Site icon Vistara News

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Ayushman Bharat Diwas 2024

ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 2018ರ ಸೆಪ್ಟೆಂಬರ್ 23ರಂದು ಜಾರಿಗೊಳಿಸಲಾಗಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಇಂದು ದೇಶಾದ್ಯಂತ ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas 2024) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರ ಅರೋಗ್ಯ ರಕ್ಷಣೆಯ ಕುರಿತು ಪ್ರಧಾನಿ (PM) ನರೇಂದ್ರ ಮೋದಿ (narendra modi) ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಹೀಗಿವೆ.

ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. AB-PMJAY ಎಂಬುದು ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯ ಆರೈಕೆಗಾಗಿ 5 ಲಕ್ಷ ರೂ.ವರೆಗೆ ಉಚಿತ ವೆಚ್ಚವನ್ನು ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಂಟಿಯಾಗಿ ಹಣವನ್ನು ನೀಡಲಾಗುತ್ತದೆ. 2021ರ ಜುಲೈ ವೇಳೆಗೆ AB-PMJAY ಅನ್ನು ಪಶ್ಚಿಮ ಬಂಗಾಳ, ದೆಹಲಿಯ NCT ಮತ್ತು ಒಡಿಶಾ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

ಮಾನದಂಡವೇನು?

ಅಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು 2011ರ ಸಾಮಾಜಿಕ- ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ (SECC) ಉಲ್ಲೇಖಿಸಲಾದ ಮಾನದಂಡಗಳ ಮೇಲೆ ಅರ್ಹರಾಗಿರುತ್ತಾರೆ.

ಮನೆಯಿಲ್ಲದ, ಭೂರಹಿತ ಕುಟುಂಬಗಳು, ಕೂಲಿ ಪಡೆಯುವ ಕಾರ್ಮಿಕರು, ಬುಡಕಟ್ಟು ಜನರು.. ಸೇರಿದಂತೆ ಸರ್ಕಾರ ನಿಗದಿಪಡಿಸುವ ಮಾನದಂಡದ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ನಿವಾಸಿಗಳಿಗೆ ಅರ್ಹತೆಯು ವಿಭಿನ್ನವಾಗಿದೆ.


50 ಕೋಟಿಗೂ ಹೆಚ್ಚು ಅರ್ಹರು

2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ (ಎಸ್‌ಇಸಿಸಿ) ಪಟ್ಟಿಯನ್ನು ಆಧರಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಜನರನ್ನು ಅರ್ಹರೆಂದು ಗುರುತಿಸಲಾಗಿದೆ. ಎಲ್ಲಾ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್ ಹೊಂದಿರುವವರು ಸಹ ಈ ಯೋಜನೆಗೆ ಅರ್ಹರಾಗಿದ್ದಾರೆ. ಅವರ ಅರ್ಹತೆಯನ್ನು ಪರಿಶೀಲಿಸಲು ಒಬ್ಬರು AB-PMJAY ಸಹಾಯವಾಣಿಗೆ 14555 ಅಥವಾ 1800-111-565ಗೆ ಕರೆ ಮಾಡಬಹುದು.

ಆರೋಗ್ಯ ಕುರಿತು ಪ್ರಧಾನಿ ಮೋದಿ ಮಾತುಗಳು…

– ರಿಮೋಟ್ ಹೆಲ್ತ್‌ಕೇರ್ ಮತ್ತು ಟೆಲಿಮೆಡಿಸಿನ್ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಆರೋಗ್ಯ ಪ್ರವೇಶ ವಿಭಜನೆಯನ್ನು ಕಡಿಮೆ ಮಾಡುತ್ತದೆ. ಆಯುಷ್ಮಾನ್ ಭಾರತ್ ನವ ಭಾರತದ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿದೆ. ಇದು ದೇಶದ ಜನಸಾಮಾನ್ಯರ ಮತ್ತು ಬಡವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಭಾರತವನ್ನು ಪ್ರತಿನಿಧಿಸುವ 130 ಕೋಟಿ ಜನರ ಸಾಮೂಹಿಕ ಸಂಕಲ್ಪ ಮತ್ತು ಶಕ್ತಿಯ ಸಂಕೇತವಾಗಿದೆ.

Exit mobile version