Site icon Vistara News

Dengue Fever: ಡೆಂಗ್ಯೂ ಜ್ವರ ಕಡಿಮೆ ಆದ ಮೇಲೆ ಎಚ್ಚರ ತಪ್ಪಿದರೆ ಪ್ರಾಣಾಪಾಯ!

Dengue Fever

-ಡಾ ವಿಕಾಸ್ ನಾಯಕ್, ಸಲಹೆಗಾರ, ನ್ಯೂರೋಸರ್ಜರಿ, ಫೋರ್ಟಿಸ್ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು
ಎಲ್ಲರಿಗೂ ತಿಳಿದಿರುವಂತೆ ಡೆಂಗ್ಯೂ ಸೊಳ್ಳೆಯಿಂದ ಹರಡುವ ಸೋಂಕು. ಜ್ವರ, ತಲೆನೋವು ಮತ್ತು ದೇಹದ ನೋವುಗಳಂತಹ ಸೌಮ್ಯ ಲಕ್ಷಣಗಳಿಂದ ಉಂಟಾಗುವ ಡೆಂಗ್ಯೂ (Dengue Fever) ಪ್ರಾರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ಭಾಸವಾಗುತ್ತದೆ. ಸಾಮಾನ್ಯವಾಗಿ ಜ್ವರ ಪ್ರಾರಂಭವಾದ 3-7 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಜ್ವರವೆಂದು ನಿರ್ಲಕ್ಷಿಸಿ ಕೇವಲ ಜ್ವರ, ಮೈ-ಕೈ ನೋವಿನ ಮಾತ್ರೆ ತೆಗೆದುಕೊಂಡು ಸುಮ್ಮನಾದರೆ ಸಾಲದು. ನಾಲ್ಕೈದು ದಿನವಾದರೂ ದೇಹದಲ್ಲಿ ನಿಶ್ಶಕ್ತಿ, ನಿರಂತರ ವಾಂತಿ, ತೀವ್ರವಾದ ಹೊಟ್ಟೆ ನೋವು, ಉಸಿರಾಟದ ತೊಂದರೆ, ಒಸಡುಗಳಲ್ಲಿ ರಕ್ತಸ್ರಾವ, ಮೂಗಿನ ರಕ್ತಸ್ರಾವ ಅಥವಾ ವಾಂತಿ ಅಥವಾ ಮಲದಲ್ಲಿನ ರಕ್ತದ ರೋಗಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

ಪ್ಲೇಟ್‌ಲೆಟ್ಸ್‌ಗಳ ಬಗ್ಗೆ ಅರಿವಿರಲಿ

ಸಾಕಷ್ಟು ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಬಿಳಿ ರಕ್ತಕಣಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಆದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಳಿರಕ್ತ ಕಣಗಳ ಪಾತ್ರ ದೊಡ್ಡದು. ಇದರ ಪ್ರಮಾಣ ಕುಸಿದರೆ ಜೀವವೇ ಹೋಗಬಹುದು. ಡೆಂಗ್ಯೂ ಬಂದ ವಾಸಿಯಾದ ಬಳಿಕ ಬಿಳಿರಕ್ತಕಣಗಳು, ಸಣ್ಣ ರಕ್ತ ಕಣ್ಣಗಳು ಕುಸಿತದ ಜೊತೆಗೆ ರಕ್ತವು ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೂಡಲೇ ದೇಹದಲ್ಲಿ ಪ್ಲೇಟ್‌ಲೇಟ್ಸ್‌ಗಳನ್ನು ಹೆಚ್ಚಿಸುವ ಚಿಕಿತ್ಸೆ ಪಡೆಯುವುದು ಅತಿ ಅವಶ್ಯಕ.

ಆಂತರಿಕ ರಕ್ತಸ್ರಾವವೂ ಆಗಬಹುದು

ಕೇವಲ ಪ್ಲೇಟ್‌ಲೇಟ್ಸ್‌ಗಳು ಕಡಿಮೆಯಾಗುವುದಷ್ಟೇ ಅಲ್ಲದೆ, ದೇಹದ ಒಳಗಡೆ ರಕ್ತಸ್ರಾವವಾಗುವ ಸಾಧ್ಯತೆಯೂ ಹೆಚ್ಚು. ಹೊಟ್ಟೆ, ಕರುಳು, ಯಕೃತ್‌, ಮೆದುಳು ಸೇರಿದಂತ ವಿವಿಧ ಅಂಗಗಳಲ್ಲಿ ಈ ಆಂತರಿಕ ರಕ್ತಸ್ತ್ರಾವವಾಗಬಹುದು. ಆಂತರಿಕ ರಕ್ತಸ್ರಾವದ ಲಕ್ಷಣಗಳು ಪ್ರಾರಂಭದಲ್ಲಿ ಸೂಕ್ಷ್ಮವಾಗಿದ್ದರೂ, ನಂತರದಲ್ಲಿ ವೇಗವಾಗಿ ಪ್ರಗತಿ ಹೊಂದಬಹುದು. ನಿರಂತರ ವಾಂತಿ, ಕಪ್ಪು ಮಲ, ಮೂತ್ರದಲ್ಲಿ ರಕ್ತ, ತೀವ್ರವಾದ ಹೊಟ್ಟೆ ನೋವು ಇದು ಆಂತರಿಕ ರಕ್ತಸ್ತ್ರಾವದ ಲಕ್ಷಣಗಳು.

ಚಿಕಿತ್ಸೆ ಏನು?

ಡೆಂಗ್ಯುಗೆ ಇಂಥದ್ದೇ ನಿಖರ ಚಿಕಿತ್ಸೆಗಳಿಲ್ಲ. ಹೆಚ್ಚು ಜ್ವರವಿದ್ದರೆ, ಅದರ ನಿಯಂತ್ರಣಕ್ಕೆ ವೈದ್ಯರು ಔಷಧಿ ನೀಡಲಿದ್ದಾರೆ. ಒಂದು ವೇಳೆ ಪ್ಲೇಟ್‌ಲೆಟ್ಸ್‌ಗಳ ಕುಸಿತ ಕಂಡು ಬಂದರೆ ಕೂಡಲೇ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಪ್ಲೇಟ್‌ಲೇಟ್‌ಗಳ ಸಂಖ್ಯೆ ಕುಸಿಯುತ್ತಲೇ ಇದ್ದರೆ, ವೈದ್ಯರು ಪ್ಲೇಟ್‌ಲೇಟ್‌ಗಳನ್ನು ದೇಹಕ್ಕೆ ಡ್ರಿಪ್ಸ್‌ ಮೂಲಕ ಹಾಕಲಾಗುತ್ತದೆ.

ಇದನ್ನೂ ಓದಿ: Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

ನಿಯಂತ್ರಣ ಹೇಗೆ?

ಮೊದಲಿಗೆ ನಿಮ್ಮ ಸುತ್ತಲಿನ ಪ್ರದೇಶವನ್ನು ಸೊಳ್ಳೆ ಮುಕ್ತಗೊಳಿಸಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನಿಗಾ ವಹಿಸಿ. ದೇಹವನ್ನು ಸಂಪೂರ್ಣ ಮುಚ್ಚುವ ಉಡುಪು ಧರಿಸಿ, ಬೆಳಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಪಾರ್ಕ್‌ಗಳಲ್ಲಿ ವಾಕ್‌ಗೆ ಹೋಗುವುದನ್ನು ನಿಯಂತ್ರಿಸಿ, ಬೇರೆ ಸಂದರ್ಭದಲ್ಲಿ ವಾಕ್‌ಗೆ ತೆರಳುವುದು ಉತ್ತಮ.

Exit mobile version