ನಮ್ಮ ದೇಹದಲ್ಲಿ ಎಲ್ಲ ಬಗೆಯ ಪೋಷಕಾಂಶಗಳನ್ನೂ, ಆಮ್ಲಜನಕವನ್ನೂ, ಹಾರ್ಮೋನುಗಳನ್ನೂ, ಸಕ್ಕರೆ, ಕೊಬ್ಬು ಇತ್ಯಾದಿ ಇತ್ಯಾದಿಗಳನ್ನು ನಮ್ಮ ದೇಹದ ಎಲ್ಲ ಭಾಗಗಳಿಗೆ ತಲುಪುವಂತೆ ಮಾಡುವುದು ನಮ್ಮ ರಕ್ತ. ನಮ್ಮ ರಕ್ತ ಈ ಕೆಲಸವನ್ನು ಮಾಡುವಾಗ ತನ್ನ ಜತೆ ಸಾಕಷ್ಟು ಕಲ್ಮಶಗಳನ್ನೂ ಪಡೆದುಕೊಳ್ಳುತ್ತದೆ. ಹೀಗೆ ರಕ್ತದಲ್ಲಿರುವ ಕಲ್ಮಶಗಳನ್ನು ನಮ್ಮ ಪಿತ್ತಕೋಶ, ಕಿಡ್ನಿಗಳು ಶುದ್ಧೀಕರಣ ಮಾಡುವ ಕೆಲಸ ಮಾಡಿದರೂ, ನಾವು ಆಗಾಗ ನಮ್ಮ ರಕ್ತದ ಶುದ್ಧೀಕರಣಕ್ಕೆ (Blood Purification) ಸಹಾಯ ಮಾಡುವ ಆಹಾರಗಳನ್ನೂ ನಾವು ಸೇವಿಸಬೇಕು. ಅಷ್ಟೇ ಅಲ್ಲ, ಸಾಕಷ್ಟು ನೀರನ್ನು ಕುಡಿಯುವುದು ಕೂಡ ದೇಹದ ಎಲ್ಲ ಅಂಗಾಂಗಳೂ ಸಮರ್ಪಕ ರೀತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ, ಯಾವೆಲ್ಲ ಆಹಾರ ಸೇವನೆಯಿಂದ ರಕ್ತಶುದ್ಧಿಗೆ (Blood Purification) ಸಹಾಯವಾಗುತ್ತದೆ ಎಂಬುದನ್ನು ನೋಡೋಣ.
ಬ್ರೊಕೋಲಿ
ಬ್ರೊಕೊಲಿ ನೈಸರ್ಗಿಕವಾದ ರಕ್ತಶುದ್ಧಿ ಮಾಡುವ ಪ್ರಮುಖ ತರಕಾರಿಗಳ ಪೈಕಿ ಪ್ರಮುಖವಾದುದು. ಇದರಲ್ಲಿ ಸಾಕಷ್ಟು ಕ್ಯಾಲ್ಶಿಯಂ, ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಜತೆಗೆ ರಕ್ತವನ್ನೂ ಡಿಟಾಕ್ಸ್ ಮಾಡುತ್ತದೆ.
ಬೀಟ್‌ರೂಟ್
ನೈಟ್ರೇಟ್ ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಬೀಟ್‌ರೂಟ್ ರಕ್ತಶುದ್ಧಿಗೆ ಹೇಳಿ ಮಾಡಿಸಿದ್ದು. ಅಷ್ಟೇ ಅಲ್ಲ, ದೇಹದಲ್ಲಿ ಹೊಸ ರಕ್ತ ಉತ್ಪಾದನೆಗೆ ಅತಿ ಹೆಚ್ಚು ಪ್ರಚೋದಿಸುವ ತರಕಾರಿಯಾದ್ದರಿಂದ ಇದನ್ನು ರಕ್ತಹೀನತೆಯ ಸಮಸ್ಯೆಯಿರುವ ಮಂದಿ ಸೇವಿಸುವುದು ಒಳ್ಳೆಯದು. ಇದು ರಕ್ತವನ್ನು ಶುದ್ಧಗೊಳಿಸುವ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುವ ಮೂಲಕ ರಕ್ತವನ್ನು ಶುದ್ಧಗೊಳಿಸುತ್ತದೆ.
