Site icon Vistara News

Heart Attack: ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಬಲಿ

Stdent Heart attack

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾಳೆ. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

13 ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್‌ ಆಗಿ ಕುಸಿದು ಬಿದ್ದಿದ್ದಾಳೆ. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತವಾಗಿದೆ ಎಂದು ಘೋಷಿಸಿದ್ದಾರೆ.

ಪ್ರಾಥಮಿಕ ಆಸ್ಪತ್ರೆಯಲ್ಲಿ ಇಲ್ಲ ಮೂಲ ಸೌಕರ್ಯ

ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರಲಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಈ ಕಾರಣದಿಂದ ಬಾಲಕಿಯೊಬ್ಬಳು ಮೃತಪಟ್ಟಂತೆ ಆಗಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಗ್ರಾಮದಲ್ಲೇ ಆಸ್ಪತ್ರೆಯಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ.

ಇದನ್ನೂ ಓದಿ: COVID Subvariant JN1: ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌ ಕಡ್ಡಾಯ; ಮತ್ತೇನಿದೆ ಕೊರೊನಾ ನಿರ್ಬಂಧ?

ಸೃಷ್ಟಿಗೆ ಆಗಾಗ ಇತ್ತು ತಲೆ ಸುತ್ತುವ ಸಮಸ್ಯೆ

ಸೃಷ್ಟಿಗೆ ಆಗಾಗ ತಲೆ ಸುತ್ತುವ ಸಮಸ್ಯೆ ಇತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ವೈದ್ಯರು ಸಲಹೆ ನೀಡುವುದೇನೆಂದರೆ, ಚಿಕ್ಕ ಮಕ್ಕಳಿಗೆ ತಲೆ ಸುತ್ತುವ ಸಂದರ್ಭ ಇದ್ದರೆ ಅವರನ್ನು ಕೂಡಲೇ ತಜ್ಞ ವೈದ್ಯರಿಗೆ ತೋರಿಸಬೇಕು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪುಟ್ಟ ಮಗುವನ್ನೇ ನದಿಗೆ ಎಸೆದ ಪಾಪಿ ತಾಯಿ

ಬೆಂಗಳೂರು: ಕೆಲವರು ಒಂದು ಮಗು ಬೇಕು ಎಂದು ಅದೆಷ್ಟೊಂದು ಹಪಹಪಿಸುತ್ತಾರೆ. ಆದರೆ, ಕೆಲವರು ತಮ್ಮ ಎಳೆ ಕಂದಮ್ಮಗಳನ್ನೇ ಸಾಯಿಸಲು ಹಿಂದೆ ಮುಂದೆ ನೋಡದಷ್ಟು ಕ್ರೂರಿಗಳಾಗುತ್ತಾರೆ. ‌ ಇಲ್ಲೊಬ್ಬ ಪಾಪಿ ತಾಯಿ ತನ್ನ ಅಕ್ರಮ ಸಂಬಂಧಕ್ಕೆ (Illicit relatonship) ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ವರ್ಷ ಮೂರು ತಿಂಗಳ ಮಗುವನ್ನೇ ನದಿಗೆ ಎಸೆದು ಕೊಲೆ (Murder Case) ಮಾಡಿದ್ದಾಳೆ. ಈ ಘಟನೆ ನಡೆದಿರುವುದು ರಾಮನಗರ ಜಿಲ್ಲೆ (Ramanagara News) ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಗ್ರಾಮದ ಬಳಿ. ಭಾಗ್ಯಮ್ಮ (21) ಎಂಬಾಕೆ ಚನ್ನಪಟ್ಟಣ ಹಾದು ಹೋಗುವ ಕಣ್ವ ನದಿಗೆ ತನ್ನ ಮಗುವನ್ನು ಎಸೆದಿದ್ದಾಳೆ.

ಏನಿದು ಅಕ್ರಮ ಸಂಬಂಧದ ಕಥೆ?

ಭಾಗ್ಯಮ್ಮ ಎಂಬಾಕೆ ಎರಡು ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಸಂಸಾರ ನೆಟ್ಟಗೆ ಮಾಡದ ಆಕೆ ಗಂಡನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದಳು. ಆದರೆ, ಅಷ್ಟು ಹೊತ್ತಿಗೆ ಒಂದು ಮಗು ಹುಟ್ಟಿತ್ತು. ದೇವರಾಜ್‌ ಈಗ ಒಂದು ವರ್ಷ ಮೂರು ತಿಂಗಳ ಮಗು.

