ಶೀಲಾ ಸಿ. ಶೆಟ್ಟಿ, ಬೆಂಗಳೂರು
ಧರಿಸಿದರೆ ಭಾರವಿರದ ಲೈಟ್‌ವೇಟ್ ಜಾರ್ಜೆಟ್ ಗೌನ್‌ಗಳು ಇದೀಗ ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿದ್ದು, ಗೌನ್ ಪ್ರಿಯರನ್ನು ಸಮ್ಮೋಹನಗೊಳಿಸಿವೆ. ಇದರ ಪರಿಣಾಮವಾಗಿ ಹೆವಿ ವಿನ್ಯಾಸವಿಲ್ಲದ ಈ ಸಿಂಪಲ್ ಲೈಟ್‌ವೇಟ್ ಜಾರ್ಜೆಟ್ ಗೌನ್‌ಗಳು ಎಲ್ಲಾ ವರ್ಗದ ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಲೈಟ್‌ವೇಟ್ ಜಾರ್ಜೆಟ್ ಗೌನ್ ಆಯ್ಕೆ
ಮೊದಲೆಲ್ಲಾ ಗೌನ್‌ಗಳೆಂದಾಕ್ಷಣ ಹೆವಿ ಫ್ಯಾಬ್ರಿಕ್‌ನದ್ದು ಎನ್ನಲಾಗುತ್ತಿತ್ತು. ಹೆವಿ ಡಿಸೈನ್‌ನ ಗೌನ್‌ಗಳು ಕೇವಲ ಗ್ರ್ಯಾಂಡ್ ಸಮಾರಂಭಗಳಿಗೆ ಮಾತ್ರ ಧರಿಸಬಹುದಾಗಿತ್ತು. ಹೆಚ್ಚು ಹೊತ್ತು ಧರಿಸಲು ಆಗುತ್ತಿರಲಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಇದೀಗ ಈ ಕಾನ್ಸೆಪ್ಟ್ ಬದಲಾಗಿದೆ. ಇದೀಗ ಡಿಸೈನರ್‌ಗಳು ವೆಸ್ಟರ್ನ್ ಕಾನ್ಸೆಪ್ಟ್ ಆಧರಿಸಿ ಡಿಸೈನ್ ಮಾಡಿದ ಜಾರ್ಜೆಟ್‌ನ ಲೈಟ್‌ವೇಟ್ ಗೌನ್‌ಗಳು ಮಾರುಕಟ್ಟೆಗೆ ಆಗಮಿಸಿದ್ದು, ಸಿಂಪಲ್ ಡಿಸೈನ್‌ಗಳಿಂದಾಗಿ ಇವು ಪಾಪುಲರ್ ಆಗಿವೆ. ಕಂಫರ್ಟಬಲ್ ವೇರ್ ಇದಾಗಿರುವುದರಿಂದ ಇವನ್ನು ಆಯ್ಕೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಹೆಚ್ಚು ಭಾರವಿಲ್ಲದ ಇವುಗಳ ವಿನ್ಯಾಸ ಕೆಲವರಿಗೆ ಇಷ್ಟವಾದರೇ, ಮತ್ತೆ ಕೆಲವರಿಗೆ ಕಂಟೆಂಪರರಿ ಸಿಂಪಲ್ ಡಿಸೈನ್ ಪ್ರಿಯವಾಗಿವೆ ಎನ್ನುತ್ತಾರೆ ಮಾಡೆಲ್ ಪದ್ಮಾಪ್ರಿಯ.
ಇನ್ನು, ಜಾರ್ಜೆಟ್ ಗೌನ್‌ಗಳಲ್ಲಿ ಪ್ರಿಂಟೆಡ್, ಪ್ಲೇನ್, ಸ್ಲಿಟ್, ಫ್ರಾಕ್ ಸ್ಟೈಲ್, ಅಸ್ಸೆಮ್ಮಿಟ್ರಿಕಲ್ ಗೌನ್‌ಗಳು ಹೆಚ್ಚು ಚಾಲ್ತಿಯಲ್ಲಿವೆ ಎನ್ನುವ ಸ್ಟೈಲಿಸ್ಟ್ ರಿಯಾ ಪ್ರಕಾರ, ಅವರವರ ಬಾಡಿ ಟೈಪ್‌ಗೆ ತಕ್ಕಂತೆ ಆಯ್ಕೆ ಮಾಡುವುದು ಜಾಣತನವಂತೆ.
