ನವದೆಹಲಿ: ಮಾಂಸಾಹಾರ (Non Veg) ಚರ್ಚೆಯ ವಿಷಯ. ಮಾಂಸಾಹಾರ ಮತ್ತು ಶಾಖಾಹಾರದಲ್ಲಿ (Veg) ಯಾವುದು ಉತ್ತಮ, ಯಾವುದು ಕನಿಷ್ಠ ಎಂಬ ವಾದ-ವಿವಾದಗಳಿಗೆ ಅಂತ್ಯವೇ ಇಲ್ಲ. ಹಾಗಿದ್ದೂ, ಮಾಂಸಾಹಾರ ಕುರಿತಾದ ಕೆಲವು ಸಂಗತಿಗಳು ನಿಮ್ಮನ್ನು ದಂಗುಬಡಿಸುತ್ತವೆ. ಮಾಂಸಾಹಾರಕ್ಕಾಗಿ ಯಾವ ಪ್ರಾಣಿಗಳು ಎಷ್ಟು ಬಳಕೆಯಾಗುತ್ತವೆ ಎಂಬ ಅಂಕಿ ಸಂಖ್ಯೆಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ(animals slaughtered). ಎಕನಾಮಿಸ್ಟ್ ಹಳೆಯ ವರದಿಯೊಂದರ ಪ್ರಕಾರ, ಮಾಂಸಾಹಾರಕ್ಕಾಗಿ ವರ್ಷಕ್ಕೆ 19 ಶತಕೋಟಿ ಕೋಳಿಗಳು(Chickens), 1.5 ಶತಕೋಟಿ ಆಕಳು(Cows), 1 ಶತಕೋಟಿ ಕುರಿಗಳು(sheep) ಮತ್ತು 1 ಕೋಟಿ ಹಂದಿಗಳನ್ನು (Pigs) ವಧೆ ಮಾಡಲಾಗುತ್ತದೆಯಂತೆ! ಈ ಅಂಕಿ ಅಂಶಗಳನ್ನು ಸಾದರಪಡಿಸುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
Unbeliavable! Total number of animals eaten by people globally🧐
— Tansu Yegen (@TansuYegen) January 21, 2024
pic.twitter.com/dB1TOklZAv
ವೈರಲ್ ಆಗಿರುವ ವಿಡಿಯೋ ಪ್ರಕಾರ, ಮಾಂಸಾಹಾರಗಳಲ್ಲಿ ಕೋಳಿ ಅಗ್ರಸ್ಥಾನದ್ಲಲಿದೆ. ನಿತ್ಯ 29.5 ಕೋಟಿ ಕೋಳಿಗಳನ್ನು ಮಾಂಸಾಹಾರಕ್ಕಾಗಿ ವಧೆ ಮಾಡಲಾಗುತ್ತದೆ. ಇದನ್ನೇ ನಿಮಿಷದ ಲೆಕ್ಕಾಚಾರ ಹಾಕಿದರೆ, ಪ್ರತಿ ನಿಮಿಷಕ್ಕೆ ಜಗತ್ತಿನಾದ್ಯಂತ 140,000 ಕೋಳಿಗಳನ್ನು ಮಾಂಸಾಹಾರಕ್ಕಾಗಿ ಸಾಯಿಸಲಾಗುತ್ತದೆ! ಕೋಳಿಯ ನಂತರದ ಸ್ಥಾನದಲ್ಲಿ ವರ್ಷಕ್ಕೆ 14 ಶತಕೋಟಿ ಸಾರ್ಡೀನ್(ಮೀನು), 3 ಶತಕೋಟಿ ಸೀಗಡಿ, 3 ಶತಕೋಟಿ, 2.9 ಶತಕೋಟಿ ಬಾತುಕೋಳಿ ಮತ್ತು 2.1 ಶತಕೋಟಿ ಹೆಬ್ಬಾತುಗಳು ಮಾಂಸಾಹಾರಕ್ಕೆ ಬಳಕೆಯಾಗುತ್ತವೆ. ಆಶ್ಚರ್ಯ ಎಂದರೆ, ಪ್ರತಿ ವರ್ಷ 10 ಕೋಟಿ ಆಕ್ಟೋಪಸ್ ಮತ್ತು ಶಾರ್ಕ್‌ದಳನ್ನು ಮಾಂಸಾಹಾರಕ್ಕೆ ಬಳಸಲಾಗುತ್ತದೆ!
ಹೆಚ್ಚುತ್ತಿರುವ ಹಸಿವು ನೀಗಿಸಲು ಹಿಂದಿಯ ಮಾಂಸದಿಂದ ಬೇಕನ್, ಹ್ಯಾಮ್ ಮತ್ತು ಸಾಸೇಜ್‌ಗಳ ಬಳಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಪ್ರತಿ ವರ್ಷ 1.5 ಶತಕೋಟಿ ಹಂದಿಗಳನ್ನು ಕೊಲ್ಲಲಾಗುತ್ತದೆ. ಇದು ಕಳೆದ 50 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾಂಸಾಹಾರದ ಹೆಚ್ಚಿನ ಬೇಡಿಕೆಯು ಚೀನಾದಂತಹ ಮಧ್ಯಮ ಆದಾಯದ ದೇಶಗಳಿಂದ ಬಂದಿದೆ. ಚೀನಾದ ಆರ್ಥಿಕ ಏರುಗತಿಯಲ್ಲಿ ಸಾಗುತ್ತಿದ್ದಂತೆ ಮಾಂಸಾಹಾರ ಬಳಕೆಯು ಹೆಚ್ಚಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ತನ್ನ ವರದಿಯಲ್ಲಿ ತಿಳಿಸಿದೆ. ಇದಕ್ಕೆ ವಿರುದ್ಧವಾಗಿ ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಮಾಂಸಾಹಾರ ಸೇವನೆ ಸ್ಥಿರವಾಗಿದೆ ಅಥವಾ ಕೆಲವು ಪ್ರದೇಶಗಳಲ್ಲಿ ಕಡಿಮೆಯೂ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಗತ್ತಿಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ ಚೀನಾವನ್ನು ಮೀರುತ್ತಿರುವ ಭಾರತವು ತುಂಬಾ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವೆನೆ ಮಾಡುತ್ತಿದೆ. ಹಂದಿ ಮಾಂಸದ ಬದಲಿಗೆ ಕೋಳಿ ಹೆಚ್ಚಿನವರ ಆಯ್ಕೆಯಾಗುತ್ತಿದೆ. ಜತೆಗೆ, ಕೋಳಿ, ಬಾತುಕೋಳಿ, ಹೆಬ್ಬಾತು, ಟರ್ಕಿ ಮತ್ತು ಕೋಳಿಗಳ ಪಾಲು ವಿಶ್ವಾದ್ಯಂತ ತಿನ್ನುವ ಎಲ್ಲಾ ಮಾಂಸದ ಮೂರನೇ ಒಂದು ಭಾಗಕ್ಕೆ ಏರಿದೆ.
ಈ ಸುದ್ದಿಯನ್ನೂ ಓದಿ: Meat Substitutes For Vegans: ಮಾಂಸಾಹಾರ ಬಿಟ್ಟವರಿಗೆ ಈ ಎಲ್ಲ ತರಕಾರಿಗಳಲ್ಲಿ ಮಾಡಬಹುದು ʼಮಾಂಸದಡುಗೆʼ!