ಇತ್ತ ತವರಿಗೆ ಬಂದ ಭಾಗ್ಯಮ್ಮನಿಗೆ ಅಲ್ಲೇ ಒಂದು ಅಕ್ರಮ ಸಂಬಂಧ ಕುದುರುತ್ತದೆ. ಆಕೆ ಸುಖದಲ್ಲಿ ತೇಲಾಡುತ್ತಾ ಇರುತ್ತಾಳೆ. ಈ ನಡುವೆ ಭಾಗ್ಯಮ್ಮನ ತಾಯಿ ಆಕೆಯ ಈ ನಡತೆಯನ್ನು ಆಕ್ಷೇಪಿಸುತ್ತಾಳೆ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿರುತ್ತದೆ. ನೀನು ಮಗುವನ್ನು ಬಿಟ್ಟು ಸುತ್ತಾಡಲು ಹೋಗುತ್ತೀಯಾ, ನಾನು ಅದನ್ನು ಸಾಕಬೇಕು ಎಂದು ತಾಯಿ ಬೈದಿರುತ್ತಾಳೆ.

ಇತ್ತ ಹೊಸದಾಗಿ ಪರಿಚಯವಾಗಿ ಅಕ್ರಮ ಸಂಬಂಧ ಹುಟ್ಟಿಸಿಕೊಂಡವನಿಗೂ ಈ ಮಗು ವಿಚಾರದಲ್ಲೇ ತಕರಾರು. ಆತನೂ ನನಗೆ ನೀನು ಬೇಕು, ಆದರೆ ಮಗು ಬೇಡ ಎಂದು ವರಾತ ತೆಗೆದಿರುತ್ತಾನೆ. ಇಷ್ಟು ಹೊತ್ತಿಗೆ ತನ್ನ ಅಕ್ರಮ ಸಂಬಂಧವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸುವ ಭಾಗ್ಯಮ್ಮ ಕೇವಲ ಒಂದು ವರ್ಷದ ಮೂರು ತಿಂಗಳ ಹಸುಗೂಸಿನ ಪ್ರಾಣವನ್ನೇ ತೆಗೆಯಲು ಮುಂದಾಗುತ್ತಾಳೆ.

ಮಂಗಳವಾರ ರಾತ್ರಿ 7.30ರ ಹೊತ್ತಿಗೆ ಭಾಗ್ಯಮ್ಮ ಬಟ್ಟೆ ತೊಳೆಯುವ ನೆಪದಲ್ಲಿ ಕಾಲಿಕೆರೆಯ ಕಣ್ವ ನದಿ ತೀರಕ್ಕೆ ಬಂದಿದ್ದಳು. ಅಲ್ಲಿ ಮಗುವನ್ನು ನದಿಗೆ ಎಸೆದು ಅಲ್ಲಿಂದ ಕಾಲಿಕೆರೆ ದೇವಸ್ಥಾನದ ಬಳಿಗೆ ಓಡಿ ಬಂದು ಗೋಳಾಡಲು ಶುರು ಮಾಡುತ್ತಾಳೆ. ಮಗು ನೀರಿಗೆ ಬಿತ್ತು ಎಂದೆಲ್ಲ ಹೇಳುತ್ತಾಳೆ. ಅಲ್ಲಿನ ಜನರು ಕೂಡಲೇ ಓಡಿ ಹೋಗಿ ಮಗುವನ್ನು ಹುಡುಕುತ್ತಾರೆ. ಆದರೆ, ಮುಳುಗಿದ ಮಗು ಸಿಕ್ಕಿರಲಿಲ್ಲ. ಬುಧವಾರ ಮುಂಜಾನೆಯಷ್ಟೇ ಅದು ಸಿಕ್ಕಿದೆ.

ಈ ನಡುವೆ, ಆಕೆಯ ಅಕ್ರಮ ಸಂಬಂಧ, ಮನೆಯಲ್ಲಿ ನಿತ್ಯ ನಡೆಯುತ್ತಿರುವ ಜಗಳದ ವಿಚಾರವನ್ನು ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಇದೊಂದು ಅಕಸ್ಮಿಕ ಸಾವಲ್ಲ, ಕೊಲೆ ಎಂದು ತಿಳಿದುಬರುತ್ತದೆ.

ಇದನ್ನೂ ಓದಿ : Physical Abuse : ಅಪ್ರಾಪ್ತ ಬಾಲಕರಿಂದ 10ರ ಬಾಲಕಿ ಮೇಲೆ ಚಾಕು ತೋರಿಸಿ ಅತ್ಯಾಚಾರ, ಮೊಬೈಲ್‌ನಲ್ಲಿ ರೆಕಾರ್ಡ್!

ಡಿವೈಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭಾಗ್ಯಳನ್ನು ವಿಚಾರಣೆಗೆ ಒಳಪಡಿಸಿದರು. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.

Exit mobile version