ಭಾರತೀಯ ಸಂಸ್ಕೃತಿಯಲ್ಲಿ (Indian culture) ವೀಳ್ಯದೆಲೆಗೆ (betel leaves) ಬಹುಮಾನ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಶಾಸ್ತ್ರ, ಸಂಪ್ರದಾಯಗಳಲ್ಲಿ ವೀಳ್ಯದೆಲೆ ಅಡಿಕೆಯನ್ನು ನೀಡಿ ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಆಯುರ್ವೇದದಲ್ಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಾತ್ರಿ ಭೋಜನದ (dinner) ಬಳಿಕ ವೀಳ್ಯದೆಲೆ (Betel Leaves Health Benefits) ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.
ಊಟದ ಬಳಿಕ ವೀಳ್ಯದೆಲೆ, ಅಡಿಕೆ ಜಗಿಯುವ ನಮ್ಮ ಹಿರಿಯರ ಅಭ್ಯಾಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಈಗ ಇದು ಕಡಿಮೆಯಾಗಿ ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸುವ ಪಾನ್ ಹೆಚ್ಚು ಜನಪ್ರಿಯತೆ ಪಡೆದಿದೆ.
ವೀಳ್ಯದೆಲೆಗಳು ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸುವುದು, ಬಾಯಿಯ ನೈರ್ಮಲ್ಯ, ಕರುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರು ಉತ್ತಮ ಜೀರ್ಣಕ್ರಿಯೆಗಾಗಿ ರಾತ್ರಿಯ ಆಹಾರದ ಬಳಿಕ ಒಂದು ವೀಳ್ಯದೆಲೆಯನ್ನು ಜಗಿಯುವ ಅಭ್ಯಾಸ ಒಳ್ಳೆಯದು. ಇದರಲ್ಲಿರುವ ರಸ ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಉತ್ತೇಜನ ಸಿಗುತ್ತದೆ. ಹೊಟ್ಟೆ ಉಬ್ಬರ, ಅಸಿಡಿಟಿ ತೊಂದರೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.
ಬಾಯಿಯ ಅರೋಗ್ಯ ಕಾಪಾಡುತ್ತದೆ
ವೀಳ್ಯದೆಲೆಗಳು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣವನ್ನು ಹೊಂದಿದೆ. ಇದು ಬಾಯಿಯ ಸೋಂಕುಗಳನ್ನು ಎದುರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.
ಬಾಯಿ ಸ್ವಚ್ಛತೆ
ಆಯುರ್ವೇದದ ಪ್ರಕಾರ ಭೋಜನದ ಬಳಿಕ ವೀಳ್ಯದೆಲೆ ಜಗಿಯುವುದು ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಲ್ಲಿನಲ್ಲಿ ಕುಳಿಗಳಾಗುವುದು, ಒಸಡು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಒತ್ತಡ, ಆತಂಕ ನಿವಾರಣೆ
ಒತ್ತಡ, ಆತಂಕದ ಸಮಸ್ಯೆ ಇದ್ದಾರೆ ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಒಳ್ಳೆಯದು. ಆಯುರ್ವೇದದ ಪ್ರಕಾರ ವೀಳ್ಯದೆಲೆಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಪರಿಣಾಮಗಳನ್ನು ಬೀರುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ನರಮಂಡಲಕ್ಕೆ ವಿಶ್ರಾಂತಿಯನ್ನು ನೀಡಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ದೇಹದಿಂದ ವಿಷವನ್ನು ಹೊರಹಾಕುತ್ತದೆ
ಆಯುರ್ವೇದದಲ್ಲಿ ವೀಳ್ಯದೆಲೆಗಳು ವಿಷ ಹೊರತೆಗೆಯುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವನೆ ನೈಸರ್ಗಿಕವಾಗಿ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಉಸಿರಾಟ ಸಮಸ್ಯೆ ನಿವಾರಿಸುತ್ತದೆ
ವೀಳ್ಯದೆಲೆಗಳು ಉಸಿರಾಟ ತೊಂದರೆಯನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ ಉಂಟು ಮಾಡುವ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.
ಕೆಮ್ಮು ನಿವಾರಣೆ
ಕೆಮ್ಮಿಗೆ ವೀಳ್ಯದೆಲೆ ಅತ್ಯತ್ತಮ ಔಷಧ. ವೀಳ್ಯದೆಲೆಗಳು ಗಂಟಲು ಮತ್ತು ಉಸಿರಾಟದ ಹಾದಿಯಲ್ಲಿರುವ ತೊಂದರೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: Junk Food Side Effects: ಗೇಮಿಂಗ್ ದಾಸರಾದ ಮಕ್ಕಳು ಜಂಕ್ ಫುಡ್ ವ್ಯಸನಿಗಳಾಗುವ ಸಂಭವ ಹೆಚ್ಚು!
ಆರೋಗ್ಯಕರ ಚಯಾಪಚಯಕ್ಕೆ ಉತ್ತೇಜನ
ದೇಹದ ತೂಕ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಚಯಾಪಚಯವು ನಿರ್ಣಾಯಕವಾಗಿದೆ. ವೀಳ್ಯದೆಲೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ ಉತ್ತಮ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಶಕ್ತಿಯ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ.
ಮೂರು ದೋಷ ನಿವಾರಣೆ
ಆಯುರ್ವೇದದ ಪ್ರಕಾರ ಮೂರು ದೋಷಗಳಾದ ವಾತಾ, ಪಿತ್ತ ಮತ್ತು ಕಫದಲ್ಲಿನ ಅಸಮತೋಲನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿರುತ್ತದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವಿಸುವುದು ಈ ಮೂರು ಪ್ರಮುಖ ದೋಷಗಳನ್ನು ಸಮತೋಲನಗೊಳಿಸಲು ಮತ್ತು ದೇಹದೊಳಗೆ ಸಾಮರಸ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.