Site icon Vistara News

Brain Exercise: ಚುರುಕಾಗಿರಬೇಕೇ? ದೇಹಕ್ಕೆ ವ್ಯಾಯಾಮ ಮಾಡಿದರೆ ಸಾಲದು, ಮೆದುಳಿಗೂ ಮಾಡಿ!

Brain Exercise

ವ್ಯಾಯಾಮ ನಮ್ಮ ದೇಹಕ್ಕೆ ಮಾತ್ರ ಸಾಲದು, ಮೆದುಳಿಗೂ ಬೇಕು ಎಂಬುದನ್ನು ನೀವು ಒಪ್ಪುತ್ತೀರಾ? ಗೊತ್ತಿಲ್ಲದಿದ್ದರೂ ನೀವು ನಂಬಲೇಬೇಕು. ಯಾಕೆಂದರೆ, ಮೆದುಳಿನ ಶಕ್ತಿಯನ್ನು ಬಳಸಿದಷ್ಟೂ, ಅದನ್ನು ಒರೆಗೆ ಹಚ್ಚಿದಷ್ಟೂ ಹರಿತವಾಗಿತ್ತದೆ. ವಯಸ್ಸಾಗಲಿ ಬಿಡಲಿ, ಮೆದುಳನ್ನು ಆಗಾಗ ಹರಿತಗೊಳಿಸುವ ಕೆಲಸ ಆಗುತ್ತಲೇ ಇರಬೇಕು. ಅದಕ್ಕಾಗಿ ಮೆದುಳಿಗೆ ಬೇಕಾದ ಅವಕಾಶಗಳನ್ನು ಸೃಷ್ಟಿ ಮಾಡುತ್ತಲೇ ಇರಬೇಕು. ಇದು ನಮಗೆ ಕೆಲವೊಮ್ಮೆ ಕಿರಿಕಿರಿಯೆನಿಸಬಹುದು. ಹಾಗೆ ಮಾಡಲು ಆಲಸ್ಯ ಬರಬಹುದು. ಅಥವಾ ಅಯ್ಯೋ ವಯಸ್ಸಾಯಿತು, ಇನ್ಯಾಕೆ ಎಂದೆಲ್ಲ ಅನಿಸಬಹುದು. ಆದರೆ, ಮಿದುಳು ನಿಮ್ಮ ದೇಹದ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ವರ್ತಿಸತೊಡಗಿದರೆ ಏನು ಮಾಡುವಿರಿ? ದೇಹಕ್ಕೆ ವ್ಯಾಯಾಮವಿಲ್ಲದೆ, ಚುರುಕುತನವಿಲ್ಲದೆ, ಆಲಸ್ಯಕ್ಕೆ ದಾಸರಾಗಿ ಸಣ್ಣ ವಯಸ್ಸಿನಲ್ಲಿಯೇ, ವಯಸ್ಸಾದವರಂತೆ ದೇಹ ಶಕ್ತಿ ಹೀನವಾದಂತೆ ಮೆದುಳೂ ಆಗಬಹುದು. ಅದಕ್ಕಾಗಿ ಆಗಾಗ, ಮಿದುಳಿಗೆ ಕೆಲವು ವ್ಯಾಯಾಮಗಳನ್ನು ಕೊಡುತ್ತಿರಿ. ಅದನ್ನು ಚುರುಕಾಗಿಡಿ. ಬನ್ನಿ, ಮೆದುಳಿನ ವ್ಯಾಯಾಮಗಳಾವುವು (Brain Exercise) ಎಂಬುದನ್ನು ನೋಡೋಣ.

ಹೊಸ ಹೊಸ ವಿಚಾರಗಳನ್ನು ಕಲಿಯಿರಿ

ಇದಕ್ಕೆ ಕೊಂಚ ತಾಳ್ಮೆ ಬೇಕು. ಆದರೂ ಇದು ಮೆದುಳಿಗೆ ಒಳ್ಳೆಯದು. ಇದರಿಂದ ಮೆದುಳಿಗೆ ಸಾಕಷ್ಟು ಪ್ರಯೋಜನಗಳಿವೆ. ಸಂಶೋಧನೆಗಳ ಪ್ರಕಾರ, ಹೊಸ ಸ್ಕಿಲ್‌ಗಳನ್ನು ಕಲಿಯುವುದಕ್ಕೆ ನಮಗೆ ಕಲಿಯುವುದಕ್ಕೆ ತಾಳ್ಮೆ ಬೇಕು. ಜೊತೆಗೆ ಮಿದುಳನ್ನು ಉಪಯೋಗಿಸಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಹೊಸತನ್ನು ಕಲಿಯುವ ಕ್ರಿಯೆ ಸರಾಗವಾಗಿ ಆಗುತ್ತದೆ. ಆದರೆ, ವಯಸ್ಸಾಗುತ್ತಾ ಆಗುತ್ತಾ ಇವು ನಿಂತುಬಿಡುತ್ತವೆ. ಒಂದೇ ವಿಚಾರಕ್ಕೆ ನಾವು ಅಡ್ಜಸ್ಟ್‌ ಆಗಿಬಿಡುತ್ತೇವೆ. ಹೊಸ ಸ್ಕಿಲ್‌ಗಳನ್ನು ಕಲಿಯುವ ಗೊಡವೆಗೆ ಹೋಗುವುದಿಲ್ಲ. ಅದಕ್ಕಾಗಿ ವರ್ಷಕ್ಕೊಂದಾದರೂ ಹೊಸತನ್ನು ಕಲಿಯುವ ಪ್ರಯತ್ನ ಮಾಡಿ. ಈಜುವುದು, ಫೋಟೋಗ್ರಫಿ, ಕಸೂತಿ, ನಿಟ್ಟಿಂಗ್‌, ವಿಡಿಯೋ ಎಡಿಟಿಂಗ್‌, ಅಥವಾ ಇನ್ನೇನಾದರೂ ಹೊಸತೊಂದು ಹವ್ಯಾಸವನ್ನು ಸಮಯ ಮಾಡಿ ಕಲಿತುಕೊಳ್ಳಿ. ಆಗ ಜೀವನಪ್ರೀತಿ ಹೆಚ್ಚುತ್ತದೆ. ಲವಲವಿಕೆ ಮೂಡುತ್ತದೆ. ಮಿದುಳು ಚುರುಕಾಗಿ ಉಲ್ಲಾಸ ಹೆಚ್ಚಾಗುತ್ತದೆ.

