-ಡಾ ನಿತಿ ರೈಜಾಡಾ, ಹಿರಿಯ ನಿರ್ದೇಶಕರು – ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ
ಇತ್ತೀಚೆಗೆ ಮಹಿಳೆಯರನ್ನು ಅಗಾಧವಾಗಿ ಕಾಡುತ್ತಿರುವ ಕಾಯಿಲೆಗಳ ಪೈಕಿ ಗರ್ಭಕಂಠದ ಕ್ಯಾನ್ಸರ್ (Cervical cancer) ಅಥವಾ ಮಾನವ ಪ್ಯಾಪಿಲೋಮ ವೈರಸ್ (HPV) ಕೂಡ ಒಂದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಸೋಂಕು ಕಾಣಿಸಿಕೊಳ್ಳಲಿದೆ. ಮೊದಲೆಲ್ಲಾ ಕೇವಲ ಮಹಿಳೆಯರು ಮಾತ್ರ ಈ ಸೋಂಕಿಗೆ ತುತ್ತಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಪುರುಷರೂ ಕೂಡ ಪ್ಯಾಪಿಲೋಮ ವೈರಸ್‌ಗೆ ಒಳಗಾಗುತ್ತಿರುವುದು ಗಮನಾರ್ಹ ವಿಷಯ. ಹೀಗಾಗಿ ಪುರುಷರು ಸಹ ಈ ಕ್ಯಾನ್ಸರ್‌ನಿಂದ ಸಾಕಷ್ಟು ಜಾಗೃತರಾಗಿರಬೇಕು.
ಏನಿದು ಗರ್ಭಕಂಠದ ಕ್ಯಾನ್ಸರ್ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಮಾನವ ಪ್ಯಾಪಿಲೋಮ ವೈರಸ್ (HPV)ನಿಂದ ಹರಡಲಿದೆ. ಪ್ರಾಥಮಿಕವಾಗಿ HPV 16 ಮತ್ತು HPV 18 ಸೋಂಕಿನಿಂದ ಮಾರ್ಪಟ್ಟು ಎಚ್‌ಪಿವಿ ಸೋಂಕಾಗಿ ಗರ್ಭಕಂಠದಲ್ಲಿ ಬೆಳವಣಿಗೆ ಕಾಣಲಿದೆ. ಲೈಂಗಿಕ ಸಂರ್ಪಕದ ವೇಳೆ ಸುರಕ್ಷತೆ ಪಾಲಿಸದಿದ್ದರೆ ಅಥವಾ ಲೈಂಗಿಕ ಕ್ರಿಯೆಯ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದರೇ ಕ್ರಮೇಣ ಈ ಸೋಂಕು ಗರ್ಭಕಂಠದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಲಿದೆ. ಪುರುಷರಲ್ಲಿಯೂ ಕೂಡ ಎಚ್‌ಪಿವಿ ಸೋಂಕು ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಈ ಸೋಂಕು ಪುರುಷರಿಗೆ ಗುದ ಮತ್ತು ಶಿಶ್ನ ಕ್ಯಾನ್ಸರ್‌ಗೂ ಕಾರಣವಾಗಬಹುದು.
ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು
ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಯೋನಿಯಲ್ಲಿ ರಕ್ತಸ್ತ್ರಾವ, ಮೂತ್ರವಿಸರ್ಜನೆ ವೇಳೆ ನೋವು ಅಥವಾ ಉರಿಯೂತ, ಲೈಂಗಿಕ ಸಂಭೋಗ ವೇಳೆ ನೋವು ಇಂತಹ ಲಕ್ಷಣಗಳು ಕಂಡು ಬಂದರೆ, ಇದು ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯಾಗುತ್ತಿರುವ ಮುನ್ಸೂಚನೆಯಾಗಿರಲಿದೆ. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಹೆಚ್ಚು ಸೂಕ್ತ. ಇದಕ್ಕಾಗಿ ಪ್ಯಾಪ್ ಸ್ಮೀಯರ್‌ಗಳು ಅಥವಾ HPV ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಎಚ್‌ಪಿವಿ ಸೋಂಕು ಕ್ಯಾನ್ಸರ್ ಆಗಿ ಪರಿವರ್ತಿಸುವುದನ್ನು ತಡೆಯಬಹುದು.
ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು
ಎಚ್‌ಪಿವಿ ಲಸಿಕೆ ಅಗತ್ಯತೆ
ಗರ್ಭಕಂಠದ ಕ್ಯಾನ್ಸರ್ ಅಥವಾ ಎಚ್‌ಪಿವಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಇದೀಗ ಲಸಿಕೆ ಲಭ್ಯವಿದೆ. ಇತ್ತೀಚೆಗೆ ಭಾರತ ಸರ್ಕಾರ ಕೂಡ ಗರ್ಭಕಂಠದ ಕ್ಯಾನ್ಸರ್‌ಗಾಗಿ ಲಸಿಕೆ ಹಾಕುವುದನ್ನು ಮಾನ್ಯ ಮಾಡಿದೆ.
ಈ ಲಸಿಕೆಯು ಹದಿಹರೆಯದಲ್ಲಿಯೇ ಮಹಿಳೆಯರಿಗೆ ಈ ಲಸಿಕೆ ಹಾಕುವುದರಿಂದ ಈ ಕ್ಯಾನ್ಸರ್ ಬರದಂತೆ ತಡೆಯಬಹುದು. 9 ರಿಂದ 26 ವರ್ಷ ವಯಸ್ಸಿನ ಎಲ್ಲಾ ಸ್ತ್ರೀ ಮತ್ತು ಪುರುಷರು ಲಸಿಕೆಯನ್ನು ಪಡೆದರೆ ಗರ್ಭಕಂಠದ ಕ್ಯಾನ್ಸರ್‌ನ ಭವಿಷ್ಯದ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತವೆ. 11-13 ವರ್ಷ ವಯಸ್ಸಿನಲ್ಲಿ ಈ ಲಸಿಕೆ ಪಡೆಯಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಲೈಂಗಿಕ ಜೀವನ ಆರಂಭಿಸಿದ ಬಳಿಕ ಈ ಲಸಿಕೆ ಅಷ್ಟಾಗಿ ಪ್ರಯೋಜನ ಬರುವುದಿಲ್ಲ. ಹೀಗಾಗಿ ಮದುವೆಗೂ ಮುನ್ನವೇ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು.