ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್ ಬಂದಿಲ್ಲ, ಆಗಲೇ ಗಿಂಗಮ್ ಫ್ಯಾಷನ್ ಉಡುಪುಗಳು ಲಗ್ಗೆ ಇಟ್ಟಿವೆ. ಸದ್ಯದ ಆಕರ್ಷಕ ಫ್ಯಾಷನ್ ಲಿಸ್ಟ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿದೆ. ಮೊದಲೆಲ್ಲಾ ಕೇವಲ ಪುರುಷರ ಶರ್ಟ್‌ಗೆ ಸೀಮಿತವಾಗಿದ್ದ ಈ ಗಿಂಗಮ್ ಪ್ರಿಂಟ್ಸ್, ಇದೀಗ ತಾರೆಯರ ಕ್ರೇಝಿ ಲಿಸ್ಟ್‌ನಲ್ಲಿ ಮಾತ್ರವಲ್ಲ, ಸಾಮಾನ್ಯ ಹುಡುಗಿಯರ ಡ್ರೆಸ್‌ಗಳಿಗೂ ಎಂಟ್ರಿ ನೀಡಿದೆ.
ಏನಿದು ಗಿಂಗಮ್ ಸ್ಟೈಲ್ ?
ಸಿಂಪಲ್ ಆಗಿ ಹೇಳುವುದಾದಲ್ಲಿ, ಚೆಕ್ಸ್ ಪ್ರಿಂಟ್ಸ್ ಹೊಂದಿದ ಕಾಟನ್ ಫ್ಯಾಬ್ರಿಕ್‌ನ ಫ್ಯಾಷನ್‌ವೇರ್‌ಗಳಿವು. ತಕ್ಷಣಕ್ಕೆ ನೋಡಲು ಪಟ್ಟೆ ಪಟ್ಟೆ ಶರ್ಟ್ ಎಂದೆನಿಸುವುದು. ಮಲೇಷಿಯಾ ಮೂಲದ ಪದ ಹೊಂದಿರುವ ಈ ಫ್ಯಾಷನ್ ಕಾನ್ಸೆಪ್ಟ್ ಇದೀಗ ಆಯಾ ರಾಷ್ಟ್ರದ ಫ್ಯಾಷನ್‌ಗೆ ತಕ್ಕಂತೆ ನಾನಾ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್.
ವೆಸ್ಟರ್ನ್ ಚೆಕ್ಸ್ ಪ್ರಿಂಟ್ಸ್ ಡ್ರೆಸ್‌ಗಳಿವು
ಅಂದ ಹಾಗೆ, ಚೆಕ್ಸ್ ಶರ್ಟ್‌ಗಳು ಶಾಲೆಯ ಯೂನಿಫಾರ್ಮ್ ಹಾಗೂ ಹುಡುಗರ ಶರ್ಟ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಅಷ್ಟಾಗಿ ಫ್ಯಾಷನೆಬಲ್ ಆಗಿರಲಿಲ್ಲ. ಇನ್ನು ನಗು ತರಿಸುವ ಸಂಗತಿ ಎಂದರೇ, ಮನೆಯ ಒಳಾಂಗಣ ವಿನ್ಯಾಸಕ್ಕೆ ಪೂರಕವಾಗುವ ಡೈನಿಂಗ್ ಟೇಬಲ್‌ಗೆ ಬಳಸುವ ಕ್ಲಾತ್ ಈ ಪ್ರಿಂಟ್ಸ್‌ನಲ್ಲಿ ಪ್ರಚಲಿತದಲ್ಲಿದ್ದವು. ಬರಬರುತ್ತಾ ಡಿಸೈನರ್‌ಗಳ ಕೈಗಳಿಗೆ ಸಿಲುಕಿ ಫ್ಯಾಷನ್ ಟಚ್ ಪಡೆದು, ಇದೀಗ ಫ್ಯಾಷೆನಬಲ್ ಡ್ರೆಸ್ ಆಗೋಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಬಗೆಬಗೆಯ ಗಿಂಗಮ್ ಫ್ಯಾಷನ್‌ವೇರ್