Running In Cold Weather

ಸಾಮಾಜಿಕವಾಗಿ ಕ್ರಿಯಾಶೀಲರಾಗಿ

ಸಾಮಾಜಿಕವಾಗಿ ಕ್ರಿಯಾಶೀಲರಾಗಿ ಇರುವ ಮಂದಿಯ ಮಿದುಳು ಹೆಚ್ಚು ಚುರುಕಾಗಿ ಇರುತ್ತದಂತೆ. ಸಮಾಜಿಕವಾಗಿ ಚುರುಕಾಗಿಲ್ಲದೆ, ತಮ್ಮ ಪಾಡಿಗೆ ತಾವಿರುವುದಕ್ಕಿಂತ, ಹೊರಗಡೆ, ಜನರ ಜೊತೆ ಬೆರೆಯುವುದರಿಂದ, ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ಮಿದುಳು ಚುರುಕಾಗುತ್ತದಂತೆ.

ನಿಮ್ಮ ಇನ್ನೊಂದು ಕೈಯನ್ನು ಹೆಚ್ಚು ಬಳಸಿ

ತಮಾಷೆ ಅನಿಸಬಹುದು. ಆದರೆ ನಿಜ. ನೀವು ಬಲಗೈಯ ಮಂದಿಯಾದರೆ, ಪ್ರಯತ್ನಪೂರ್ವಕವಾಗಿ ಎಡಗೈಯನ್ನೂ ಬಳಸತೊಡಗಿ. ನೀವು ಎಡಗೈಯ ಮಂದಿಯಾದರೆ, ನಿಮ್ಮ ಬಲಗೈಗೆ ಕೆಲಸ ಕೊಡಿ. ಉದಾಹರಣೆಗೆ, ನೀವು ಬಲಗೈಯಲ್ಲಿ ಊಟ ಮಾಡುತ್ತಿರುವಾಗ, ಏನಾದರೊಂದು ನೋಟ್‌ ಮಾಡಿಕೊಳ್ಳಲು ಎಡಗೈಯನ್ನು ಬಳಸಿ. ಹೀಗೆ ನಿಮಗೆ ಕಂಫರ್ಟ್‌ ಇಲ್ಲದ ಕೈಯಿಂದ ಕಂಫರ್ಟ್‌ ಇಲ್ಲದ ಕೆಲಸವನ್ನು ಮಾಡುವುದರಿಂದ ಮಿದುಳಿನ ಶಕ್ತಿ ಹೆಚ್ಚುತ್ತದೆ. ಮಿದುಳು ಆಕ್ಟಿವೇಟ್‌ ಆಗುತ್ತದೆ.

ಓಡಿ

ಮೆದುಳಿನ ಆರೋಗ್ಯ ಹೆಚ್ಚಿಸುವ ದೈಹಿಕ ವ್ಯಾಯಾಮಗಳಲ್ ಪೈಕಿ ಓಟ ಬಹು ಮುಖ್ಯವಾದದ್ದು. ಹಾಗಾಗಿ, ನಿಮ್ಮ ದೈಹಿಕ ಆರೋಗ್ಯ ಹಾಗೂ ಮಿದುಳಿನ ಆರೋಗ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು ಓಟ ನಿಮ್ಮಿಂದ ಸಾಧ್ಯ ಎಂದಾದರೆ ಅದನ್ನು ಮಾಡಿ. ಕನಿಷ್ಟ ಪಕ್ಷ ಓಡುವುದನ್ನು ಆರಂಭಿಸಲು, ನಡಿಗೆಯ ಬದಲು ಜಾಗಿಂಗ್‌ ಮಾಡಿ. ಕೆಲವು ಸಂಶೋಧನೆಗಳ ಪ್ರಕಾರ, ಸದಾ ಓಡುವ ಮಂದಿಯ ಮಿದುಳು ಬೇರೆ ವ್ಯಾಯಾಮ ಮಾಡುವ ಮಂದಿಯ ಮಿದುಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುತ್ತದೆ. ಇದು ಒಮ್ಮೆಲೆ ಹೆಚ್ಚು ಕೆಲಸಗಳನ್ನು ಜೊತೆಯಾಗಿ ಮಾಡುವ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸೇರಿದಂತೆ ಹಲವು ಸಾಮರ್ಥ್ಯಗಳನ್ನು ವೃದ್ಧಿಸುತ್ತದೆ.

ಇದನ್ನೂ ಓದಿ: Benefits of Spinach Juice: ಪಾಲಕ್‌ ಜ್ಯೂಸ್‌ ಕುಡಿಯುವುದರ ಲಾಭಗಳಿವು

Exit mobile version