Site icon Vistara News

Pre-workout Drinks: ಪ್ರೊಟೀನ್‌ ಶೇಕ್‌ ಬದಲು, ವರ್ಕೌಟ್‌ ಮಾಡೋ ಮುನ್ನ ಕುಡಿಯಬಹುದಾದ ನೈಸರ್ಗಿಕ ಪೇಯಗಳಿವು!

natural drink

ಇಂದು ಪ್ರತಿಯೊಬ್ಬರೂ ಕೂಡಾ ಫಿಟ್‌ ಆಗಿರಬೇಕೆಂದು ಈಗ ಬಯಸುತ್ತಾರೆ. ಅದು ಸಹಜ ಕೂಡಾ. ಇಂದು ಫಿಟ್ನೆಸ್‌ ಮಾರುಕಟ್ಟೆಯೂ (Fitness market) ಅತ್ಯಂತ ವೇಗವಾಗಿ ಬೆಳೆಯುವ ಉದ್ಯಮ. ಹೀಗಾಗಿ, ಈ ಹಾದಿಯಲ್ಲಿ ಸರಿತಪ್ಪುಗಳ ಬಗ್ಗೆ ಯಾರಿಗೂ ಸರಿಯಾಗಿ ಅರಿವಾಗದು. ಮಾಹಿತಿಯುಗದಲ್ಲಿ, ಬೆರಳಿಟ್ಟರೆ ಸಾಕು, ಎಲ್ಲ ಮಾಹಿತಿಗಳೂ ನಮ್ಮ ಫೋನ್‌ ಪರದೆಯ ಮೇಲೆ ಬಂದು ಬೀಳುವ ಕಾರಣ, ಸರಿಯಾದ ಹಾದಿಯನ್ನು ಕಂಡು ಹಿಡಿಯುವುದೂ ಕೂಡಾ ಕಷ್ಟವೇ. ನಾನಾ ಬ್ರ್ಯಾಂಡುಗಳು, ಪ್ರೊಟೀನ್‌ ಶೇಕುಗಳು (protein shake), ಪ್ರಿವರ್ಕೌಟ್‌ ಡ್ರಿಂಕುಗಳು (DIY pre-workout drinks), ಪೋಸ್ಟ್‌ ವರ್ಕೌಟ್‌ ಡ್ರಿಂಕ್‌ಗಳು (Post-workout drinks), ತೂಕ ಇಳಿಸುವ ಪುಡಿಗಳು (weight loss food) ಹೀಗೆ ಎಲ್ಲವೂ ಸಂಸ್ಕರಿಸಲ್ಪಟ್ಟ ಆಹಾರಗಳೇ. ಆದರೆ, ಇವೆಲ್ಲವುಗಳನ್ನು ಕುಡಿಯುವುದರಿಂದ, ತಿನ್ನುವುದರಿಂದ ನಾವು ನಿಜವಾಗಿಯೂ ಆರೋಗ್ಯದತ್ತ ಮುಖ (healthy practice) ಮಾಡುತ್ತಿದ್ದೇವಾ ಅಥವಾ ಆರೋಗ್ಯದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದೇವಾ ತಿಳಿಯುವುದಿಲ್ಲ. ಆದರೆ, ಇಷ್ಟೆಲ್ಲ ಜಾಹಿರಾತುಗಳಿರುವ ಪ್ರಪಂಚದಲ್ಲೂ, ಆದಷ್ಟೂ ನೈಸರ್ಗಿಕ ಆಹಾರಗಳನ್ನು (natural foods) ನೈಸರ್ಗಿಕ ಮಾದರಿಯಲ್ಲೇ ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲೇ (health tips) ಇರಿಸಿಕೊಳ್ಳಬಹುದು. ಹಾಗಾದರೆ ಬನ್ನಿ, ವರ್ಕೌಟ್‌ ಮಾಡಲು ಹೋಗುವ ಮುನ್ನ ಕುಡಿಯಬಹುದಾದ ಪ್ರೊಟೀನ್‌ ಶೇಕ್‌ ಹೊರತುಪಡಿಸಿದ ಸರಳ ನೈಸರ್ಗಿಕ ಪೇಯಗಳು (natural drinks) ಯಾವುವು ಎಂಬುದನ್ನು ನೋಡೋಣ.