ಮಿನಿ, ಶಾರ್ಟ್, ಜಂಪ್ ಸೂಟ್, ಸ್ಕರ್ಟ್, ಮಿಡಿಯಂತಹ ಗಿಂಗಮ್ ಫ್ರಾಕ್‌ಗಳು ಇಂದು ಹೆಚ್ಚು ಪ್ರಚಲಿತದಲ್ಲಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಇವು ನೋಡಲು ಕಂಪ್ಲೀಟ್ ವಿಭಿನ್ನ ಲುಕ್ ನೀಡುತ್ತವೆ. ಸಿಂಗಲ್ ಶೋಲ್ಡರ್, ಇಲ್ಲವೇ ಕೋಲ್ಡ್ ಶೋಲ್ಡರ್ ಅಥವಾ ಬೆಲ್ ಸ್ಲೀವ್ ಹೀಗೆ ನಾನಾ ಬಗೆಯ ಶೋಲ್ಡರ್ ಡಿಸೈನ್‌ಗಳಲ್ಲೂ ಇವು ಲಭ್ಯ. ಈ ಸೀಸನ್‌ಗೆ ಸೂಟ್ ಆಗುವಂತಹ ಬ್ಲ್ಯೂ, ವೈಟ್, ಪೀಚ್, ರೋಸ್, ಪಿಸ್ತಾ ಶೇಡ್‌ನಂತಹ ಚೆಕ್ಸ್ ಪ್ರಿಂಟ್‌ನಂತವು ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಚಿತಾ.
ಗಿಂಗಮ್ ಫ್ಯಾಷನ್‌ವೇರ್ ಆಯ್ಕೆ ಮಾಡುವಾಗ ಗಮನದಲ್ಲಿರಲಿ
ನೀವು ಧರಿಸುವ ಟಾಪ್ ಹಾಗು ಪ್ಯಾಂಟ್ ಎರಡೂ ಗಿಂಗಮ್ ಶೈಲಿಯಲ್ಲಿದ್ದಾಗ ವಿನ್ಯಾಸ ಸಿಂಪಲ್ಲಾಗಿರಬೇಕು. ಇಲ್ಲವೇ ಮೆಸ್ಸಿಯಾಗಿ ಕಾಣಬಹುದು. ಪರ್ಸನಾಲಿಟಿಗೆ ತಕ್ಕಂತಿರಬೇಕು. ಕುಳ್ಳಗಿರುವವರು ಆದಷ್ಟೂ ಚಿಕ್ಕ ಬಾಕ್ಸ್ ಪ್ರಿಂಟ್ಸ್ ಆಯ್ಕೆ ಮಾಡುವುದು ಉತ್ತಮ. ಉದ್ದಗಿರುವವರಿಗೆ ದೊಡ್ಡ ಚೆಕ್ಸ್ ಪ್ರಿಂಟ್ಸ್ ಓಕೆ. ಪ್ಲಂಪಿಯಾಗಿರುವವರು ಕೂಡ ಆದಷ್ಟೂ ಈ ವಿನ್ಯಾಸದ ಉಡುಪನ್ನು ಟ್ರಯಲ್ ಮಾಡಿ ನೋಡಿ, ಅಗಲವಾಗಿ ಕಂಡಲ್ಲಿ ಆವಾಯ್ಡ್ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಗಿಂಗಮ್ ಪ್ರಿಯರಾದಲ್ಲಿ ಫಾಲೋ ಮಾಡಿ
- ಆದಷ್ಟೂ ಮಿನಿಮಲ್ ಆಕ್ಸೆಸರೀಸ್ ಧರಿಸಿ.
- ಹೇರ್ಸ್ಟೈಲ್ ಸಿಂಪಲ್ ಆಗಿರಲಿ.
- ಫುಟ್ವೇರ್ ಸಿಂಪಲ್ ಅಥವಾ ಸಾದಾ ಡಿಸೈನ್ ಹೊಂದಿರಬೇಕು.
- ಪರ್ಸನಾಲಿಟಿಗೆ ಸೂಟ್ ಆಗುವಂತಹ ಗಿಂಗಾಮ್ ಚೆಕ್ಸ್ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Shirt Dress Fashion: ಟ್ರೆಂಡಿ ಶರ್ಟ್ ಡ್ರೆಸ್‌ಗೂ ಸಿಕ್ತು ಗ್ಲಾಮರಸ್ ಲುಕ್