Site icon Vistara News

Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

Dates Benefits

ಕೆಲವು ಆಹಾರಗಳನ್ನು ನಾವು ನಿತ್ಯಾಹಾರವಾಗಿ ಅಭ್ಯಾಸ ಮಾಡುವುದರಿಂದ ನಮಗೆ ಸಾಕಷ್ಟು ಆರೋಗ್ಯದ ಲಾಭಗಳಿವೆ. ಅಂತಹ ಆಹಾರದ ಪೈಕಿ ಖರ್ಜೂರವೂ ಒಂದು. ನಮ್ಮ ಹಿರಿಯರು ಬಹಳ ಹಿಂದೆಯೇ ಖರ್ಜೂರದ ಉಪಯೋಗವನ್ನು ಅರಿತುಕೊಂಡು ಅದರ ಲಾಭಗಳನ್ನು ಪಡೆಯುತ್ತಿದ್ದರು. ವೈದ್ಯರುಗಳು, ಆಹಾರ ತಜ್ಞರು ದಿನಕ್ಕೊಂದು ಖರ್ಜೂರ ಸೇವಿಸಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಖರ್ಜೂರ ಒಂದು ಸಂಪೂರ್ಣ ಆಹಾರ. ಇದರಲ್ಲಿ ಎಲ್ಲ ಪ್ರಮುಖವಾದ ಪೋಷಕಾಂಶಗಳೂ ಇರುವುದರಿಂದ ಇದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಆದರೆ, ಖರ್ಜೂರವನ್ನು ಹೆಚ್ಚು ತಿನ್ನುವುದರಿಂದ ಕೆಲವು ಅನನುಕೂಲತೆಗಳೂ ಇಲ್ಲದಿಲ್ಲ. ಅಗತ್ಯಕ್ಕಿಂದ ಹೆಚ್ಚು ಖರ್ಜೂರದ ಸೇವನೆಯಿಂದ ತೂಕ ಹೆಚ್ಚಾಗುವ ಸಂಭವವಿದೆ. ಯಾಕೆಂದರೆ ಇದರಲ್ಲಿ ಹೆಚ್ಚು ಕ್ಯಾಲರಿಯಿದೆ. ಹಾಗಾಗಿ ಇದು ತೂಕ ಇಳಿಸುವ ಮಂದಿ ಇದನ್ನು ಪರಿಗಣಿಸುವುದಿಲ್ಲ. ನೈಸರ್ಗಿಕ ಸಕ್ಕರೆ ಇದರಲ್ಲಿ ಅಧಿಕವಾಗಿರುವುದರಿಂದ ಮಧುಮೇಹಿಗಳು ಹೆಚ್ಚು ತಿನ್ನುವುದು ಒಳ್ಳೆಯದಲ್ಲ. ಕಿಡ್ನಿ ಸಮಸ್ಯೆ ಇರುವ ಮಂದಿಯೂ ವೈದ್ಯರ ಸಲಹೆಯನ್ನು ಪಡೆದು ಸೇವಿಸಬಹುದು. ಅಸ್ತಮಾ ಇರುವ ಮಂದಿಗೆ, ಅಲರ್ಜಿ ಸಮಸ್ಯೆ ಇರುವ ಮಂದಿಗೆ ಖರ್ಜೂರದಲ್ಲಿ ಸಲ್ಫೈಟ್‌ ಇರುವ ಕಾರಣ ಅಷ್ಟು ಒಳ್ಳೆಯದಲ್ಲ. ಇದರ ಹೊರತಾಗಿ, ಖರ್ಜೂರವನ್ನು ಮಿತವಾಗಿ ದಿನಕ್ಕೊಂದರಂತೆ ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ಅದರಿಂದ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಬನ್ನಿ ಯಾಕೆ ನಾವು ನಿತ್ಯವೂ ಒಂದು ಖರ್ಜೂರವನ್ನು ತಿನ್ನಬೇಕು ಎಂಬುದಕ್ಕೆ (dates benefits) ಕಾರಣ ತಿಳಿಯೋಣ.

ನಾರಿನಂಶ

ಖರ್ಜೂರದಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಎಲ್‌ಡಿಎಲ್‌ ಅಂದರೆ, ಕೆಟ್ಟ ಕೊಲೆಸ್ಟೆರಾಲನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಇದು ಹೃದಯದ ಆರೋಗ್ಯಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್‌

ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಟ್ಟ ಬ್ಯಾಕ್ಟೀರಿಯಾ ನಿವಾರಣೆ

ಖರ್ಜೂರವು ಸಣ್ಣ ಕರುಳಿನಲ್ಲಿ ಶೇಖರಣೆಯಾಗುವ ಕೆಟ್ಟ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸಿ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಕೆಯನ್ನು ಉತ್ತೇಜಿಸುತ್ತದೆ.

ಶ್ವಾಸಕೋಶ ಆರೋಗ್ಯಕ್ಕೆ ಉತ್ತಮ

ಖರ್ಜೂರದಲ್ಲಿ ಪೊಟಾಶಿಯಂ ಹೇರಳವಾಗಿರುವುದರಿಂದ ಹೃದಯ, ಶ್ವಾಸಕೋಶ ಹಾಗೂ ಮಾಂಸಖಂಡಗಳ ಆರೋಗ್ಯವನ್ನು ಹೆಚ್ಚಿಸುತ್ತ ದೆ.

ಸುಸ್ತು ನಿವಾರಣೆ

ಖರ್ಜೂರದಲ್ಲಿ ಎಲ್ಲ ಬಗೆಯ ವಿಟಮಿನ್‌ಗಳು ಹೇರಳವಾಗಿದ್ದು ಇದು ಸುಸ್ತು ಹಾಗೂ ನಿಶಃಕ್ತಿಯನ್ನು ದೂರವಿರಿಸುತ್ತದೆ. ಬೇಸಿಗೆಯಲ್ಲಿ ಸುಸ್ತು, ತೆಲೆಸುತ್ತುವಿಕೆ ಇತ್ಯಾದಿ ಸಮಸ್ಯೆಗಳಿದ್ದರೆ ಖರ್ಜೂರವನ್ನು ಹೀಗೆ ತಿನ್ನುವುದರಿಂದ ಲಾಭ ಪಡೆಯಬಹುದು.

ಹೇರಳ ಪೊಟಾಶಿಯಂ

ಖರ್ಜೂರದಲ್ಲಿ ಪೊಟಾಶಿಯಂ ಹೇರಳವಾಗಿರುವುದರಿಂದ ಇದು ಸೋಡಿಯಂ ಅನ್ನು ದೇಹದಿಂದ ಹೊರಕ್ಕೆ ಕಳಿಸಲು ನೆರವಾಗುತ್ತದೆ. ಜೊತೆಗೆ ಹೃದಯ ಸರಿಯಾಗಿ ಬಡಿಯಲು ಸಹಾಯ ಮಾಡುತ್ತದೆ.

ರಕ್ತ ಹೀನತೆ ನಿವಾರಣೆ

ಖರ್ಜೂರದಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ಇದು ಅನೀಮಿಯಾದಂತಹ ರಕ್ತಹೀನತೆಯನ್ನು ತರುವುದಿಲ್ಲ. ರಕ್ತ ಕಡಿಮೆ ಇರುವ ಮಂದಿಗೆ, ನಿಶಃಕ್ತಿ, ಸುಸ್ತಿನಂತಹ ಸಮಸ್ಯೆಯ ಮಂದಿಗೆ ಇದು ಉತ್ತಮ ಆಹಾರ. ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.

ಎಲುಬು ಗಟ್ಟಿಗೊಳಿಸುತ್ತದೆ

ಇದರಲ್ಲಿ ಸಾಕಷ್ಟು ಖನಿಜಾಂಶಗಳಿರುವುದರಿಂದ ಇದು ಎಲುಬನ್ನು ಗಟ್ಟಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಮೂಳೆ ಸವತೆ ಮತ್ತಿತರ ಎಲುಬಿನ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ

ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿಯೂ ಖರ್ಜೂರದ ಕಾಣಿಕೆ ದೊಡ್ಡದು. ಲೈಂಗಿಕ ರೋಗಗಳಿದ್ದರೂ ಕೂಡ ಖರ್ಜೂರದ ಸೇವನೆಯಿಂದ ಕೊಂಚ ಮಟ್ಟಿನ ಪರಿಹಾರ ಕಾಣಬಹುದು.

ಕೂದಲು ಉದುರುವ ಸಮಸ್ಯೆಗೆ ಪರಿಹಾರ

ಕೂದಲುದುರುವಿಕೆ ಸೇರಿದಂತೆ ಕೂದಲ ಸಮಸ್ಯೆಗಳಿಗೆ ಖರ್ಜೂರ ಅತ್ಯಂತ ಒಳ್ಳೆಯದು. ನಿತ್ಯವೂ ಒಂದು ಖರ್ಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಸಾಕಷ್ಟು ಕೂದಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Exit mobile version