Site icon Vistara News

Blood Pressure: ಈ 10 ಸೂತ್ರ ಪಾಲಿಸಿ; ಬಿಪಿ ನಿಮ್ಮ ಹತ್ತಿರವೂ ಸುಳಿಯದು!

Blood Pressure

ನಾವು ತಿನ್ನುವ ಆಹಾರಗಳೇ (food) ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ವಿಷವಾಗುತ್ತವೆ. ಅದರಲ್ಲೂ ಮುಖ್ಯವಾಗಿ ಸಿಹಿ (suger) ಮತ್ತು ಉಪ್ಪು (salt/Sodium) ಮಿತವಾಗಿದ್ದಷ್ಟೂ ಆರೋಗ್ಯಕ್ಕೆ ಉತ್ತಮ. ಇವುಗಳ ಪ್ರಮಾಣ ಜಾಸ್ತಿಯಾದರೆ ಮಧುಮೇಹ (diabetes), ರಕ್ತದೊತ್ತಡವನ್ನು (Blood Pressure) ನಾವೇ ಆಹ್ವಾನಿಸದಂತಾಗುತ್ತದೆ. ಸಕ್ಕರೆ ಪ್ರಮಾಣವನ್ನಾದರೂ ನಿಯಂತ್ರಿಸಬಹುದು. ಆದರೆ ಉಪ್ಪು ನಮ್ಮ ಆಹಾರದಲ್ಲಿ ಎಷ್ಟಿದೆ, ನಮ್ಮ ಆರೋಗ್ಯಕ್ಕೆ ಅದು ಸರಿಯಾದ ಪ್ರಮಾಣವೇ ಎನ್ನುವುದನ್ನು ಹೇಳುವುದು ಕಷ್ಟ.

ಇತ್ತೀಚೀನ ದಿನಗಳಲ್ಲಿ ಮನೆಯಲ್ಲಿ ಒಬ್ಬರಾದರೂ ಬಿಪಿ, ಶುಗರ್ ನಿಂದ ಬಳಲುತ್ತಿರುವವರು ಇದ್ದೇ ಇರುತ್ತಾರೆ. ಸರಿಯಾದ ಆಹಾರ ಪದ್ಧತಿ, ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯವೇನಲ್ಲ.
ಅಧಿಕ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಇರುವ ಸರಳ ದಾರಿ. ಇದಕ್ಕಾಗಿ ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Ghee benefits: ನಿತ್ಯ ಒಂದು ಚಮಚ ತುಪ್ಪ ಸೇವಿಸಿ, ಆರೋಗ್ಯದಲ್ಲಿನ ಬದಲಾವಣೆ ಗಮನಿಸಿ!

1. ಆಹಾರದ ಲೇಬಲ್‌ಗಳನ್ನು ಪರಿಶೀಲಿಸಿ

ಸಂಸ್ಕರಿಸಿದ ಆಹಾರಗಳನ್ನು ಖರೀದಿ ಮಾಡುವಾಗ ಸೋಡಿಯಂ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತಿಳಿಯಲು ಆಹಾರದ ಲೇಬಲ್ ಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಕಡಿಮೆ-ಸೋಡಿಯಂ, ಉಪ್ಪು ಸೇರಿಸಲಾಗಿಲ್ಲಅಥವಾ ಸೋಡಿಯಂ-ಮುಕ್ತ ಎಂದಿರುವ ಲೇಬಲ್ ಗಳನ್ನು ಹೊಂದಿರುವ ಸಂಸ್ಕರಿಸಿದ ಆಹಾರಗಳನ್ನೇ ಆಯ್ಕೆ ಮಾಡಿ.


2. ಮನೆಯಲ್ಲೇ ಅಡುಗೆ ಮಾಡಿ

ಮನೆಯಲ್ಲಿ ಅಡುಗೆ ಮಾಡುವುದರಿಂದ ಆಹಾರಕ್ಕೆ ಸೇರಿಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೇ ಉಪ್ಪಿನ ಬದಲಿಗೆ ಭಕ್ಷ್ಯಗಳ ಸುವಾಸನೆ ಹೆಚ್ಚಿಸಲು ಗಿಡಮೂಲಿಕೆಗಳು, ಮಸಾಲೆಗಳು, ಸಿಟ್ರಸ್ ರಸಗಳು ಮತ್ತು ವಿನೆಗರ್ ಬಳಸಬಹುದು. ಉಪ್ಪನ್ನು ಅವಲಂಬಿಸದೆ ಊಟದ ರುಚಿಯನ್ನು ಹೆಚ್ಚಿಸಲು ವಿಭಿನ್ನ ಸುವಾಸನೆ ಸಂಯೋಜನೆಗಳ ಪ್ರಯೋಗ ಮಾಡಬಹುದು.


3. ಸಂಸ್ಕರಿಸಿದ ಆಹಾರ ಬೇಡ

ಆದಷ್ಟು ರೆಡಿಮೇಡ್ ಅಥವಾ ಸುಲಭವಾಗಿ ಕುಕ್ ಮಾಡಬಹುದಾದ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ. ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಸೋಡಿಯಂ ಅನ್ನು ಬಳಸಲಾಗಿರುತ್ತದೆ. ಇದನ್ನು ಬಳಸದೇ ಇರುವುದು ಉತ್ತಮ. ಬಳಸುವುದಾದರೆ ಆದಷ್ಟು ಕಡಿಮೆಗಳಿಸಿ.

