Site icon Vistara News

Colour In Food: ನಾವು ಸೇವಿಸುವ ಕಲ್ಲಂಗಡಿ ಸುರಕ್ಷಿತವೇ?; ಆಹಾರ ತಜ್ಞರು ಏನು ಹೇಳಿದ್ದಾರೆ?

Color In Food

ಮಾರುಕಟ್ಟೆಯಲ್ಲಿ (market) ಕೆಂಪು ಕೆಂಪಾಗಿರುವ (Colour In Food) ಕಲ್ಲಂಗಡಿ (Watermelon) ಹಣ್ಣನ್ನು ಕಂಡರೆ ಎಂಥವರ ಬಾಯಲ್ಲೂ ನೀರೂರುತ್ತದೆ. ಆದರೆ ಇತ್ತೀಚೆಗಂತೂ ಈ ಹಣ್ಣುಗಳಿಗೆ ಚುಚ್ಚು ಮದ್ದು (inject the harmful colour) ನೀಡಲಾಗುತ್ತದೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (social media) ಭಾರಿ ಚರ್ಚೆಯಾಗುತ್ತಿದೆ. ಆದರೆ ಇದು ನಿಜ ಹೌದೋ ಅಲ್ಲವೋ ಎನ್ನುವ ಕುರಿತು ಆಹಾರ ತಜ್ಞರು (Food expert) ಹೇಳುವುದೇನು ಗೊತ್ತೇ?

ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣುಗಳ ಬಗ್ಗೆ ಚಿಂತಿಸುವುದು ಬಿಡಿ. ಇದಕ್ಕೆ ಹಾನಿಕಾರಕ ಬಣ್ಣಗಳಿಂದ ಚುಚ್ಚಲಾಗುತ್ತದೆ ಎಂಬ ವರದಿ ಸರಿಯಲ್ಲ ಎಂದು ಆಹಾರ ಪರಿಣತರು ಹೇಳಿದ್ದಾರೆ.

ಹಣ್ಣು ಮಾರಾಟಗಾರರು ಕಲ್ಲಂಗಡಿಗಳಿಗೆ ರೆಡ್-ಬಿ ಎಂದು ಕರೆಯಲ್ಪಡುವ ಹಾನಿಕಾರಕ ಬಣ್ಣದ ಎರಿಥ್ರೋಸಿನ್- ಬಿ ಅನ್ನು ಚುಚ್ಚುತ್ತಾರೆ ಎನ್ನುವ ಮಾಧ್ಯಮ ವರದಿಗಳ ಕುರಿತು ಮಾಧ್ಯಮದವರನ್ನು ಹಿರಿಯ ಆಹಾರ ಪರಿಣತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅವರ ಪ್ರಕಾರ, ಕಲ್ಲಂಗಡಿ ಹಣ್ಣಿಗೆ ಒಂದೇ ಸ್ಥಳದಲ್ಲಿ ಬಣ್ಣವನ್ನು ಚುಚ್ಚುವುದರಿಂದ ನಿರ್ದಿಷ್ಟ ಭಾಗದಲ್ಲಿ ಮಾತ್ರ ಹಣ್ಣು ಕೆಂಪಾಗಲು ಸಾಧ್ಯ. ಸಂಪೂರ್ಣ ಹಣ್ಣು ಕೆಂಪಾಗುವುದಿಲ್ಲ. ಒಂದು ಸ್ಥಳದಲ್ಲಿ ಕಲ್ಲಂಗಡಿಗೆ ಬಣ್ಣವನ್ನು ಚುಚ್ಚಿದರೆ ಅಲ್ಲಿನ ಪ್ರದೇಶ ಮಾತ್ರ ಬಣ್ಣ ಪಡೆಯುತ್ತದೆ. ಆದರೆ ಮಾಧ್ಯಮಗಳಲ್ಲಿ ತೋರಿಸಿರುವ ಹಣ್ಣುಗಳು ಸಂಪೂರ್ಣವಾಗಿ, ಸಮವಾಗಿ ಕೆಂಪು ಬಣ್ಣದಲ್ಲಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು ಇದರಲ್ಲಿ ಫೋಟೋಶಾಪ್ ಕಾರ್ಯನಿರ್ವಹಿಸಿದೆ.


ಅನೇಕ ಮಂದಿ ಕಲ್ಲಂಗಡಿಯಲ್ಲಿ ಬಳಸುವ ಸಾಮಾನ್ಯ ಕಲಬೆರಕೆ ಎರಿಥ್ರೋಸಿನ್ ಬಿ ಎಂದು ಹೇಳಿದ್ದಾರೆ. ಇದು ಕೆಂಪು ಬಣ್ಣವಾಗಿದ್ದು ಅದು ಹಣ್ಣನ್ನು ಮಾಗಿದ ಮತ್ತು ರಸಭರಿತವಾಗಿ ಕಾಣುವಂತೆ ಮಾಡುತ್ತದೆ. ಇದು ಕಲ್ಲಂಗಡಿಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಇದರ ವಿಡಿಯೋ ಭಾರಿ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ನಲ್ಲಿ ಈ ಪ್ರಯೋಗ ಮಾಡುತ್ತಿರುವ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವುದನ್ನು ಕಾಣಬಹುದು.


ಎರಿಥ್ರೋಸಿನ್ ಬಿ ಸೇವನೆ ಪರಿಣಾಮ

WebMD ಪ್ರಕಾರ, ಎರಿಥ್ರೋಸಿನ್ ಬಿ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಹಸಿವಾಗದಿರುವುದಕ್ಕೆ ಕಾರಣವಾಗಬಹುದು. ಪ್ರಸ್ತುತ ಸಂಶೋಧನೆ ಮತ್ತು ಆಹಾರ ವಿಜ್ಞಾನ ಜರ್ನಲ್‌ನಲ್ಲಿನ ಅಧ್ಯಯನವು ಈ ವಿಷಕಾರಿ ಸಂಯುಕ್ತವು ಗರ್ಭಿಣಿಯರ ಹೊಟ್ಟೆಯಲ್ಲಿರುವ ಭ್ರೂಣಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಈ ಚುಚ್ಚುಮದ್ದು ಹಾಕಿರುವ ಹಣ್ಣುಗಳು ವೇಗವಾಗಿ ಕೊಳೆಯಲು ಪ್ರಾರಂಭಿಸುತ್ತದೆ. ಹೀಗಾಗಿ ಇದು ಹೆಚ್ಚಿನ ಕಲ್ಲಂಗಡಿಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ಆಹಾರ ಪರಿಣತರು ಹೇಳಿದ್ದಾರೆ.

ಚುಚ್ಚುಮದ್ದುಗಳನ್ನು ಹಾಕಿರುವ ಹಣ್ಣುಗಳಲ್ಲಿ ರಂಧ್ರಗಳು ಕಾಣಿಸುತ್ತವೆ. ಭಾರತದ ಬೇಸಿಗೆಯಲ್ಲಿ ಈ ಹಣ್ಣುಗಳು ವೇಗವಾಗಿ ಕೊಳೆಯಲು ಕಾರಣವಾಗುತ್ತವೆ. ಹೀಗಾಗಿ ಭಾರತೀಯ ರೈತರು ಈ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

Exit mobile version