Site icon Vistara News

Breakfast Tips: ಬೆಳಗ್ಗಿನ ಉಪಹಾರಕ್ಕೆ ಈ ತಿಂಡಿಗಳನ್ನು ತಿನ್ನುತ್ತಿದ್ದೀರಾ? ಹಾಗಾದರೆ ನೀವು ತೂಕ ಇಳಿಸಲಾರಿರಿ!

breakfast

ಬೆಳಗ್ಗಿನ ಉಪಹಾರವು (breakfast) ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು (healthy breakfast) ಎಂಬುದನ್ನು ನಮ್ಮ ಹಿರಿಯರು ಮಾತ್ರವಲ್ಲ ಆಯುರ್ವೇದವೂ ಹೇಳುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ದಕ್ಷಿಣ ಭಾರತೀಯರ ಆಹಾರ ಪದ್ಧತಿ ಬೆಳಗ್ಗಿನ ಉಪಹಾರ ಸಾಕಷ್ಟು ಪೋಷಕಾಂಶಗಳನ್ನು ಪೂರೈಕೆ ಮಾಡುವ ಆರೋಗ್ಯಕರ ಶೈಲಿಯೂ ಹೌದು. ಆದರೆ, ಇತ್ತೀಚೆಗೆ ಬಹುತೇಕರು ತೂಕ ಇಳಿಸುವ ಮಂದಿ ಪಾಶ್ಚಾತ್ಯ ಶೈಲಿಯ ಅನುಕರಣೆಯಿಂದಲೋ, ಕ್ಯಾಲರಿಗಳ ಲೆಕ್ಕಾಚಾರದಲ್ಲೋ ಬೆಳಗಿನ ಉಪಹಾರವನ್ನೇ ತ್ಯಜಿಸುವ ಅಥವಾ ಕೆಲವು ಆಹಾರಕ್ರಮಗಳಿಗೆ ಜೋತು ಬಿದ್ದು ಪೋಷಕಾಂಶಗಳೇ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗದಂತಾಗುತ್ತದೆ. ನಮ್ಮ ಇಡ್ಲಿ, ದೋಸೆ, ಉಪ್ಪಿಟ್ಟು, ಪೊಂಗಲ್‌ ಮತ್ತಿತರ ಸಮೃದ್ಧ ಬೆಳಗಿನ ತಿಂಡಿಗಳನ್ನೇ ನಾವು ಬಿಟ್ಟು ಫಟಾಫಟ್‌ ಬದುಕಿನ ಲಗಾಮು ಹಿಡಿದು ಶಾರ್ಟ್‌ಕಟ್‌ನಿಂದ ಸಾಗಲು ಹೊರಟರೆ, ತೂಕ ಇಳಿಸುವುದು (Weight loss) ಖಂಡಿತ ಸಾಧ್ಯವಾಗದು. ಬನ್ನಿ, ಯಾವೆಲ್ಲ ಆಹಾರಗಳು ಬೆಳಗ್ಗಿನ ಉಪಹಾರದಲ್ಲಿದ್ದರೆ ನಿಮಗೆ ತೂಕ ಇಳಿಕೆ ಸಾಧ್ಯವಾಗದು (breakfast tips) ಎಂಬುದನ್ನು ನೋಡೋಣ.

1. ಬ್ರೆಡ್‌, ಟೋಸ್ಟ್: ಬಹಳಷ್ಟು ಮಂದಿಯ ಬೆಳಗು ಆರಂಭವಾಗುವುದು ಬ್ರೆಡ್‌ನಿಂದ. ಬ್ರೆಡ್‌, ಬೆಣ್ಣೆ, ಜ್ಯಾಮ್‌ ಇತ್ಯಾದಿಗಳು ನಿತ್ಯದ ಆರಂಭ. ಆದರೆ, ಇದು ನಿಮ್ಮ ಇಡಿಯ ಜೀರ್ಣಾಂಗವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಬ್ರೆಡ್‌ ಬದಲಿಗೆ ಇಡಿಯ ಧಾನ್ಯಗಳ ಗೋಧಿಯ ಬ್ರೆಡ್‌ ಒಳ್ಳೆಯದೆಂದರೂ, ಇದರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ನಿತ್ಯವೂ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ನನೆನಪಿಡಿ. ಇವು ಸಂಸ್ಕರಿಸಿ ಆಹಾರಗಳಾಗಿರುವುದರಿಂದ ಬೆಳಗ್ಗಿನ ಆರಂಭವೇ ಇಂತಹುಗಳಿಂದ ಆರಂಭವಾದರೆ ಖಂಡಿತ ತೂಕ ಇಳಿಯುತ್ತದೆ ಎಂದುಕೊಂಡರೆ ಅದು ನಿಮ್ಮ ಭ್ರಮೆಯೇ ಹೊರತು, ಆರೋಗ್ಯದ ಲಕ್ಷಣವಲ್ಲ!

