ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ (castor oil) ಹೆಸರು ಕೇಳಿದೊಡನೆಯೇ ನೆನಪಾಗುವುದು ತಲೆಕೂದಲ ಆರೋಗ್ಯ. ಕೂದಲು ಕಪ್ಪಗೆ ದಷ್ಟಪುಷ್ಟವಾಗಿ ಬೆಳೆಯಲು (hair care) ಹರಳೆಣ್ಣೆ ಹಚ್ಚಲು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಕೂದಲು ಯಾವ ತೊಂದರೆಯೂ ಇಲ್ಲದೆ ಉದ್ದ ಬೆಳೆಯಲು ಹರಳಣ್ಣೆಯಷ್ಟು ಒಳ್ಳೆಯ ಮದ್ದಿಲ್ಲ (castor oil for hair care) ಎಂದೂ ಹೇಳಿರುವುದನ್ನು ನೀವು ಕೇಳಿರಬಹುದು. ಕಣ್ಣರೆಪ್ಪೆಯ ಕೂದಲು ಚೆನ್ನಾಗಿ ಬೆಳೆಯಲು, ತೆಳುವಾದ ಹುಬ್ಬಿನ ಮಂದಿ ಬಿಲ್ಲಿನಂಥ ಕಡುಕಪ್ಪು ಕೂದಲರಾಶಿಯ ಹುಬ್ಬು ಪಡೆಯಲು ಹರಳೆಣ್ಣೆಯನ್ನು (hair care tips) ಹಚ್ಚುವುದೂ ಉಂಟು. ಕೆಲವರಿಗೆ ಜಿಡ್ಡು ಜಿಡ್ಡಾದ ಹರಳೆಣ್ಣೆ ಅಂದರೆ ಅಲರ್ಜಿ, ಅದನ್ನು ಹಚ್ಚುವುದೆಂದರೆ ಮಾರುದೂರ ಓಡುವುದೂ ಉಂಟು. ಹಾಗಾದರೆ ಬನ್ನಿ, ಶೀಘ್ರದಲ್ಲಿ ಉದ್ದ ಕೂದಲು ಪಡೆಯಲು ಹರಳೆಣ್ಣೆಯನ್ನು ಹೇಗೆಲ್ಲ ಬಳಸಬಹುದು (castor oil benefits) ಎಂಬುದನ್ನು ನೋಡೋಣ.
1. ಹರಳೆಣ್ಣೆಯಲ್ಲಿ 18 ಬಗೆಯ ಫ್ಯಾಟಿ ಆಸಿಡ್‌ಗಳಿವೆ. ವಿಟಮಿನ್ ಇ ಯಿಂದ ಶ್ರೀಮಂತವಾಗಿರುವ ಎಣ್ಣೆ ಇದು. ಕೂದಲು ಉದ್ದ ಬೆಳೆಯಲು ಬೇಕಾದ ಎಲ್ಲ ಬಗೆಯ ಪ್ರೊಟೀನ್‌ಗಳಿಂದಲೂ ಸಮೃದ್ಧವಾಗಿರುವ ಎಣ್ಣೆ ಇದು. ಇದರಲ್ಲಿರುವ ಪೋಷಕ ತತ್ವಗಳ ಹೊರತಾಗಿ, ಇದು ಆಂಟಿ ಫಂಗಲ್ ಆಗಿಯೂ ಆಂಟಿ ಬ್ಯಾಕ್ಟೀರಿಯಲ್ ಆಗಿಯೂ ವರ್ತಿಸುತ್ತದೆ. ಹೀಗಾಗಿ ಕೂದಲನ್ನು ಇಂಥ ಸಮಸ್ಯೆಗಳಿಂದಲೂ ರಕ್ಷಿಸುವ ಮೂಲಕ, ತಲೆಹೊಟ್ಟು, ಕಜ್ಜಿ, ಫಂಗಸ್ ತೊಂದರೆಗಳು ಮತ್ತಿತರ ಸಮಸ್ಯೆಗಳೂ ಹತ್ತಿರ ಸುಳಿಯದು. ಕೂದಲ ಬುಡಕ್ಕೆ ಪೋಷಣೆಯನ್ನು ನೀಡಿ, ಆರೋಗ್ಯವಾಗಿರಿಸುತ್ತದೆ.
