-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ನೇಹಿತರನ್ನು ಬೆಸೆಯುವ ವೈವಿಧ್ಯಮಯ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 5 ಬಗೆಯವು ಹೆಚ್ಚು ಟ್ರೆಂಡಿಯಾಗಿವೆ ಹಾಗೂ ಕಾಲೇಜು ಹುಡುಗ-ಹುಡುಗಿಯರನ್ನು ಸೆಳೆಯುತ್ತಿವೆ.
ಫಂಕಿ ಹಾಗೂ ಜಂಕ್ ಜ್ಯುವೆಲ್ಸ್ ಕೆಟಗರಿಗೆ ಸೇರುವ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಈ ಬಾರಿ ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಅದರಲ್ಲೂ ಮೆಸ್ಸಿ ವಿನ್ಯಾಸದವು ಹಾಗೂ ಮಿಕ್ಸ್ ಮ್ಯಾಚ್ ಡಿಸೈನ್‌ನವು ಹೆಚ್ಚು ಬಿಕರಿಯಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಲೇಯರ್ ಲಿಂಕ್ ಮೆಟಲ್ ಫ್ರೆಂಡ್‌ಶಿಪ್ ಬ್ಯಾಂಡ್
ತೆಳುವಾದ ಲೇಯರ್ ಲುಕ್ ಇರುವಂತಹ ಮಲ್ಟಿ ಚೈನ್ ಅಥವಾ ಲಿಂಕ್ಸ್ ಇರುವಂತಹ ವೈಟ್ ಮೆಟಲ್ ಹಾಗೂ ಬ್ಲಾಕ್ ಮೆಟಲ್ ಬೀಡ್ಸ್, ಸ್ಟೋನ್ಸ್ ಮಧ್ಯೆ ಮಧ್ಯೆ ಇರುವಂತಹ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಈ ಬಾರಿ ಬಿಡುಗಡೆಗೊಂಡಿವೆ. ದಿನಾಚಾರಣೆಗೂ ಮೊದಲೇ ಬೇಡಿಕೆ ಹೆಚ್ಚಿಸಿಕೊಂಡಿವೆ. ಇವು ಸೆಲೆಬ್ರೇಷನ್ ನಂತರವೂ ಧರಿಸಬಹುದಾಗಿದ್ದು, ಬೆಲೆ ಸುಮಾರು 100 ರೂ.ಗಳಿಂದ 500 ರೂ.ಗಳವರೆಗೂ ಇದೆ.
ಯೂನಿಸೆಕ್ಸ್ ಫ್ರೆಂಡ್‌ಶಿಪ್ ಬ್ಯಾಂಡ್
ಹುಡುಗ-ಹುಡುಗಿಯರು ಇಬ್ಬರೂ ಧರಿಸಬಹುದಾದ ವಿನ್ಯಾಸದ ಬ್ಯಾಂಡ್‌ಗಳಿವು. ಜಂಕ್, ಫಂಕಿ, ಮೆಟಲ್, ಸಿಲ್ವರ್ ಮೆಟಲ್‌ನಲ್ಲೂ ಇವು ಲಭ್ಯ. ಅಷ್ಟೇಕೆ, ಥ್ರೆಡ್ ನಲ್ಲಿ ಮಾಡಿದ ಡಿಸೈನ್‌ನವು ದೊರೆಯುತ್ತಿವೆ.50 ರೂ.ಗಳಿಂದ 500 ರೂ.ಗಳವರೆಗೂ ಬೆಲೆ ಇದೆ.
ಟಾಕಿಂಗ್ ಬ್ಯಾಂಡ್‌ಗಳು
ಫ್ರೆಂಡ್ಸ್, ಹ್ಯಾಂಡ್ಸ್, ಫೋಟೋ ಸಿಂಬಲ್ ಹೀಗೆ ಸ್ನೇಹದ ಧ್ಯೋತಕವಾಗಿರುವಂತಹ ವಾಕ್ಯವನ್ನು ಬರೆದಂತವು ಹಾಗೂ ಸಿಂಬಲ್ ತೋರ್ಪಡಿಸುವಂತ ಟಾಕಿಂಗ್ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಈ ಸೀಸನ್‌ನಲ್ಲೂ ಮುಂದುವರಿದಿವೆ.
ಲೋಕಲ್ ರಬ್ಬರ್ ಫ್ರೆಂಡ್‌ಶಿಪ್ ಬ್ಯಾಂಡ್
ಹೆಚ್ಚು ಬೆಲೆ ತೆರದೇ ಲೆಕ್ಕವಿಲ್ಲದಷ್ಟು ಸ್ನೇಹಿತರಿಗೆ ನೀಡಬಹುದಾದ ಫ್ಲೆಕ್ಸಿಬಲ್ ರಬ್ಬರ್ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಇವು ಕೇವಲ5 ರೂ.ಗಳಿಂದಿಡಿದು 50 ರೂ.ಗಳ ಬೆಲೆ ಹೊಂದಿವೆ.
ಮ್ಯಾಗ್ನೆಟಿಕ್ ಕ್ರಿಸ್ಟಲ್ ಬ್ಯಾಂಡ್ಸ್
ನಾನಾ ವರ್ಣದ ಕ್ರಿಸ್ಟಲ್ ಬೀಡ್ಸ್ ಹೊಂದಿರುವಂತಹ ಅಂಟಿಸಿದಲ್ಲಿ ಅಂಟುವಂತಹ, ಮ್ಯಾಗ್ನೆಟ್ ಇರುವಂತಹ ಮ್ಯಾಗ್ನೆಟಿಕ್ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಜೆನ್ ಜಿ ಹುಡುಗ ಹುಡುಗಿಯರ ಫೇವರೇಟ್ ಆಗಿವೆ. ಇವು ಕೊಂಚ ದುಬಾರಿ. 500 ರೂ.ಗಳಿಂದ ಆರಂಭವಾಗುವ ಇವು ಸಾವಿರ ರೂ.ಗಳ ತನಕವೂ ಬೆಲೆಯನ್ನೊಳಗೊಂಡಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)