2. ಸಂಸ್ಕರಿಸಿದ ಮಾಂಸ: ಬೆಳಗ್ಗಿನ ಉಪಹಾರದಲ್ಲಿ ಸಂಸ್ಕರಿಸಿ ಮಾಂಸವನ್ನು ನೀವು ಸೇರಿಸುತ್ತಿದ್ದೀರಿ ಎಂದಾದಲ್ಲಿ ಖಂಡಿತವಾಗಿಯೂ ಬಿಟ್ಟು ಬಿಡಿ. ಇದು ನಿಮ್ಮ ತೂಕ ಇಳಿಕೆಯಲ್ಲಿ ಸಹಾಯ ಮಾಡುವುದಿಲ್ಲ. ಬೆಳಗ್ಗಿನ ಆರಂಭ ಇಂಥ ಆಹಾರದಿಂದ ಆದರೆ ಅದು ಒಳ್ಳೆಯ ಆಹಾರದ ಲಕ್ಷಣವಲ್ಲ.

3. ಕುಕ್ಕೀಸ್‌ ಮತ್ತು ಕೇಕ್‌ಗಳು: ಬೆಳಗ್ಗೆನ ಉಪಹಾರಕ್ಕೆ ಚಹಾದ ಜೊತೆಗೆ ತಿನ್ನಲು ಕುಕ್ಕೀಸ್‌ಗಳನ್ನು ನಿತ್ಯವೂ ತಿನ್ನುತ್ತಿದ್ದರೆ ಈ ಅಭ್ಯಾಸವನ್ನು ಬಿಟ್ಟುಬಿಡಿ. ಕುಕ್ಕೀಸ್‌ಗಳಲ್ಲಿ ಬಳಸುವ ರಿಫೈನ್ಡ್‌ ಹಿಟ್ಟಿನಲ್ಲಿ ಕೆಟ್ಟ ಕಾರ್ಬೋಹೈಡ್ರೇಟ್‌ ಅನಗತ್ಯವಾಗಿ ನಿಮ್ಮ ಹೊಟ್ಟೆ ಸೇರುತ್ತದೆ. ಕಡಿಮೆ ಪೋಷಕಾಂಶಗಳು, ಖಾಲಿ ಕ್ಯಾಲರಿಗಳು, ಒಂದಿಷ್ಟು ಸಕ್ಕರೆಯ ಅಂಶ ಅನಗತ್ಯವಾಗಿ ಹೊಟ್ಟೆಗೆ ಹಾಕಿಕೊಳ್ಳುತ್ತೀರಿ ಅಷ್ಟೇ.

4.  ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫೆಲ್‌ಗಳು: ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫಲ್‌ಗಳು ಪೋಷಕಾಂಶ ಭರಿತ ಬೆಳಗನ್ನು ಆರಂಭಿಸುವುದಿಲ್ಲ.ರುಚಿಯಾಗಿರಬಹುದು ನಿಜ, ಆದರೆ ಈ ರುಚಿ, ನಿಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಾದುದಲ್ಲ ನೆನಪಿಡಿ. ಇದರಲ್ಲಿ ಹೆಚ್ಚು ಕ್ಯಾಲರಿ, ಹೆಚ್ಚು ಸಕ್ಕರೆ ಹಾಗೂ ಹೆಚ್ಚು ಬೆಣ್ಣೆಯಿದ್ದು, ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿಯ ಜೊತೆಗೆ ಕಡಿಮೆ ಪೋಷಕಾಂಶವನ್ನು ಹೊಂದಿದೆ.

