ಹೈದರಾಬಾದ್: ಹೋಟೆಲ್‌ನಲ್ಲಿ ಒಂದು ದೋಸೆಯ ದರ ಎಷ್ಟಿರುತ್ತದೆ? 20ರಿಂದ 150 ರೂ. ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಏಕೆಂದರೆ ಈ ವಿಶೇಷ ಹೋಟೆಲ್‌ನಲ್ಲಿ ಒಂದು ದೋಸೆಯ (Viral News) ಬೆಲೆ ಬರೋಬ್ಬರಿ 1000 ರೂ.! ಹಾಗೆಯೇ ಇದು ಮಾಮೂಲಿ ದೋಸೆ ಅಲ್ಲ, ಬದಲಾಗಿ ಚಿನ್ನದ ದೋಸೆ!
ಇದನ್ನೂ ಓದಿ: Viral Video : ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಪಾಕಿಸ್ತಾನಿ ನಟಿ; ಅಬ್ಬಬ್ಬಾ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು
ಹೌದು. ಹೈದರಾಬಾದ್ ನಗರದ ಬಂಜಾರಾ ಹಿಲ್ಸ್‌ನಲ್ಲಿ ಇಂಥದ್ದೊಂದು ವಿಶೇಷ ಹೋಟೆಲ್ ಇದೆ. ‘ಹೌಸ್ ಆಫ್ ದೋಸಾ’ ಹೆಸರಿನ ಈ ಹೋಟೆಲ್ ದೋಸೆಗಳಿಗೇ ಫೇಮಸ್. ಈ ಹೋಟೆಲ್ ನಲ್ಲಿ ಅತ್ಯಂತ ವಿಶೇಷವೆನಿಸಿಕೊಂಡಿರುವುದು ಚಿನ್ನ ಲೇಪಿತ ದೋಸೆ. ಈ ದೋಸೆಗೆ ತುಪ್ಪ ಸವರುವಂತೆ 24 ಕ್ಯಾರೆಟ್ ಚಿನ್ನವನ್ನು ಹಚ್ಚಲಾಗುತ್ತದೆಯಂತೆ! ಹಾಗಾಗಿ ಈ ದೋಸೆ ಬೆಲೆ ಅಷ್ಟೊಂದು ದುಬಾರಿ ಎಂದಿದ್ದಾರೆ ಹೋಟೆಲ್ ಮಾಲೀಕರು.
ಈ ದೋಸೆಯ ಜತೆಯಲ್ಲಿ ನಿಮಗೆ ಹುರಿದ ಗೋಡಂಬಿ, ಬಾದಾಮಿ, ಶುದ್ಧ ತುಪ್ಪ, ಹುರಿದ ಕಡಲೆಕಾಯಿ ಮತ್ತು ಹುರಿದ ಚನ್ನಾ ದಾಲ್‌ನಿಂದ ಮಾಡಿದ ಚಟ್ನಿಗಳು, ಟೇಸ್ಟಿ ಪುಡಿಗಳನ್ನೂ ಕೊಡಲಾಗುತ್ತದೆ. ಸದ್ಯ ಪ್ರತಿ ದಿನ 6ರಿಂದ 8 ಚಿನ್ನದ ದೋಸೆ ಮಾರಾಟವಾಗುತ್ತಿರುವುದಾಗಿ ಹೋಟೆಲ್ ತಿಳಿಸಿದೆ.
ಈ ಹೋಟೆಲ್‌ನಲ್ಲಿ ಚಿನ್ನ ಲೇಪಿತ ದೋಸೆ ಜತೆಯಲ್ಲಿ ಇನ್ನೂ ಅನೇಕ ರೀತಿಯ ದೋಸೆಗಳು ಲಭ್ಯ ಇವೆ. ಅದರಲ್ಲಿ ಡಬಲ್ ಡೆಕ್ಕರ್ ಪಿಜ್ಜಾ ದೋಸೆ (300 ರೂ.), ಡ್ರೈ ಫ್ರೂಟ್ಸ್ ದೋಸೆ (170 ರೂ.), ಪಿಜ್ಜಾ ದೋಸೆ (150 ರೂ.) ರೆಡ್ ಚಿಲ್ಲಿ ದೋಸೆ (70 ರೂ.) ಕೂಡ ಸೇರಿವೆ. ಈ ಹೋಟೆಲ್ ದೋಸೆಯ ರುಚಿ ಅದೆಷ್ಟು ಜನರಿಗೆ ಇಷ್ಟವಾಗಿದೆಯೆಂದರೆ ಜನರು ಹುಡುಕಿಕೊಂಡು ಬಂದು ದೋಸೆ ತಿಂದು ಹೋಗುತ್ತಾರಂತೆ.