ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಾಯಕಿಯಾಗಿದ್ದ ರವೀನಾ, ಡೈರೆಕ್ಟರ್‌ಗಳ ಮೆಚ್ಚಿನ ಹಿರೋಯಿನ್ ಆಗಿದ್ದರು. ಇತ್ತೀಚೆಗೆ ಕೆಜಿಎಫ್: ಚಾಪ್ಟರ್ 2 ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಳೇ ಕಳೆದರೂ ಈ ‘ಮೊಹ್ರಾ’ ಸುಂದರಿ ನಟನೆ ಮುಂದುವರಿಸಿರುವುದು ಅವರ ಅಭಿಮಾನಿಗಳಿಗೆ ಸಂತಸದ ಸಂಗತಿ.
ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಎರಡೂ ಕಡೆಯೂ ಉತ್ತಮ ನಿರ್ವಹಣೆ ತೋರುವ ರವೀನಾ ಅವರ ಸ್ಟೈಲ್ ಗೇಮ್ ವಿಭಿನ್ನವಾಗಿದೆ. ಫ್ಯಾಷನ್ ವಿಷಯದಲ್ಲಿ ಅವರು ಹಲವು ಪ್ರಯೋಗಗಳನ್ನು ಮಾಡುತ್ತಾ, ತಮ್ಮ ಸಮವಯಸ್ಕರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.
ಸ್ಟೈಲಿಸ್ಟ್ ರಿಚಾ ರಣಾವತ್, ರವೀನಾ ಅವರನ್ನು ವಿವಿಧ ಬಗೆಯ ತೊಡುಗೆಗಳಲ್ಲಿ ಸ್ಟೈಲ್ ಮಾಡುತ್ತಾರೆ. ಇಲ್ಲಿಯವರೆಗೆ, ಸೀರೆಯಿಂದ ಬೋಹೋ ಡ್ರೆಸ್‌ವರೆಗೆ, ರವೀನಾ ತೊಡದ ಸ್ಟೈಲೇ ಇಲ್ಲ. ಯಾವ ಉಡುಗೆ ತೊಟ್ಟರೂ ಕಾನ್ಫಿಡೆಂಟ್ ಆಗಿರುವ ಅವರ ಸ್ವಭಾವ, ಅವರಿಗೆ ಎಲ್ಲ ರೀತಿಯ ಬಟ್ಟೆಯೂ ಹೋಲುವಂತೆ ಮಾಡುತ್ತದೆ. ಅಲ್ಲದೇ, ಅವರ ಎತ್ತರದ ನೀಳ ಕಾಯ ಕೂಡ ಉಡುಪಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Sandalwood Festive Fashion | ಗ್ರ್ಯಾಂಡ್ ಟ್ರೆಡಿಷನಲ್ ವೇರ್‌ನಲ್ಲಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ತಾರೆಯರು