5. ಫ್ಲೇವರ್ಡ್‌ ಮೊಸರು ಹಾಗೂ ಜ್ಯೂಸ್‌: ಮಾರುಕಟ್ಟೆಯಲ್ಲಿ ಪ್ಯಾಕೇಜ್ನಲ್ಲಿ ಬರುವ ಫ್ಲೇವರ್ಡ್‌ ಯೋಗರ್ಟ್‌ ಅನ್ನು ಬಹಳ ಮಂದಿ, ಮುಖ್ಯ ಪ್ರೊಟೀನ್‌ ಹಾಗೂ ಕ್ಯಾಲ್ಶಿಯಂನ ಮೂಲವೆಂದು ಭ್ರಮಿಸಿ ತಿನ್ನುತ್ತಾರೆ. ಇದು ಮೊದಲೇ ತಯಾರಾಗಿ ಬರುವುದರಿಂದ ಕಡಿಮೆ ಕ್ಯಾಲರಿಯೆಂದು ಹೇಳಿದರೂ, ಇದರಲ್ಲಿ ಸಕ್ಕರೆ ಹೇರಳವಾಗಿ ಇರುವುದರಿಂದ ಇವು ಬ್ರೇಕ್‌ಫಾಸ್ಟ್‌ಗೆ ಒಳ್ಳೆಯದಲ್ಲ.

6. ಸಿರಿಯಲ್‌ಗಳು: ಮಲ್ಟಿಗ್ರೈನ್‌ ಸಿರಿಯಲ್‌ಗಳು, ಕಾರ್ನ್‌ಫ್ಲೇಕ್ಸ್‌ ಇತ್ಯಾದಿಗಳೂ ಕೂಡಾ ಬೆಳಗ್ಗಿನ ಉಪಹಾರಕ್ಕೆ ಸುಲಭ ಪೋಷಕಾಂಶಗಳ ಮೂಲ ಎಂದು ಜಾಹಿರಾತುಗಳ ಮೂಲಕ ಹೇಳಿಕೊಂಡರೂ, ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಇವುಗಳಲ್ಲಿರುತ್ತವೆ. ಇವು ಕೂಡಾ ನಿತ್ಯವೂ ತಿನ್ನಬುಹಾದ ಉಪಹಾರವಲ್ಲ.

7. ಪ್ರೊಟೀನ್‌ ಬಾರ್‌ಗಳು, ಮೊದಲೇ ಮಾಡಿಟ್ಟ ಸ್ಮೂದಿಗಳು: ಈಗೆಲ್ಲ, ಜಿಮ್‌, ವಾಕ್‌, ಜಾಗಿಂಗ್‌ ಇತ್ಯಾದಿ ವರ್ಕೌಟ್‌ಗಳ ಜೊತೆಗೆ ಪ್ರಟೀನ್‌ ಬಾರ್‌ ತಿನ್ನುವುದು, ಕೇವಲ ಒಂದು ಸ್ಮೂದಿ ಕುಡಿಯುವುದು ಇತ್ಯಾದಿಗಳು ಫ್ಯಾಷನ್‌ ಆಗಿದೆ. ಆದರೆ, ಮೊದಲೇ ತಯಾರಾಗಿ ಲಭ್ಯವಿರುವ ಇವುಗಳೆಲ್ಲವೂ ಕೂಡಾ ಪ್ರಿಸರ್ವೇಟಿವ್‌ಗಳಿಂದ ಸಮೃದ್ಧವಾಗಿರುವುದರಿಂದ ಇವನ್ನು ತಿನ್ನದೆ, ತಾಜಾ ಮೂಲಗಳಿಗೆ ಮೊರೆ ಹೋಗುವುದು ಒಳ್ಳೆಯದು. 

ಇದನ್ನೂ ಓದಿ: Good Morning: ಮುಂಜಾನೆ ಎದ್ದು ಈ ತಪ್ಪುಗಳನ್ನು ಮಾಡಿದರೆ ದಿನವಿಡೀ ಖರಾಬು!

Exit mobile version