Site icon Vistara News

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

Foods To Avoid Eating With Bananas

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗುವ ಅತ್ಯಂತ ಸಾಮಾನ್ಯವಾದ ಹಣ್ಣು. ಬಡವನಿಂದ ಶ್ರೀಮಂತನವರೆಗೆ ಎಲ್ಲರಿಗೂ ಹಸಿವಾದಾಗ ಪಕ್ಕನೆ ನೆನಪಾಗುವ ಹಣ್ಣು ಎಂದರೆ ಇದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಬಡವನ ಸ್ನೇಹಿತ ಕೂಡಾ. ಇಂತಹ ಬಾಳೆಹಣ್ಣನ್ನು ಯಾವಾಗ ಬೇಕಾದ ಹಾಗೆ ನಾವು ತಿನ್ನಬಹುದೇ? ಹೇಗೆಲ್ಲ ಬಳಸುವುದು ಸೂಕ್ತವಲ್ಲ ಎಂಬ ಮಾಹಿತಿ ನಮಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಹಣ್ಣನ್ನು ಯಾವುದರ ಜೊತೆ ತಿನ್ನಬಾರದು (Foods to avoid eating with bananas) ಎಂಬ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ತಿಳಿದುಕೊಂಡರೆ, ನಮ್ಮ ಹಲವು ಆರೋಗ್ಯ ಸಮಸ್ಯೆಗಳ ಕಾರಣಗಳು ನಮಗೆ ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಮಾಯವಾದೀತು.

ಬಾಳೆಹಣ್ಣು ಹಾಗೂ ಹಾಲು

ಆಯುರ್ವೇದದ ಪ್ರಕಾರ, ಬಾಳೆಹಣ್ಣಿನಲ್ಲಿ ಅಸಿಡಿಕ್‌ ಗುಣವೂ ಇದೆ. ಹಾಲು ಸಿಹಿ ಗುಣವನ್ನು ಹೊಂದಿದೆ. ಹೀಗಾಗಿ, ಹಾಲು ಹಾಗೂ ಬಾಳೆಹಣ್ಣು ಜೊತೆಯಾಗಿ ತೆಗೆದುಕೊಂಡರೆ, ಹೊಟ್ಟೆಯೊಳಗಿನ ಪ್ರಕೃತಿಗೆ ಗೊಂದಲವಾಗುವುದುಂಟು. ವಿರುದ್ಧ ಆಹಾರಗಳನ್ನು ಪರಸ್ಪರ ಸೇರಿಸಿ ತೆಗೆದುಕೊಂಡುರೆ ಅಡ್ಡ್‌ ಪರಿಣಾಮಗಳಾಗುವುದುಂಟು. ಆದರೆ, ಬಹುತೇಕರಿಗೆ ಈ ಬಗ್ಗೆ ಹೆಚ್ಚು ಅರಿವಿರುವುದಿಲ್ಲವಾದ್ದರಿಂದ ಈ ಎರಡು ವಿರುದ್ಧ ಗುಣಗಳ ಆಹಾರವನ್ನು ಬೆರೆಸಿ ಜೊತೆಯಾಗಿಯೂ ತೆಗೆದುಕೊಳ್ಳುವುದುಂಟು. ಇದರ ಪರಿಣಾಮವೆಂದರೆ, ಜೀರ್ಣಾಂಗವ್ಯೂಹದ ವ್ಯವಸ್ಥೆಯೊಳಗೆ ಆಮ್ಲ ಹೆಚ್ಚು ಉತ್ಪ್ತಿಯಾಗುತ್ತದೆ. ಇದಕ್ಕಾಗಿಯೇ ಅಸಿಡಿಟಿ ಸಮಸ್ಯೆಯೂ ಬಾಧಿಸುತ್ತದೆ. ಕೆಲವರಿಗೆ ಹೀಗೆ ವಿರುದ್ಧ ಆಹಾರಗಳ ಸೇವನೆಯಿಂದ ನೆಗಡಿ, ಶೀತ, ಕಫ, ಕೆಮ್ಮು ಮತ್ತಿತರ ಸಮಸ್ಯೆಗಳೂ ಬರುವುದುಂಟು.

