Site icon Vistara News

Halloween dressing tips | ದೆವ್ವ, ಭೂತದ ಫ್ಯಾಷನ್‌ಗೆ ಮುನ್ನ 5 ವಿಷಯ ಗಮನದಲ್ಲಿರಲಿ

Halloween dressing tips

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೇವಲ ವಿದೇಶಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಹಾಲೋವೀನ್‌ ಪಾರ್ಟಿ ಇದೀಗ ಉದ್ಯಾನನಗರಿಯ ಅಪಾರ್ಟ್ಮೆಂಟ್‌ ಕಲ್ಚರ್‌ನಲ್ಲಿ ಸೇರಿ ಹೋಗಿದೆ. ಪರಿಣಾಮವಾಗಿ, ಅಕ್ಟೋಬರ್‌ ಕೊನೆಯಲ್ಲಿ ನಡೆಯುವ ಈ ಪಾರ್ಟಿಯಲ್ಲಿ ಭಯಾನಕ ಕಾಸ್ಟ್ಯೂಮ್‌ಗಳಲ್ಲಿ ಪಾಲ್ಗೊಂಡು ಆಚರಿಸುವವರು ಹೆಚ್ಚಾಗಿದ್ದಾರೆ. ಚಿತ್ರ-ವಿಚಿತ್ರ, ಭಯಾನಕ ಔಟ್‌ಫಿಟ್‌ ಹಾಗೂ ದೆವ್ವಗಳಂತೆ ಕಾಣಿಸಿಕೊಳ್ಳುವಂತೆ ಡ್ರೆಸ್‌ ಮಾಡಿಕೊಳ್ಳುವುದು ಈ ಸ್ಪೂಕಿ ಪಾರ್ಟಿಯ ವಿಶೇಷ. ಅದೇನೇ ಇರಲಿ, ಈ ಪಾರ್ಟಿಯಲ್ಲಿ ಭಯಾನಕ ಉಡುಪು ಹಾಗೂ ಮೇಕಪ್‌ನಲ್ಲಿ ಕಾಣಿಸಿಕೊಳ್ಳುವವರು ಒಂದಿಷ್ಟು ಸಿಂಪಲ್‌ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

೧. ಭಯಾನಕ ಮೇಕಪ್‌ ತ್ವಚೆಯ ಫ್ರೆಂಡ್ಲಿಯಾಗಿರಲಿ

ಇತರರಿಗಿಂತ ಭಯಾನಕವಾಗಿರಲಿ ಎಂದು ಲೋಕಲ್‌ ಮೇಕಪ್‌ ಬಣ್ಣ ಬಳಸಬೇಡಿ. ಸಾಲಿಡ್‌ ಕಲರ್‌ಗಳಿಗಾಗಿ ಕಳಪೆ ಮೇಕಪ್‌ ಮೊರೆ ಹೋಗಬೇಡಿ. ಇದು ನಿಮ್ಮ ಸ್ಕಿನ್‌ ಫ್ರೆಂಡ್ಲಿಯಾಗಿರಲಿ. ಇಲ್ಲವಾದಲ್ಲಿ ಸ್ಕಿನ್‌ಗೆ ಅಲರ್ಜಿಯಾಗಿ ಚರ್ಮದ ಸಮಸ್ಯೆಯಾಗಬಹುದು.