ಜಾರ್ಜೆಟ್ ಪ್ರಿಂಟೆಡ್ ಗೌನ್
ಫ್ಲೋರಲ್, ಜೆಮೆಟ್ರಿಕ್ ಹಾಗೂ ಟ್ರಾಪಿಕಲ್ ಪ್ರಿಂಟೆಡ್‌ನ ಜಾರ್ಜೆಟ್ ಫ್ಯಾಬ್ರಿಕ್‌ನ ಗೌನ್‌ಗಳು ನೋಡಲು ಮನಮೋಹಕ ವಿನ್ಯಾಸದಲ್ಲಿ ಕಟ್‌ಔಟ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಧರಿಸಿದಾಗ ಇವು ನೋಡಲು ಫ್ರೆಶ್ ಲುಕ್‌ನೀಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಯಂಗ್‌ಲುಕ್ ನೀಡುತ್ತವೆ.
ಜಾರ್ಜೆಟ್ ಪ್ಲೇನ್ ಗೌನ್
ನಾನಾ ಬಗೆಯ ಸಾದಾ ವರ್ಣದ ಪ್ಲೇನ್ ಫ್ಯಾಬ್ರಿಕ್‌ನ ಜಾರ್ಜೆಟ್ ಗೌನ್‌ಗಳು ನೋಡಲು ಎಲಿಗೆಂಟ್ ಲುಕ್ ನೀಡುತ್ತವೆ. ಜತೆಗೆ ಇವನ್ನು ಥೀಮ್‌ವೈಸ್ ಧರಿಸಬಹುದು. ಹೆಚ್ಚು ಮೇಕಪ್ ಅಗತ್ಯವಿಲ್ಲ. ಆಕ್ಸೆಸರೀಸ್ ಧರಿಸಿದಲ್ಲಿ ಸಖತ್ ಆಗಿ ಕಾಣುವುದು.
ಗ್ಲಾಮರಸ್ ಲುಕ್‌ಗಾಗಿ ಸ್ಲಿಟ್ ಗೌನ್
ಗ್ಲಾಮರಸ್ ಲುಕ್ ನೀಡಲು ಈ ಸ್ಲಿಟ್ ಜಾರ್ಜೆಟ್ ಗೌನ್‌ಗಳು ಸಹಕಾರಿ. ಕಾಲನ್ನು ಅಂದವಾಗಿ ಬಿಂಬಿಸುವುದರೊಂದಿಗೆ ಉದ್ದನಾಗಿ ಬಿಂಬಿಸುತ್ತವೆ. ಸೆಂಟರ್, ಸೈಡ್ ಹಾಗೂ ಕೆಲವೊಮ್ಮೆ ಎಲ್ಲೆಂದರಲ್ಲಿ ನೀಡುವ ಸ್ಲಿಟ್‌ಗಳು ಈ ಗೌನ್‌ಗಳ ಆಕರ್ಷಣೆ ಎನ್ನಬಹುದು.
ಫ್ರಾಕ್ ಸ್ಟೈಲ್ ಗೌನ್
ಫ್ರಾಕ್‌ನಂತೆ ಕಾಣುವ ಫ್ರಿಲ್ ಹಾಗೂ ಫ್ಲೀಟ್ಸ್ ಜಾರ್ಜೆಟ್ ಗೌನ್‌ಗಳು ಯಂಗ್ ಲುಕ್ ನೀಡುವುದರೊಂದಿಗೆ ಹಾಲಿಡೇ ಫ್ಯಾಷನ್‌ಗೂ ಮ್ಯಾಚ್ ಆಗುತ್ತವೆ. ಟೀನೇಜ್ ಹುಡುಗಿಯರಿಗೆ ಇವು ಹೇಳಿ ಮಾಡಿಸಿದಂತಿರುತ್ತವೆ.
ಅಸ್ಸೆಮ್ಮಿಟ್ರಿಕಲ್ ಗೌನ್
ಕ್ರಿಸ್ ಕ್ರಾಸ್, ಉದ್ದ-ಗಿಡ್ಡವಾಗಿರುವಂತೆ ಕಾಣುವ ಈ ಗೌನ್‌ಗಳು ಹೊಸ ಪ್ರಯೋಗ ಮಾಡುವವರಿಗೆ ಸೂಕ್ತ. ಫ್ಯಾಷನ್ ಪ್ರೇಮಿಗಳಿಗೆ ಬೆಸ್ಟ್.
ಇದನ್ನೂ ಓದಿ| Mens Wedding Fashion | ವೆಡ್ಡಿಂಗ್ ಫ್ಯಾಷನ್‌ನಲ್ಲಿ ಯುವಕರ ಮನಗೆದ್ದ ಬಂದ್ಗಲಾ ಸೂಟ್