ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್‌ನಲ್ಲಿ ಇದೀಗ ಟ್ರೆಂಡಿಯಾಗಿರುವ ಡೆನಿಮ್‌ನ ಫ್ಲೋರಲ್ ಪ್ರಿಂಟ್ಸ್ ಜೀನ್ಸ್ ಪ್ಯಾಂಟ್‌ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡು ಟ್ರೆಂಡ್ ಸೆಟ್ ಮಾಡಿದ್ದಾರೆ.
ಮೊದಲಿನಿಂದಲೂ ಫ್ಯಾಷೆನಬಲ್ ಆಗಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಗ್ಲಾಮರಸ್ ನಟಿ, ಮಾತ್ರವಲ್ಲ, ಆಗಾಗ ಹೊಸ ಬಗೆಯ ಟ್ರೆಂಡನ್ನು ಸೆಟ್ ಮಾಡುತ್ತಿರುತ್ತಾರೆ. ಮಾತ್ರವಲ್ಲ, ತಮ್ಮದೇ ಆದ ಸ್ಟೈಲ್‌ಸ್ಟೇಟ್‌ಮೆಂಟ್‌ಗಳನ್ನು ಫಾಲೋ ಮಾಡುತ್ತಾರೆ. ಬಾಯ್‌ಫ್ರೆಂಡ್ ಜಾಕಿ ಭಗ್ನಾಗಿಯವರೊಂದಿಗೆ ಕಾಣಿಸಿಕೊಂಡಾಗಲೂ ಅಷ್ಟೇ ಕಪಲ್ ಫ್ಯಾಷನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಪರ್ಫಕ್ಟ್ ಫ್ಯಾಷನ್ ರೂಲ್ಸ್ ಪಾಲಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವಿಂಟರ್‌ಗೆ ಎಂಟ್ರಿ ಕೊಟ್ಟ ಫ್ಲೋರಲ್ ಪ್ರಿಂಟ್ಸ್ ಜೀನ್ಸ್ ಪ್ಯಾಂಟ್
ಈಗಾಗಲೇ ರೋಸ್, ಜಾಸ್ಮೀನ್, ಆರ್ಕಿಡ್, ಟ್ರಾಪಿಕಲ್ ಸೇರಿದಂತೆ ನಾನಾ ಬಗೆಯ ಪ್ರಿಂಟ್ಸ್‌ನ ಡೆನಿಮ್ ಜೀನ್ಸ್ ಪ್ಯಾಂಟ್‌ಗಳು ಟ್ರೆಂಡಿಯಾಗಿವೆ. ಆದರೆ ಇದೀಗ, ಬಿಡುಗಡೆಯಾಗಿರುವ ಫ್ಲೋರಲ್ ಫ್ರಿಂಟ್ಸ್‌ನ ಡೆನಿಮ್ ಜೀನ್ಸ್ ಪ್ಯಾಂಟ್ ಕಾಲೇಜು ಹುಡುಗಿಯರಿಗೆ ಪ್ರಿಯವಾಗಿದೆ. ಮೊದಲೆಲ್ಲ ಕೇವಲ ಸಮ್ಮರ್‌ಗೆ ಮಾತ್ರ ಫ್ಲೋರಲ್ ಪ್ರಿಂಟ್ಸ್ ಬರುತ್ತಿದ್ದವು. ಆದರೆ, ಇದೀಗ ವಿಂಟರ್ ಸೀಸನ್ ಅನ್ನು ಸೆಕೆಂಡ್ ಸಮ್ಮರ್ ಎಂದು ಬಿಂಬಿಸಲಾಗುತ್ತದೆ. ಮುದುಡಿಕೊಂಡು ಕೇವಲ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇದೀಗ ಸೈಡಿಗೆ ಸರಿದಿದೆ. ಆಹ್ಲಾದವೆನಿಸುವ ನಾನಾ ಪ್ರಿಂಟ್‌ಗಳು, ಅದರಲ್ಲೂ ಮನಸ್ಸಿಗೆ ಖುಷಿ ನೀಡುವಂತಹ ಫ್ಲೋರಲ್ ಪ್ರಿಂಟ್‌ಗಳು ಈ ಸೀಸನ್‌ನ ಡ್ರೆಸ್‌ನೊಳಗೆ ಕಾಣಿಸಿಕೊಂಡಿವೆ. ಅದರಲ್ಲಿ ಈ ಫ್ಲೋರಲ್ ಪ್ರಿಂಟ್‌ನ ಜೀನ್ಸ್ ಪ್ಯಾಂಟ್ ಕೂಡ ಒಂದು. ಇದೀಗ ನಟಿ ರಕುಲ್ ಪ್ರೀತ್ ಸಿಂಗ್ ಈ ಜೀನ್ಸ್ ಧರಿಸಿ ಟ್ರೆಂಡ್ ಸೆಟ್ಟರ್ ಆಗಿರುವುದು ಮಾತ್ರವಲ್ಲ, ಈ ಡ್ರೆಸ್‌ಕೋಡ್‌ಗೆ ನಾಂದಿ ಕೂಡ ಹಾಡಿದ್ದಾರೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳು.
ಫ್ಲೋರಲ್ ಜೀನ್ಸ್‌ಗೆ ಟಾಪ್ ಮ್ಯಾಚ್ ಮಾಡುವುದು ಹೇಗೆ!
ಯಾವುದೇ ಫ್ಲೋರಲ್ ಜೀನ್ಸ್‌ಗೆ ಟಾಪ್ ಮ್ಯಾಚ್ ಮಾಡುವ ಮುನ್ನ ಅದರ ಶೇಡ್ ಮೊದಲು ಗಮನಿಸಬೇಕು. ವೈಟ್ ಬಣ್ಣದ ಯಾವುದೇ ಬಗೆಯ ಕ್ರಾಪ್ ಟಾಪ್ ಇದಕ್ಕೆ ಸೂಟ್ ಆಗುತ್ತದೆ. ಇತರೇ ವರ್ಣಗಳ ಟಾಪ್‌ಗಳನ್ನು ಮ್ಯಾಚ್ ಮಾಡುವಾಗ ವಿನ್ಯಾಸಕ್ಕೆ ಹಾಗೂ ಧರಿಸುವವರ ಬಾಡಿ ಮಾಸ್ ಇಂಡೆಕ್ಸ್ಗೆ ಮೊದಲು ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಉದಾಹರಣೆಗೆ., ತೆಳ್ಳಗಿರುವವರಿಗಾದಲ್ಲಿ ಕ್ರಾಪ್ ಟಾಪ್ ಓಕೆ. ಕೊಂಚ ಪ್ಲಂಪಿಯಾಗಿದ್ದಲ್ಲಿ ಆದಷ್ಟೂ ಎ ಲೈನ್ ಟಾಪ್, ವೆವ್ವಿ ಟಾಪ್, ಸ್ಪ್ರಿಂಗ್ ಟಾಪ್‌ನಂತವನ್ನು ಚೂಸ್ ಮಾಡಬೇಕು ಎಂದು ಸ್ಟೈಲಿಸ್ಟ್‌ಗಳು ಸಲಹೆ ನೀಡುತ್ತಾರೆ.
ಒಟ್ಟಿನಲ್ಲಿ, ರಕುಲ್ ಧರಿಸಿದ ಫ್ಲೋರಲ್ ಡೆನಿಮ್ ಜೀನ್ಸ್ ಇದೀಗ ಕಾಲೇಜು ಹುಡುಗಿಯರ ಹಾಟ್ ಫೇವರೇಟ್ ಆಗಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Winter Fashion | ಲಂಡನ್‌ನಲ್ಲಿ ಕರೀನಾ-ಕರೀಷ್ಮಾ ಕಪೂರ್ ವಿಂಟರ್ ಫ್ಯಾಷನ್ ಮಂತ್ರ