ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯಂಗ್ ಲುಕ್ ನೀಡುವ ಫ್ಲೋರಲ್ ಡ್ರೆಸ್‌ಗಳು ಈ ಸೀಸನ್‌ನ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಮನಸ್ಸಿಗೆ ಉಲ್ಲಾಸ ನೀಡುವ ನಾನಾ ಹೂವುಗಳ ಚಿತ್ತಾರದ ಡ್ರೆಸ್‌ಗಳು ಬಗೆಬಗೆಯ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ, ಅವುಗಳಲ್ಲಿ ಇದೀಗ ಫ್ಲೋರಲ್ ಪ್ರಿಂಟ್ಸ್‌ನ ಫ್ರಾಕ್ ಹಾಗೂ ಮ್ಯಾಕ್ಸಿ ಹೆಚ್ಚು ಟ್ರೆಂಡಿಯಾಗಿವೆ.
ಫ್ಲೋರಲ್ ಮ್ಯಾಕ್ಸಿ ಫ್ಯಾಷನ್
ಫ್ಲೋರಲ್ ಮ್ಯಾಕ್ಸಿಯಲ್ಲಿ ನಾನಾ ಬಗೆಯವು ಲಭ್ಯ. ಮೊದಲಿನಂತೆ ಈಗ ಒಂದೇ ಫ್ಯಾಬ್ರಿಕ್‌ನಲ್ಲಿ ಇವು ಕಂಡು ಬರುವುದಿಲ್ಲ. ಬದಲಿಗೆ ಕ್ರೇಪ್ ಹಾಗೂ ಜಾರ್ಜೆಟ್ ಫ್ಯಾಬ್ರಿಕ್‌ನ ಲೈಟ್‌ವೈಟ್ ಕಾನ್ಸೆಪ್ಟ್‌ನಲ್ಲಿ ಇವು ದೊರೆಯುತ್ತಿವೆ. ಪರಿಣಾಮ, ಮಾನಿನಿಯರಿಗೆ ಪ್ರಿಯವಾಗಿವೆ. ನೋಡಲು ಒಂದಕ್ಕಿಂತ ಒಂದು ಭಿನ್ನವಾಗಿರುವ ಇವು ದೇಸಿ ಹಾಗೂ ವಿದೇಶಿ ಹೂಗಳ ಚಿತ್ತಾರವನ್ನು ಒಳಗೊಂಡಿರುತ್ತವೆ ಎನ್ನುತ್ತಾರೆ ಡಿಸೈನರ್ಸ್.
ಇನ್ನು ಮ್ಯಾಕ್ಸಿ ಡಿಸೈನ್‌ನಲ್ಲಿ ಹೈ ಸ್ಲಿಟ್, ಸೆಂಟರ್, ಸೈಡ್ ಸ್ಲಿಟ್ ಮ್ಯಾಕ್ಸಿಗಳು ಗ್ಲಾಮರಸ್ ಲುಕ್ ಕಲ್ಪಿಸುತ್ತವೆ. ಈ ಕಾರಣದಿಂದಾಗಿ ಸಿನಿ ತಾರೆಯರು ಕೂಡ ಈ ಔಟ್‌ಫಿಟ್‌ಗಳನ್ನು ಹೆಚ್ಚು ಬಳಸಲಾರಂಭಿಸಿದ್ದಾರೆ. ಕಟೌಟ್ ಮ್ಯಾಕ್ಸಿ ಕೂಡ ತಾರೆಯರ ಫೇವರೇಟ್ ಲಿಸ್ಟ್‌ನಲ್ಲಿದ್ದು, ಇಂದು ಹೆಚ್ಚು ಚಾಲ್ತಿಯಲ್ಲಿದೆ.
ಮನಮೋಹಕ ಫ್ಲೋರಲ್ ಫ್ರಾಕ್
ಮನಮೋಹಕವಾಗಿ ಕಾಣುವ ಫ್ಲೋರಲ್ ಫ್ರಾಕ್‌ಗಳು ಇಂದು ಹುಡುಗಿಯರನ್ನು ಮಾತ್ರವಲ್ಲ ಎಲ್ಲಾ ವಯಸ್ಸಿನ ಮಹಿಳೆಯರನ್ನು ಸೆಳೆದಿವೆ. ಕಾಟನ್ ಹಾಗೂ ಇತರೇ ಫ್ಯಾಬ್ರಿಕ್‌ಗಿಂತ ಕ್ರೇಪ್ ಹಾಗೂ ಜಾರ್ಜೆಟ್ ಮೆಟಿರೀಯಲ್‌ನವು ಹೆಚ್ಚು ಜನಪ್ರಿಯಗೊಂಡಿವೆ. ಮಿನಿ, ಮಿಡಿ ಸ್ಟೈಲ್ ಫ್ರಾಕ್‌ಗಳು ಹಾಲಿಡೇ ಫ್ಯಾಷನ್‌ಗೆ ಸಾಥ್ ನೀಡುತ್ತಿವೆ. ಲಾಂಗ್ ಫ್ರಾಕ್ ಹೆಚ್ಚುಕಮ್ಮಿ ಗೌನ್‌ಗಳಂತೆ ಬಿಂಬಿಸುತ್ತವೆ.
ಟುಲಿಪ್, ರೋಸ್, ಲೋಟಸ್, ಸೂರ್ಯಕಾಂತಿ, ಜಾಸ್ಮೀನ್, ಸೇವಂತಿಗೆ ಹೀಗೆ ನಾನಾ ಬಗೆಯ ಹೂವುಗಳ ಚಿತ್ತಾರದವು ಫ್ರಾಕ್‌ಗಳ ಸೌಂದರ್ಯ ಹೆಚ್ಚಿಸುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಅಲಿಯಾ ರೈ. ಅವರ ಪ್ರಕಾರ, ಫ್ಲೋರಲ್ ಫ್ರಾಕ್‌ಗಳು ನೋಡಲು ಯಂಗ್ ಲುಕ್ ನೀಡುತ್ತವಂತೆ.
ಫ್ಲೋರಲ್ ಡ್ರೆಸ್ ಪ್ರಿಯರಿಗಾಗಿ 5 ಟಿಪ್ಸ್
- ನಿಮ್ಮ ಎತ್ತರಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡಿ.
- ಎತ್ತರವಿದ್ದಲ್ಲಿ ಮ್ಯಾಕ್ಸಿ, ಕುಳ್ಳಗಿದ್ದಲ್ಲಿ ಫ್ರಾಕ್ ಆಯ್ಕೆ ಮಾಡಿ.
- ಹಾಲಿಡೇ ಫ್ಯಾಷನ್‌ಗೆ ಇದು ಹೇಳಿಮಾಡಿಸಿದ ಔಟ್ಫಿಟ್
- ಫಂಕಿ ಆಕ್ಸೆಸರೀಸ್ ಧರಿಸಲು ಬಳಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಮನಮೋಹಕ ಕಟೌಟ್ ಡ್ರೆಸ್‌ನಲ್ಲಿ ನ್ಯೂ ಸೀಸನ್ ವೆಲ್‌ಕಮ್ ಮಾಡಿದ ನಟಿ ನಿಮಿಕಾ ರತ್ನಾಕರ್