ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೇರ್ ಸ್ಪಾ ಮಾಡಿಸಿದಾಕ್ಷಣಾ ಕೂದಲು ಮಿರಮಿರ ಮಿನುಗತೊಡಗುತ್ತದೆ. ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ ನೀಡಲಾಗುವ ಹೇರ್‌ಸ್ಪಾಗಳಲ್ಲಿ ಯಾವ್ಯಾವ ಆರೈಕೆಗಳು ಒಳಗೊಂಡಿರುತ್ತವೆ ಎಂಬುದನ್ನು ಹೇರ್‌ಸ್ಟೈಲಿಸ್ಟ್ ಜಾಕಿ ಇಲ್ಲಿ ತಿಳಿಸಿದ್ದಾರೆ.
೧. ಮೊದಲಿಗೆ ಕೂದಲಿನ ವಾಶಿಂಗ್ :
ಮೊದಲಿಗೆ ಕೂದಲಿನ ಬುಡದಲ್ಲಿ ಅಡಗಿರುವ ಕೊಳೆಯನ್ನು ಶ್ಯಾಂಪೂವಿನಿಂದ ತೊಳೆದು ತೆಗೆಯಲಾಗುತ್ತದೆ. ನಂತರ ಕೂದಲಿಗೆ ಕಂಡೀಷನಿಂಗ್ ಹಚ್ಚಿ ಒಂದೈದು ನಿಮಿಷದ ನಂತರ ವಾಶ್ ಮಾಡಲಾಗುತ್ತದೆ.
೨. ಹೇರ್ ಮಾಸ್ಕ್ ಆರೈಕೆ:
ಆಯಾ ಕೂದಲಿನ ಸಮಸ್ಯೆ ತಿಳಿದುಕೊಂಡು ಅದಕ್ಕೆ ಹೊಂದುವಂತಹ ಹೇರ್ ಮಾಸ್ಕನ್ನು ತಲೆಕೂದಲಿಗೆ ಹಚ್ಚಿ, ನಿಗಧಿತ ಸಮಯಕ್ಕೆ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಲಾಗುತ್ತದೆ. ಇದು ಕೂದಲಿನ ಬಿರುಕು, ಕೂದಲು ಉದುರುವಿಕೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
೩. ಹೇರ್ ಮಸಾಜ್ ಪ್ರಯೋಜನ:
ತಲೆಬುರುಡೆಗೆ ತಾಗುವಂತೆ ಕೊಬ್ಬರಿ ಎಣ್ಣೆ ಅಥವಾ ಯಾವುದೇ ಕಸ್ಟಮೈಸ್ಡ್ ತೈಲವನ್ನು ಹಚ್ಚಿ ಒಂದಿಪ್ಪತ್ತು ನಿಮಿಷ ಮಸಾಜ್ ಮಾಡಲಾಗುತ್ತದೆ. ಇದು ರಕ್ತ ಸಂಚಾರಕ್ಕೆ ಎಡೆಮಾಡಿಕೊಡುತ್ತದೆ. ಅಲ್ಲದೇ ಇದು ಕೂದಲ ಬೆಳವಣಿಗೆಗೂ ಸಹಕಾರಿ.
೪. ಸ್ಟೀಮಿಂಗ್‌ನಿಂದ ಕ್ಲೆನ್ಸಿಂಗ್ :
ಆಯಾ ವ್ಯಕ್ತಿಯ ಕೂದಲಿನ ಆರೋಗ್ಯದ ಆಧಾರದ ಮೇಲೆ ಬಿಸಿ ನೀರಿನ ಆವಿಯನ್ನು ಕೂದಲಿಗೆ ನೀಡಲಾಗುತ್ತದೆ. ಇದರಿಂದ ನಿಸ್ತೇಜವಾದ ಕೂದಲು ರಿಫ್ರೆಶ್ ಆಗುತ್ತದೆ. ಕ್ಲೆನ್ಸಿಂಗ್ ಮಾಡಿದಂತಾಗುತ್ತದೆ.
೫. ಕೊನೆಯಲ್ಲಿ ರಿನ್ಸಿಂಗ್ :
ಇನ್ನು ಕೊನೆಯಲ್ಲಿ ಕೂದಲನ್ನು ರಿನ್ಸ್ ಮಾಡಿ, ಕಂಪ್ಲೀಟ್ ವಾಶ್ ಮಾಡಲಾಗುತ್ತದೆ. ಬಟ್ಟೆಯಲ್ಲಿ ಒರೆಸಿ, ಒಣಗಿಸಿ, ಹೇರ್‌ಸೆಟ್ ಮಾಡಲಾಗುತ್ತದೆ.
ಈ ಮೇಲಿನ ವಿಧಾನಗಳು ಬಹುತೇಕ ಹೇರ್‌ಸ್ಪಾಗಳಲ್ಲಿ ಕೈಗೊಳ್ಳಲಾಗುತ್ತದೆ.
ಹೇರ್‌ಸ್ಪಾ ಪ್ರಯೋಜನಗಳು :
· ಕೂದಲಿನ ಉದುರುವಿಕೆ ನಿಲ್ಲುತ್ತದೆ.
· ಹೇರ್‌ಸ್ಪಾ ಎಫೆಕ್ಟ್ ೧೫-೩೦ ದಿನಗಳವರೆಗೂ ಇರುತ್ತದೆ.
· ಸ್ಟೀಮಿಂಗ್ ಪದೇ ಪದೇ ಮಾಡಿಸಬಾರದು.
· ಕೂದಲಿನ ಟೆಕ್ಸ್ಚರ್‌ಗೆ ತಕ್ಕಂತೆ ಆರೈಕೆಗೆ ಒಳಗಾಗಬೇಕು.
· ತಿಂಗಳಿಗೊಮ್ಮೆ ಹೇರ್‌ಸ್ಪಾ ಸಾಕು. ಹೆಚ್ಚಾಗಿ ಬೇಡ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ : Hairstyle Trend | ತಾರೆಯರ ಫಂಕಿ ಲುಕ್‌ಗೆ ಹನ್ ಹೇರ್‌ಸ್ಟೈಲ್ ಸಾಥ್