ವಾಷಿಂಗ್ಟನ್ : ನದಿ, ಕರೆ ಇನ್ನಿತರ ಕಡೆ ಈಜಲು ಇಳಿಯುವಾಗ ಮೂಗಿಗೆ ನೀರು ನುಗ್ಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ. ಮೊದಲ ಕಾರಣ ಶ್ವಾಸಕೋಶಕ್ಕೆ ನುಗ್ಗಿ ಸಮಸ್ಯೆ ಆಗಬಹುದು ಎಂದು. ಶ್ವಾಸಕೋಶಕ್ಕೆ ಹೋಗದಂತೆ ನೋಡಿಕೊಳ್ಳುವ ವಿಶ್ವಾಸ ಇದ್ದರೂ ನೀರು ನುಗ್ಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಅಮೆರಿಕದ ವೈದ್ಯರ ತಂಡ. ಯಾಕೆ ಗೊತ್ತೇ? ನೀರಿನಲ್ಲಿರುವ ಕೆಲವು ಅಮೀಬಾಗಳು ಮೂಗಿನ ನರಗಳ ಮೂಲಕ ಮೆದುಳಿಗೆ ನುಗ್ಗಿ ಹಾನಿ ಪ್ರಾಣ ತೆಗೆಯಬಹುದು…
ಇಂಥದ್ದೊಂದು ಘಟನೆ ನಡೆದಿರುವ ಕಾರಣ ತಜ್ಞರ ತಂಡ ಈ ಎಚ್ಚರಿಕೆ ನೀಡಿದೆ. ಅಮೆರಿಕದ ನೆಬ್ರಸ್ಕಾ ರಾಜ್ಯದ ಎಂಟು ವರ್ಷದ ಬಾಲಕ ಇಂಥದ್ದೊಂದು ಅಪರೂಪದ ರೋಗ ಲಕ್ಷಣದಿಂದ ಮೃತಪಟ್ಟಿದ್ದಾನೆ. ಈ ಸೋಂಕಿಗೆ naegleria fowleri ಎಂದು ಕರೆಯುತ್ತಾರೆ. ಬಾಲಕ ಎಲ್ಕಾರ್ನ್ ನದಿಯಲ್ಲಿ ಈಜುವಾಗ ಆತನ ಮೂಗಿನ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸಿತ್ತು. ಸೋಂಕಿಗೆ ಒಳಗಾದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆಗಸ್ಟ್ ೮ರಂದು ಘಟನೆ ನಡೆದಿದೆ. ಬಾಲಕ ನದಿಯಲ್ಲಿ ಈಜಿ ಬಂದು ೪೮ ಗಂಟೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹತ್ತು ದಿನಗಳ ಕಾಲ ನಿರಂತರ ಚಿಕಿತ್ಸೆ ನೀಡಿದರೂ ಆ ಬದುಕಿ ಉಳಿಯಲಿಲ್ಲ ಎಂದು ಅಮೆರಿಕದ ವೈದ್ಯಕೀಯ ತಂಡ ತಿಳಿಸಿದೆ.
ನೆಬ್ರಸ್ಕಾ ರಾಜ್ಯದಲ್ಲಿ ಇದು ಮೊದಲ ಸೋಂಕಿನ ಘಟನೆಯಾಗಿದೆ. ಅಮೆರಿಕದಲ್ಲಿ ಹವಾಮಾನ ವೈಪರೀತ್ಯ ಕಾರಣ ನದಿ ನೀರಿನ ಉಷ್ಣತೆ ಹೆಚ್ಚಾಗುತ್ತಿದೆ. ಹೀಗಾಗಿ ಮೆದುಳು ತಿನ್ನುವ ಅಮೀಬಿಯಾಗಳು ಹೆಚ್ಚಾಗುತ್ತಿವೆ ಎಂದು ತಜ್ಞರ ತಂಡ ಹೇಳಿದೆ.
ಎಲ್ಲಿರುತ್ತವೇ ಈ ಅಮೀಬಾ
ಅಮೆರಿಕದ ಸಂಶೋಧಕರ ಪ್ರಕಾರ ಮೆದುಳು ತಿನ್ನುವ ಅಮಿಬಿಯಾ ಮಣ್ಣು, ಕೆರೆ, ನದಿಯ ನೀರಿನಲ್ಲಿ ಸೇರಿಕೊಂಡಿರುತ್ತವೆ. ಸಾಮಾನ್ಯವಾಗಿ ಈ ಅಮೀಬಾ ಮನುಷ್ಯದ ಮೆದುಳಿಗೆ ಹೋಗುವುದಿಲ್ಲ. ಆದರೆ, ಒಂದು ಬಾರಿ ಪ್ರವೇಶಿಸಿ ಮೆದುಳು ತಿನ್ನಲು ಆರಂಭಿಸಿದರೆ ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಸಾವು ನಿಶ್ಚಿತ. ಅಮೆರಿಕದಲ್ಲಿ ೧೯೬೨ರಿಂದ ೨೦೨೧ರ ಅವಧಿಯಲ್ಲಿ ೧೫೪ ಮಂದಿ ಈ ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ ನಾಲ್ಕು ಮಂದಿ ಮಾತ್ರ ಬದುಕಿ ಉಳಿದಿದ್ದಾರೆ ಎನ್ನಲಾಗಿದೆ.
ಕೆಲವು ವರ್ಷಗಳ ಮಿಸ್ಸೋರಿಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ ಎನ್ನಲಾಗಿದೆ.