ಬೆಲ್ಲ
ಕಬ್ಬಿಣಾಂಶ ಹೇರಳವಾಗಿರುವ ಬೆಲ್ಲವೂ ರಕ್ತವನ್ನು ಶುದ್ಧಗೊಳಿಸುವ ಸಾಮರ್ಥ್ಯವಿದೆ ಎಂದರೆ ನಂಬುತ್ತೀರಾ? ಹೌದು. ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ಇದು ರಕ್ತಕ್ಕೆ ಕೆಂಪು ಬಣ್ಣ ನೀಡುವ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ನಾರಿನಂಶವೂ ಹೆಚ್ಚಿಸದೆ. ಇದು ಮಲಬದ್ಧತೆಯಂತ ಸಮಸ್ಯೆಯನ್ನು ದೂವಿರಿಸುತ್ತದೆ. ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿರಿಸಿ, ಡಿಟಾಕ್ಸ್‌ನಂತೆ ಕಾರ್ಯ ನಿರ್ವಹಿಸುತ್ತದೆ.
ಕೊತ್ತಂಬರಿ ಸೊಪ್ಪು
ವಾಯುಮಾಲಿನ್ಯ ಹಾಗೂ ಈಗಿನ ಆಹಾರಗಳ ಮೂಲಕ ದೇಹಕ್ಕೆ ಸೇರಿದ ಪಾದರಸದ ಕಣಗಳು ಹಾಗೂ ಇತರ ಲೋಹಗಳನ್ನು ರಕ್ತದಿಂದ ಪ್ರತ್ಯೇಕಿಸಲು ಕೊತ್ತಂಬರಿ ಸೊಪ್ಪು ಬಹಳ ಸಹಾಯ ಮಾಡುತ್ತದೆ. ಇದರಲ್ಲಿ ಕ್ಲೋರೋಫಿಲ್ ಇರುವುದರಿಂದ ಅದು ರಕ್ತವನ್ನು ಶುದ್ಧಗೊಳಿಸಿ ಕಲ್ಮಶಗಳನ್ನು ಹೊರಕ್ಕೆ ಕಳಿಸಿ ಡಿಟಾಕ್ಸ್ ಮಾಡುತ್ತದೆ.
ನಿಂಬೆಹಣ್ಣು
ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಹಿಂಡಿ ಕುಡಿಯುವುದರಿಂದ ಕೊಬ್ಬು ಕರಗಿ ಡಿಟಾಕ್ಸ್ ಆಗುತ್ತದೆ ಎಂಬುದು ಬಹಳ ಹಿಂದಿನಿಂದಲೂ ನಂಬಿರುವ ವಿಚಾರ. ಸಾಕಷ್ಟು ಮಂದಿ ಇದರ ಪ್ರಯೋಜನವನ್ನು ಇತ್ತೀಚಿಗಿನ ವರ್ಷಗಳಲ್ಲಿ ಪಡೆಯುತ್ತಿದ್ದಾರೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಸಲ್ಫರ್ ಆಧರಿತ ಪದಾರ್ಥವಿರುವುದರಿಂದ, ಅದು ಬೆಳ್ಳುಳ್ಳಿಯನ್ನು ಜಜ್ಜಿದಾಗ ಕ್ರಿಯಾಶೀಲವಾಗುತ್ತದೆ. ಹೀಗಾಗಿ ಹಸಿ ಬೆಳ್ಳುಳ್ಳಿಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ.
ಅರಿಶಿನ
ಪುರಾತನ ಕಾಲದಿಂದಲೂ ಆಂಟಿಸೆಪ್ಟಿಕ್ ಆಗಿ ಬಳಸುತ್ತಲೇ ಬಂದ ಅರಿಶಿನವೆಂಬ ಚಿನ್ನದ ಮಹಿಮೆ ಒಂದೆರಡಲ್ಲ. ಪ್ರತಿಯೊಬ್ಬ ಭಾರತೀಯನ ಅಡುಗೆಮನೆ ಅರಿಶಿನವಿಲ್ಲದೆ ಸಂಪನ್ನವಾಗದು. ಅರಿಶಿನ ಕೂಡ ದೇಹದಲ್ಲಿರುವ ಕಶ್ಮಲಗಳನ್ನೊ ಹೊರಹಾಕುವ ಸಾಮರ್ಥ್ಯ ಹೊಂದಿರುವುದರಿಂದ ಇದರ ನಿತ್ಯ ಬಳಕೆ ಮಾಡುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ.
ಇದನ್ನೂ ಓದಿ: Health Tips: ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಬೇಕೇ? ಹಾಗಿದ್ದರೆ ಇಲ್ಲಿವೆ ಪೇಯಗಳು!