2. ಹರಳೆಣ್ಣೆಯನ್ನು ನಿಮ್ಮ ಕೂದಲ ಸಮಸ್ಯೆಗಳಿಗೆ ಬಳಸುವುದಾದಲ್ಲಿ, ಒಂದು ಹತ್ತಿಯ ತುಂಡನ್ನು ಹರಳೆಣ್ಣೆಯಲ್ಲಿ ಅದ್ದಿ ತೆಗೆದು, ಕೂದಲು ಉದುರಿ ಬೊಕ್ಕಾದ ಜಾಗಗಳಿಗೆ ಹಚ್ಚಿ. ಕೂದಲು ಹೆಚ್ಚು ಉದುರಿಹೋಗಿ ಖಾಲಿಯಾದ ಜಾಗದಲ್ಲಿ ಹೀಗೆ ಹತ್ತಿಯಿಂದ ಮೃದುವಾಗಿ ಹಚ್ಚಿದರೆ, ಆ ಜಾಗದಲ್ಲಿ ಹೊಸ ಕೂದಲುಗಳು ಮೊಳೆಯಲು ಸಹಾಯವಾಗುತ್ತದೆ.
3. ಮೂರನೇ ಎರಡರಷ್ಟು ತೆಂಗಿನೆಣ್ಣೆಗೆ ಮೂರನೇ ಒಂದು ಭಾಗ ಹರಳೆಣ್ಣೆಯನ್ನು ಸೇರಿಸಿ ಅದರಿಂದ ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ ಚೆನನಾಗಿ ಮಸಾಜ್ ಮಾಡಿ ಒಂದು ಶವರ್ ಕ್ಯಾಪ್ ಹಾಕಿ ಕವರ್ ಮಾಡಿಕೊಂಡು ಒಂದು ಗಂಟೆ ಬಿಡಿ. ನಂತರ ತಲೆಗೆ ಸ್ನಾನ ಮಾಡಿ. ತಲೆಕೂದಲು ಚೆನ್ನಾಗಿ ಎಣ್ಣೆಯನ್ನು ಹೀರಿಕೊಳ್ಳಲಿ.
4. ತಲೆಗೂದಲು ಸೊಂಪಾಗಿ, ಕಪ್ಪಾಗಿ, ನಯವಾಗಿ ಬೆಳೆಯಬೇಕೆಂದರೆ ಹರಳೆಣ್ಣೆಯ ಹೇರ್ ಪ್ಯಾಕ್ ಮಾಡಿಯೂ ಹಚ್ಚಿಕೊಳ್ಳಬಹುದು. ಮೊಟ್ಟೆಯ ಬಿಳಿ ಲೋಳೆ, ಅಲೋವೆರಾ ಜೆಲ್, ನಿಂಬೆರಸ, ಹಾಗೂ ಹರಳೆಣ್ಣೆ, ಈ ನಾಲ್ಕು ವಸ್ತುಗಳನ್ನು ಜೊತೆಯಾಗಿ ಮಿಕ್ಸ್ ಮಾಡಿ, ಪ್ಯಾಕ್‌ನಂತೆ ತಲೆಕೂದಲಿಗೆ ಅಂದರೆ ಬುಡದಿಂದ ತುದಿಯವರೆಗೂ ಹಚ್ಚಿ. ಶವರ್ ಕ್ಯಾಫ್‌ನಿಂದ ಕವರ್ ಮಾಡಿ ಒಂದು ಗಂಟೆ ಬಿಡಿ. ಕೂದಲು ಸೊಂಪಾಗಿ ಬಹುಬೇಗನೆ ಬೆಳೆಯುತ್ತದೆ.
5. ಮೆಹೆಂದಿ ಅಥವಾ ಮದರಂಗಿ ಪುಡಿಗೆ ಮೆಂತ್ಯಕಾಳಿನ ಪುಡಿಯನ್ನೂ ಸೇರಿಸಿ. ಇವೆರಡಕ್ಕೆ ಹರಳೆಣ್ಣೆ ಹಾಗೂ ತೆಂಗಿನೆಣ್ಣೆಯ ಮಿಶ್ರಣವನ್ನು ಸೇರಿಸಿ ಪ್ಯಾಕ್‌ನಂತೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಬಹುದು. ಅಥವಾ ಈ ಎರಡೂ ಪುಡಿಗಳಿಗೆ ಹರಳೆಣ್ಣೆ ಹಾಗೂ ತೆಂಗಿನೆಣ್ಣೆಯ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕುದಿಸಿ ಎಣ್ನೆ ತಯಾರಿಸಿ ಸೋಸಿಕೊಂಡು ಇದನ್ನು ನಿಯಮಿತವಾಗಿ ಬಳಸುವ ಮೂಲಕವೂ ದೃಢವಾದ ಕಪ್ಪುಗೂದಲನ್ನು ಪಡೆಯಬಹುದು.
ಇದನ್ನೂ ಓದಿ: Hair Care: ತಲೆಕೂದಲು ಉದುರುವಿಕೆಯಿಂದ ಮುಕ್ತಿ ಬೇಕಾದಲ್ಲಿ ಈ ಐದು ಹಣ್ಣುಗಳನ್ನು ತಿನ್ನಿ!