Site icon Vistara News

Viral News : ಬಂಗಾಳದ ಕಬಾಬ್ ರೆಸಿಪಿ ಕಲಿತಿದ್ದ ಬ್ರಿಟಿಷ್ ದಂಡ ನಾಯಕ; ಇಲ್ಲಿದೆ 1784ರ ಡೈರಿಯ ಪುಟ!

#image_title

ನವದೆಹಲಿ: ಅದು ಬ್ರಿಟಿಷರ ಕಾಲ. 1784ರ ಸಮಯದಲ್ಲಿ ಬಂಗಾಳಕ್ಕೆ ಮೊದಲನೇ ಗವರ್ನರ್ ಜನರಲ್ ಆಗಿ ವಾರೆನ್ ಹೇಸ್ಟಿಂಗ್ಸ್ ಅವರು ಆಡಳಿತ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರ ಮೇಲೆ ಭ್ರಷ್ಟಾಚಾರದ ಆರೋಪವೂ ಕೇಳಿಬಂದಿದ್ದು, ಸಂಕಷ್ಟದಲ್ಲಿದ್ದರು. ಆಗ ಅವರು ಬಂಗಾಳದ ಶೈಲಿಯಲ್ಲಿ ಕಬಾಬ್ ಮಾಡುವುದನ್ನು ಕಲಿತು ಅದನ್ನು ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದಾರೆ ಕೂಡ. ಅದರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.

ಇದನ್ನೂ ಓದಿ: Viral Video : ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಪಾಕಿಸ್ತಾನಿ ನಟಿ; ಅಬ್ಬಬ್ಬಾ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು
ಇರಾ ಮುಕೋಟಿ ಎಂಬುವರು ವಾರೆನ್ ಅವರ ಡೈರಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಾರೆನ್ ಅವರು ಕಬಾಬ್ ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಗಳ ಪಟ್ಟಿಯನ್ನು ಬರೆದಿರುವುದನ್ನು ಕಾಣಬಹುದು. ಹಾಗೆಯೇ ಕಬಾಬ್ ಮಾಡುವ ವಿಧಾನವನ್ನೂ ಸಹ ಬರೆಯಲಾಗಿದೆ. ಈ ಫೋಟೋ ಹಂಚಿಕೊಂಡಿರುವ ಇರಾ, “ಭ್ರಷ್ಟಾಚಾರದ ಆರೋಪದಿಂದಾಗಿ ಶಿಕ್ಷೆಗೆ ಒಳಗಾಗುವ ಸಮಯದಲ್ಲಿಯೂ ವಾರೆನ್ ಅವರು ನವಾಬ್ ಅಸಾಫ್ ಅವರೊಂದಿಗೆ ಆರಾಮದಾಯಕವಾಗಿ ಜೀವನ ನಡೆಸುತ್ತಿದ್ದರು. ಕಬಾಬ್ ಮಾಡುವುದನ್ನು ಕಲಿಯುತ್ತಿದ್ದರು” ಎಂದು ಬರೆದಿದ್ದಾರೆ.


ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕರು ಆ ಕಬಾಬ್ ರೆಸಿಪಿ ಬಗ್ಗೆ ಚರ್ಚೆ ನಡೆಸಲಾರಂಭಿಸಿದ್ದಾರೆ. ಹಾಗೆಯೇ ಸಾಕಷ್ಟು ಮಂದಿ ವಾರೆನ್ ಅವರ ಹ್ಯಾಂಡ್ ರೈಟಿಂಗ್ ಬಗ್ಗೆ, ಅವರಿಗೆ ಭಾರತೀಯ ಖಾದ್ಯದ ಮೇಲೆ ಇದ್ದ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. “ಇಂದಿಗೂ ಬಂಗಾಳದ ಕಬಾಬ್ ರೆಸಿಪಿಗಳು ಭಾರತ ಮಾತ್ರವಲ್ಲದೆ ವಿಶ್ವದಲ್ಲಿಯೇ ಪ್ರಸಿದ್ಧ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Exit mobile version