೨. ಸಿಂಪಲ್‌ ಐಡಿಯಾ ಮಾಡಿ

ದೆವ್ವದಂತೆ ಹಾರರ್‌ ಆಗಿರಲಿ ಎಂದು ಕಾಂಪ್ಲೀಕೇಟೆಡ್‌ ಡ್ರೆಸ್ಸಿಂಗ್‌ ಮಾಡಬೇಡಿ. ಆದಷ್ಟೂ ಸಿಂಪಲ್‌ ಆಗಿಯೇ ಹೆಚ್ಚು ತಲೆಬಿಸಿಯಿಲ್ಲದೇ ಮಾಡಬಹುದಾದ ಉಡುಗೆಗಳನ್ನು ಧರಿಸಿ. ಉದಾಹರಣೆಗೆ: ವೈಟ್‌ ಬೆಡ್‌ಸ್ಪ್ರೇಡ್‌ ಅನ್ನು ಮುಡಿಯಿಂದ ಕಾಲವರೆಗೂ ಹಾಕಿಕೊಳ್ಳ್ಳಿ. ಕಣ್ಣ ಜಾಗದಲ್ಲಿ ಮಾತ್ರ ತೂತು ಮಾಡಿ. ಹೆಚ್ಚು ಖರ್ಚಿಲ್ಲದೇ ಕಾಸ್ಟ್ಯೂಮ್‌ ರೆಡಿಯಾಗುವುದು.

೩. ಕಣ್ಣಿನ ಲೆನ್ಸ್‌ ಅಥವಾ ಮೇಕಪ್‌ ಹಾನಿಕಾರಕವಾಗದಿರಲಿ

ದೆವ್ವದ ಲುಕ್‌ ನೀಡಲು ಬಹಳಷ್ಟು ಮಂದಿ ಕಲರ್ಡ್‌ ಲೆನ್ಸ್‌ ಧರಿಸುತ್ತಾರೆ. ಅದು ನೋಡಲು ಕಲರ್‌ನದ್ದಾದದರೂ ಕಣ್ಣಿಗೆ ಧಕ್ಕೆ ಉಂಟು ಮಾಡುತ್ತದೆ. ಎಚ್ಚರ. ಇನ್ನು ಗಾಢ ವರ್ಣದ ಮೇಕಪ್‌ ಕೇವಲ ಕಣ್ಣಿನ ಹೊರಗಿರಲಿ. ಕಣ್ಣಿನೊಳಗೆ ಬಣ್ಣ ಹಚ್ಚಬೇಡಿ.

೪. ಮಕ್ಕಳಿಗೆ ವೇಷ-ಭೂಷಣಗಳು ಭಾರವಾಗದಿರಲಿ

ಎಲ್ಲರಿಗಿಂತ ಆಕರ್ಷಕವಾಗಿರುವ ಹಾರರ್‌ ಸೃಷ್ಟಿಸುವ ವೇಷ-ಭೂಷಣಗಳ ಹೆಸರಲ್ಲಿ ಮಕ್ಕಳಿಗೆ ಕಿರಿಕಿರಿಯಾಗುವಂತಹದ್ದನ್ನು ಹಾಕಬೇಡಿ. ಆದಷ್ಟೂ ಲೈಟ್‌ವೇಟ್‌ನದ್ದನ್ನು ಚೂಸ್‌ ಮಾಡಿ.

೫. ಕಾಂಪ್ಲಿಕೇಟೆಡ್‌ ಹೇರ್‌ಸ್ಟೈಲ್‌ ಬೇಡ

ನೋಡಲು ಭಯ ಮೂಡಿಸುವ ಕಾಂಪ್ಲಿಕೇಟೆಡ್‌ ಹೇರ್‌ಸ್ಟೈಲ್‌ ಮಾಡುವ ಮುನ್ನ ಯೋಚಿಸಿ. ಅತಿ ಹೆಚ್ಚು ಹೇರ್‌ಸ್ಪ್ರೇ ಹಾಗೂ ಹೇರ್‌ಸೆಟ್ಟರ್‌ ಬಳಸುವುದರಿಂದ ಕೂದಲು ಉದುರುವ ಸಂಭವವಿರುತ್ತದೆ. ಗಮ್‌ನಂತಹ ಯಾವುದೇ ಪ್ರಾಡಕ್ಟ್‌ ಬಳಸದಿರುವುದೇ ಉತ್ತಮ. ಟೆಂಪರರಿ ಕಲರ್‌ ಕೂಡ ಬಳಸಬೇಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Weekend style | ದೀಪಾವಳಿಯನ್ನು ಗ್ರ್ಯಾಂಡ್‌ ಲುಕ್‌ನಲ್ಲಿ ಆಚರಿಸಿ ಎಂದ ನಂದಿತಾ ಸಂದೀಪ್‌

Exit mobile version