Site icon Vistara News

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Eating Food Packed In Newspaper

ದಿನಪತ್ರಿಕೆ ಕೈಯಲ್ಲಿ ಹಿಡಿದು, ಪಕ್ಕದಲ್ಲೊಂದು ಹಬೆಯಾಡುವ ಚಹಾ ಇಟ್ಟುಕೊಂಡು ಬೆಳಗನ್ನು ಸ್ವಾಗತಿಸುವುದು ಸಾಮಾನ್ಯವಾಗಿ ಬಹುತೇಕರ ಅಭ್ಯಾಸ. ಹಿಂದಿಗಿಂತ ಈಗ ಯುವಜನರಲ್ಲಿ ಈ ಅಭ್ಯಾಸ ಕಡಿಮೆಯಾಗಿದೆಯಾದರೂ, ಹಲವರು ಈಗಲೂ ಹೀಗೊಂದು ಬೆಳಗಿನ ಕನಸು ಕಾಣುತ್ತಾರೆ. ಅದೇನೇ ಇರಲಿ, ಬೆಳಗಿನಲ್ಲಿ ತಾಜಾ ಆಗಿ ಬರುವ ಈ ಪತ್ರಿಕೆ ಸಂಜೆಯ ಹೊತ್ತಿಗೆ ಬೀದಿ ಬದಿಯ ತಿಂಡಿ ಮಾರುವವನ ಕೈಯಲ್ಲಿರುತ್ತದೆ. ಅಥವಾ, ಇನ್ನೆಲ್ಲೋ ರದ್ದಿಯಲ್ಲಿರುತ್ತದೆ. ಇಲ್ಲಿ ವಿಷಯ ಅದಲ್ಲ. ನಿತ್ಯವೂ ಓದುವ ಇಂಥಹ ಪೇಪರನ್ನು ಬಹುತೇಕರು ತಿಂಡಿ ತಿನ್ನಲೂ ಬಯಸುತ್ತಾರೆ. ರಸ್ತೆ ಬದಿಯ ತಿಂಡಿಯವನು ಅದೇ ಪೇಪರಿನಲ್ಲಿ ಬಜ್ಜಿಯನ್ನೋ, ಬೋಂಡಾವನ್ನೋ (eating food packed in newspaper) ಕಟ್ಟಿ ಕೊಡುತ್ತಾನೆ. ಯಕ್ಷಗಾನ ನೋಡಲು ಹೋದರು ಚುರುಮುರಿ ಅಂಗಡಿಯವನು ಪೇಪರನ್ನೇ ಕೋನ್‌ ಮಾಡಿ ಅದರಲ್ಲಿ ಚುರುಮುರಿ ಸುರಿದು ಕೊಡುತ್ತಾನೆ. ಬಿಸಿಬಿಸಿ ಶೇಂಗಾ ಮಾರುವವನು ಸಂಜೆಯ ಹೊತ್ತಿಗೆ ಇದೇ ಪೇಪರಿನಲ್ಲಿ ಶೇಂಗಾ ಕಟ್ಟಿ ಕೊಡುತ್ತಾನೆ. ಇವೆಲ್ಲ ನಮಗೆ ಹಳೆಯ ನೆನಪುಗಳನ್ನೋ ಜಾತ್ರೆಯ ಬಾಲ್ಯದ ಖುಷಿಗಳನ್ನೋ ನೆನಪಿಸುವುದು ನಿಜ. ಆದರೆ, ನಿಜವಾಗಿಯೂ ಹೀಗೆ ಪತ್ರಿಕೆಯಲ್ಲೇ ತಿನ್ನುವುದು ಒಳ್ಳೆಯದೇ? ಆರೋಗ್ಯಕರವೇ ಎಂದು ಯೋಚಿಸಿದ್ದೀರಾ? ಹೌದು. ಖಂಡಿತಾ ಒಳ್ಳೆಯದಲ್ಲ. ಬನ್ನಿ, ಪತ್ರಿಕೆಯಲ್ಲಿ ಆಹಾರವನ್ನಿಟ್ಟು ತಿನ್ನುವುದು ಯಾಕೆ ಒಳ್ಳೆಯದಲ್ಲ ಎಂಬುದನ್ನು ನೋಡೋಣ ಬನ್ನಿ.

ಹಾಗಾಗಿ ಯಾವುದೇ ಆಹಾರವಿರಲಿ, ಎಣ್ಣೆತಿಂಡಿಯಿರಲಿ, ಪತ್ರಿಕೆಯಲ್ಲಿ ಹಕಿಖಿ ತಿನ್ನುವುದು ಖಂಡಿತ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಹೀಗಾಗಿ ಪತ್ರಿಕೆಯ ಬಳಕೆಯನ್ನು ಆಗಹಾರದ ಉಪಯೋಗದಲ್ಲಿ ಬಳಸುವುದನ್ನು ನಿಲ್ಲಿಸಿ. ಆರೋಗ್ಯಕರ ಹಾದಿಗಳನ್ನು ಹುಡುಕಿಕೊಳ್ಳಬಹುದು.

ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version