ಬಾಳೆಹಣ್ಣಿನ ಜೊತೆ ಮಾಂಸ

ಬಾಳೆಹಣ್ಣಿನಲ್ಲಿ ಪ್ಯೂರಿನ್‌ ಅಂಶವಿದೆ. ಇದು ಬೇಘ ಕರಗಲು ಸಹಾಯ ಮಾಡುತ್ತದೆ. ಆದರೆ ಮಾಂಸದಲ್ಲಿರುವ ಅತ್ಯಂತ ಹೆಚ್ಚಿನ ಪ್ರೊಟೀನ್‌ ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಆರೋಗ್ಯ ಹಾಗೂ ಆಹಾರ ತಜ್ಞರ ಪ್ರಕಾರ ಇವೆರೆಡರೂ ಹೀಗಾಗಿ ವಿರುದ್ಧ ಗುಣಗಳನ್ನು ಹೊಂದಿರುವುದರಿಂದ ದೇಹದಲ್ಲಿ ಗ್ಯಾಸ್‌ ಉತ್ಪತ್ತಿ ಮಾಡುತ್ತವೆ.

ಬಾಳೆಹಣ್ಣು ಹಾಗೂ ಬೇಕಿಂಗ್‌

ಬಹಳಷ್ಟು ಮಂದಿ ಹೊಸ ಹೊಸ ರೆಸಿಪಿಗಳೊಂದಿಗೆ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರಬಹುದು. ಅಂಥಹ ರೆಸಿಪಿಗಳ ಪೈಕಿ ಬಹುತೇಕರು ಟ್ರೈ ಮಾಡುವುದು ಬಾಳೆಹಣ್ಣನ್ನು ಹಾಕಿ ಕೇಕ್‌, ಬ್ರೆಡ್‌ ಮತ್ತಿತರ ತಿನಿಸುಗಳನ್ನು ಬೇಕ್‌ ಮಾಡುವುದು. ಬಾಳೆಹಣ್ಣು ಹಾಗೂ ಬ್ರೆಡ್‌ ಎರಡೂ ಗುಣದಲ್ಲಿ ವಿರುದ್ಧವಾದವುಗಳು. ಇನ್ನು ಬಾಳೆಹಣ್ಣನ್ನೇ ಸೇರಿಸಿ ಬ್ರೆಡ್‌/ಕೇಕ್‌ ಮಾಡಿದರೆ ಹೇಗೆ? ಸಾಮಾನ್ಯವಾಗಿ ಬಾಳೆಹಣ್ಣು ಬೇಗ ಕರಗಿದರೆ, ಬೇಕ್‌ ಮಾಡಿದ ಕೇಕ್ ಕರಗಲು ಹೆಚ್ಚು ಕಾಳ ತೆಗೆದುಕೊಳ್ಳುತ್ತದೆ. ಹಾಗಾಗಿ ಇವೆರಡೂ ಕೂಡಾ ವಿರುದ್ಧ ಗುಣಗಳನ್ನು ಹೊಂದಿರುವಂಥದ್ದಾಗಿದ್ದು, ಜೀರ್ಣಕ್ರಿಯೆಯಲ್ಲಿ ಇದು ಏರುಪೇರು ಉಂಟು ಮಾಡುತ್ತದೆ.

ಬಾಳೆಹಣ್ಣು ಹಾಗೂ ಸಿಟ್ರಸ್‌ ಹಣ್ಣುಗಳು

ಬಾಳೆಹಣ್ಣಿನ ಜೊತೆಗೆ ಕೆಲವು ಹಣ್ಣುಗಳನ್ನು ಮಿಶ್ರ ಮಾಡಿ ತಿನ್ನುವುದುದಂಟು. ಬಗೆಬಗೆಯ ಹಣ್ಣುಗಳನ್ನು ಸೇರಿಸಿ ತಿಂದರೆ ಒಂದು ಹೊತ್ತಿನ ಊಟ ಮಾಡಿದಂತೆ ಎಂದು ಅಂದುಕೊಳ್ಳುವುದುಂಟು. ಮುಖ್ಯವಾಗಿ ಸಿಟ್ರಸ್‌ ಹಣ್ಣುಗಳಲ್ಲಿ ಆಮ್ಲೀಯ ಗುಣ ಹೆಚ್ಚಿದೆ. ಉದಾಹರನೆಗೆ ನಿಂಬೆಹಣ್ಣು, ದಾಲಿಂಬೆ, ಸ್ಟ್ರಾಬೆರಿ ಮತ್ತಿತರ ಹಣ್ಣೂಗಳನ್ನು ಬಾಳೆಹಣ್ಣಿನ ಜೊತೆಗೆ ತಿನ್ನಬೇಡಿ. ಹೀಗೆ ಮಾಡುವದರಿಂದ ದೇಹದ ತ್ರಿದೋಷಗಳಾದ ವಾತ, ಪಿತ್ತ, ಕಫಗಳಲ್ಲಿ ವ್ಯತ್ಯಾಸವಾಗಿ, ತಲೆನೋವು, ಶೀತ, ನೆಗಡಿ, ತಲೆಸುತ್ತು, ಮತ್ತಿತರ ತೊಂದರೆಗಳೂ ಕಾಡಬಹುದು.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Exit mobile version