವಂತಹ ವಜ್ರದ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಚೈನ್ ಜತೆಗೆ ವಜ್ರದ ಸಿಂಪಲ್ ಪೆಂಡೆಂಟ್ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ ಎನ್ನುತ್ತಾರೆ ಆಭರಣ ವಿನ್ಯಾಸಕರು.
ಪ್ಲಾಟಿನಂ ಆಭರಣಗಳಿಗೂ ಸಿಕ್ತು ಮಾನ್ಯತೆ
ಕಾರ್ಪೋರೇಟ್ ಕ್ಷೇತ್ರ ಹಾಗೂ ಹೈ ಪ್ರೊಫೈಲ್ ಮಹಿಳೆಯರು ಇದೀಗ ಪ್ಲಾಟಿನಂ ಆಭರಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇವುಗಳಲ್ಲಿ ಗ್ರ್ಯಾಂಡ್ ಡಿಸೈನ್‌ನವು ದೊರೆಯುವುದು ವಿರಳ. ಆದರೂ, ಇತ್ತೀಚೆಗೆ ಪ್ಲಾಟಿನಂ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ ಎನ್ನುತ್ತಾರೆ ಸೇಲ್ಸ್ ಮ್ಯಾನೇಜರ್ ರಿಚರ್ಡ್.
ಪ್ಲಾಟಿನಂ ನೋಡಲು ವೈಟೀಶ್ ವರ್ಣದಲ್ಲಿರುವುದರಿಂದ ಈ ಬಿಳಿಯ ಲೋಹಕ್ಕೆ ಮ್ಯಾಚ್ ಆಗುವಂತಹ ಕಾಂಟ್ರಸ್ಟ್ ಶೇಡ್ ಡಿಸೈನರ್‌ವೇರ್ ಬಳಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಟ್ರೆಂಡಿ ಆಭರಣಗಳ ಪ್ರಿಯರಿಗೆ ಒಂದಿಷ್ಟು ಸಲಹೆ
- ನಿಮ್ಮ ಸ್ಕಿನ್ಟೋನ್ಗೆ ಹೊಂದುವಂತಹ ಆಭರಣ ಕೊಳ್ಳಿ.
- ಪ್ಲಾಟಿನಂ ಅನ್ನು ಚಿನ್ನ ಹಾಗೂ ವಜ್ರದೊಂದಿಗೆ ಧರಿಸಬೇಡಿ.
- ವಜ್ರದ ಆಭರಣಗಳು ದೀಪಾವಳಿ ಪಾರ್ಟಿವೇರ್ಗೆ ಬೆಸ್ಟ್.
- ಜ್ಯುವೆಲರಿ ಆಧಾರದ ಮೇಲೆ ಡ್ರೆಸ್ ಮ್ಯಾಚ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Deepawali 2022 | ಬಾಲಕಿಯರಲ್ಲೂ ಹಬ್ಬಕ್ಕೆ ಟ್ರೆಂಡಿಯಾಯ್ತು ಟ್ರೆಡಿಶನಲ್ ಉಡುಪುಗಳು