4. ತಾಜಾ ಆಹಾರವನ್ನು ಆಯ್ಕೆ ಮಾಡಿ

ತಾಜಾ ಹಣ್ಣು, ತರಕಾರಿ, ಮಾಂಸ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ. ಅವು ನೈಸರ್ಗಿಕವಾಗಿರುವುದರಿಂದ ಸೋಡಿಯಂ ಮಟ್ಟ ಕಡಿಮೆ ಇರುತ್ತದೆ. ಹೆಚ್ಚುವರಿ ಉಪ್ಪನ್ನು ಸೇರಿಸದೆಯೇ ಅಗತ್ಯವಾದ ಪೋಷಕಾಂಶಗಳನ್ನು ಇವು ಒದಗಿಸುತ್ತದೆ.

5. ಆಹಾರವನ್ನು ತೊಳೆಯಿರಿ

ಪ್ಯಾಕ್ ಮಾಡಿ ಬರುವ ಬೀನ್ಸ್, ತರಕಾರಿ, ಮೀನುಗಳನ್ನು ಬಳಸುವ ಮೊದಲು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದು ಕ್ಯಾನಿಂಗ್ ಪ್ರಕ್ರಿಯೆಯಲ್ಲಿ ಬಳಸಲಾಗುವ ಹೆಚ್ಚುವರಿ ಉಪ್ಪನ್ನು ತೆಗೆದುಹಾಕುತ್ತದೆ. ಆಹಾರದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ.

6. ಉಪ್ಪು ಬಳಕೆ ಮಿತವಾಗಿರಲಿ

ಆಹಾರದಲ್ಲಿ ಉಪ್ಪನ್ನು ಮಿತವಾಗಿಸಿ ಅಥವಾ ಬಳಸದೇ ಇರಬಹುದು. ಉಪ್ಪಿನ ಬದಲಿಗೆ ಸುವಾಸನೆ ಮಾಡಲು ಪೊಟ್ಯಾಸಿಯಮ್ ಆಧಾರಿತ ಉಪ್ಪು ನ್ನು ಬಳಸಬಹುದು. ಗಿಡಮೂಲಿಕೆ, ಮಸಾಲೆಗಳನ್ನು ಹಾಕಿ ಉಪ್ಪನ್ನು ಬಳಸದೇ ಇರಬಹುದು. ಪೊಟ್ಯಾಸಿಯಮ್ ರಕ್ತನಾಳಗಳ ಹಿಗ್ಗುವಿಕೆಯನ್ನು ಉತ್ತೇಜಿಸಿ ಮೂತ್ರದ ಮೂಲಕ ಸೋಡಿಯಂ ಅನ್ನು ಹೊರಹಾಕುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

7. ರೆಡಿಮೇಡ್‌ಗಳಿಂದ ದೂರವಿರಿ

ಸಾಸ್, ಕೆಚಪ್, ಸಲಾಡ್ ಗೆ ಹಾಕುವ ರೆಡಿಮೇಡ್ ಸಾಮಗ್ರಿಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇವುಗಳನ್ನು ಮನೆಯಲ್ಲೇ ತಯಾರಿಸಿ ಅಥವಾ ಸೋಡಿಯಂ ಮುಕ್ತವಾಗಿರುವುದನ್ನು ಆಯ್ಕೆ ಮಾಡಿ.

8. ಬೀದಿ ಬದಿ ಆಹಾರ ಸೇವಿಸಬೇಡಿ

ಬೀದಿ ಬದಿ, ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಉಪ್ಪು ಮತ್ತು ಸುವಾಸನೆ ವರ್ಧಕಗಳನ್ನು ಸೇರಿಸುವುದರಿಂದ ಆಹಾರದಲ್ಲಿ ಸೋಡಿಯಂನಲ್ಲಿ ಅಧಿಕವಾಗಿರುತ್ತದೆ. ಆರೋಗ್ಯಕರ ಆಯ್ಕೆಗಳನ್ನು ಬಳಸುವಾಗ ಉಪ್ಪು ಸೇರಿಸದೆಯೇ ಆಹಾರ ತಯಾರಿಸಲು ಹೇಳಿ.

9. ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ಹೆಚ್ಚುವರಿ ಸೋಡಿಯಂ ಮೂತ್ರದ ಮೂಲಕ ಹೊರಹೋಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೈಹಿಕವಾಗಿ ಸಕ್ರಿಯರಾಗಿದ್ದರೆ ಅಥವಾ ಬಿಸಿ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರನ್ನು ಕುಡಿಯಿರಿ.

10. ಸೋಡಿಯಂ ಬಳಕೆಗೆ ಮಿತಿ ಹೇರಿ

ಆಹಾರದಲ್ಲಿ ಸೋಡಿಯಂ ಬಳಸಲೇಬೇಕು ಎಂದಿದ್ದರೆ ಕನಿಷ್ಠ ಪ್ರಮಾಣವನ್ನು ಬಳಸಿ. ಎಷ್ಟು ಬಳಸುತ್ತೇವೆ ಎನ್ನುವುದರ ಮೇಲೆ ಹೆಚ್ಚಿನ ಗಮನವಿರಲಿ. ಮಸಾಲೆಯುಕ್ತ ಉಪ್ಪು ತಿಂಡಿಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ತಿನ್ನಬೇಡಿ.

Exit mobile version