1. ಬ್ಲ್ಯಾಕ್‌ ಕಾಫಿ: ಕಾಫಿ, ಚಹಾ ಒಳ್ಳೆಯದಲ್ಲ ನಿಜ. ಆದರೆ, ಹಿತಮಿತವಾಗಿದ್ದರೆ, ಇದರಲ್ಲೂ ಪೋಷಕ ತತ್ವಗಳಿವೆ. ಜೊತೆಗೆ ಕಾಫಿಗೆ, ಚಹಾಕ್ಕೆ ಹಾಲು ಸಕ್ಕರೆ ಹಾಕಿ ಕುಡಿಯುವ ಮಾದರಿಯಲ್ಲ ಇದು. ಬದಲಾಗಿ ಬ್ಲ್ಯಾಕ್‌ ಕಾಫಿಯ ಮಾದರಿಯಲ್ಲಿ ಪ್ರಿವರ್ಕೌಟ್‌ ಡ್ರಿಂಕ್‌ ಆಗಿ ಕುಡಿಯುವುದರಿಂದ ದೇಹಕ್ಕೆ ಕೆಲವು ಲಾಭಗಳಿವೆ. ಕಾಫಿಯಲ್ಲಿ ಕೆಫಿನ್‌ ಇದ್ದು, ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವು ಲಾಭಗಳಿವೆ. ಸಂಶೋಧನೆಗಳ ಪ್ರಕಾರ ಕಾಫಿಗೆ ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಗುಣವಿದ್ದು, ತಲೆ ಸುತ್ತದಂತೆಯೂ ಇದು ತಡೆಯುತ್ತದೆ.

2. ಬೀಟ್‌ರೂಟ್‌ ಜ್ಯೂಸ್‌: ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಶೇಕ್‌ ಪುಡಿಗಳಿಗಿಂತ, ನೈಸರ್ಗಿಕವಾಗಿ ಲಭ್ಯವಿರುವ ಅತ್ಯಂತ ಲಾಭದಾಯಕವಾಗಿರುವ ಡ್ರಿಂಕ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌. ವರ್ಕೌಟ್‌ಗೂ ಮೊದಲು ಈ ಜ್ಯೂಸ್‌ ಕುಡಿಯುವುದರಿಂದ ಇದರಲ್ಲಿ ಹೇರಳವಾಗಿರುವ ನೈಟ್ರೇಟ್‌ ಅಂಶವು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ, ರಕ್ತ ಪರಿಚಲನೆಯು ಚುರುಕಾಗಿ ಮಾಂಸಖಂಡಗಳು ವೃದ್ಧಿಗೊಳ್ಳುತ್ತದೆ.

3. ಗ್ರೀನ್‌ ಟೀ: ಮತ್ತೊಂದು ಅತ್ಯುತ್ತಮ ಪ್ರಿವರ್ಕೌಟ್‌ ಡ್ರಿಂಕ್‌ ಎಂದರೆ ಅದು ಗ್ರೀನ್‌ ಟೀ. ಈ ಗ್ರೀನ್‌ ಟೀಯಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿದ್ದು ಕಡಿಮೆ ಕೆಫಿನ್‌ ಇದೆ. ವರ್ಕೌಟ್‌ಗೂ ಸುಮಾರು ಒಂದು ಗಂಟೆಯಷ್ಟು ಮುನ್ನ ಗ್ರೀನ್‌ ಟೀಯನ್ನು ಸೇವಿಸಿದರೆ ಇದರಿಂದ ಶಕ್ತಿ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲ, ವ್ಯಾಯಾಮದ ಸಂದರ್ಭ ಬಹುಬೇಗನೆ ಸುಸ್ತಾಗುವುದಿಲ್ಲ.

4. ಎಳನೀರು: ಎಳನೀರು ಕೂಡಾ ವಕೌಟ್‌ಗೂ ಮೊದಲು ಹಾಗೂ ನಂತರ ಅತ್ಯುತ್ತಮ ಡ್ರಿಂಕ್‌. ಇದು ನೈಸರ್ಗಿಕವಾದ ಎಲೆಕ್ಟ್ರೋಲೈಟ್‌ ಕೂಡಾ. ದೇಹಕ್ಕೆ ಬೇಕಾದ ನೀರಿನಂಶವನ್ನು ಇದು ನೀಡಿ, ಸದಾ ಹೈಡ್ರೇಟೆಡ್‌ ಆಗಿರುವಂತೆ ನೋಡಿಕೊಳ್ಳುತ್ತದೆ.

5. ಬಾಳೆಹಣ್ಣು ಹಾಗೂ ಸೇಬಿನ ಜ್ಯೂಸ್‌: ಸೇಬು ಹಾಗೂ ಬಾಳೆಹಣ್ಣಿನ ಜ್ಯೂಸ್‌ ವರ್ಕೌಟ್‌ಗೂ ಒಂದು ಗಂಟೆ ಮೊದಲು ಕುಡಿಯುವುದರಿಂದ ಸಾಕಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ಹೆಚ್ಚು ಹೊತ್ತಿನ ಕಾಲ ವರ್ಕೌಟ್‌ ಮಾಡುತ್ತಲೇ ಇರಬೇಕಾದ ಪರಿಸ್ಥಿತಿ ಬಂದರೆ ಇದು ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಹೆಚ್ಚು ಹೊತ್ತಿನ ಕ್ಷಮತೆಯನ್ನು ನೀಡುತ್ತದೆ.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

Exit mobile version