ಮಧುಮೇಹ (Diabetes) ಈಗ ಯಾರಿಗಿಲ್ಲ ಹೇಳಿ. ಸಣ್ಣ ವಯಸ್ಸಿನವರಿಗೂ ಈಗ ಮಧುಮೇಹವೇ. ಜೀವನಕ್ರಮ (Lifestyle disease) ಬದಲಾವಣೆ, ಸೇವಿಸುವ ಆಹಾರದಲ್ಲಿನ ಬದಲಾವಣೆ, ಒತ್ತಡದ ಬದುಕು (stressful life) ಇತ್ಯಾದಿ ಇತ್ಯಾದಿಗಳೂ ಸೇರಿ ಇಂದು ಮಧುಮೇಹದಿಂದ ಬಳಲುವ ಮಂದಿ ಹೆಚ್ಚಾಗಿದ್ದಾರೆ. 30-40ರ ವಯಸ್ಸಿಗೆಲ್ಲ ಇಂದು ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಸುತ್ತಿಕೊಳ್ಳುವ ಮಧುಮೇಹ ತೀರಾ ಕಾಯಿಲೆಯಾಗಿ ಕಾಡದಿದ್ದರೂ, ಆರೋಗ್ಯದಲ್ಲಿ ಖಂಡಿತವಾಗಿಯೂ ಏರುಪೇರು ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಖಂಡಿತವಾಗಿಯೂ ಸಮತೋಲಿತ ಆಹಾರದ (balanced diet) ಕಡೆ ಗಮನ ಕೊಡಬೇಕಾಗುತ್ತದೆ. ತೀರಾ ಸಮಸ್ಯೆಯಾಗಿ ಕಾಡದವರೆಗೆ ಕೆಲವು ಆಹಾರದ ಸಮತೋಲನ, ನಿಯಮಿತ ವ್ಯಾಯಾಮ (regular exercise) ಹಾಗೂ ಕೆಲವು ಪೇಯಗಳನ್ನು (drinks for diabetes) ಮನೆಯಲ್ಲೇ ಮಾಡುವ ಮೂಲಕ ನೈಸರ್ಗಿಕ ವಿಧಾನಗಳಿಂದಲೂ (natural remedy) ಮಧುಮೇಹವನ್ನು (diabetes control) ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಹಾಗಾದರೆ ಬನ್ನಿ, ವ್ಯಾಯಾಮ, ಜೊತೆಗೆ ಸಮತೋಲನ ಆಹಾರ, ಸಿಹಿತಿಂಡಿಗಳಿಂದ ದೂರವಿರುವುದು ಇತ್ಯಾದಿಗಳನ್ನು ಶಿಸ್ತುಬದ್ಧವಾಗಿ ಮಾಡುವ ಜೊತೆಗೆ ಈ ಕೆಳಗಿನ ಮೂರು ಬಗೆಯ ಮ್ಯಾಜಿಕ್ ಪೇಯಗಳನ್ನು (Drinks for Diabetics) ನಿತ್ಯವೂ ಸೇವಿಸುವ ಮೂಲಕವೂ ಮಧುಮೇಹವನ್ನು ನಿಯತ್ರಿಸಿಕೊಳ್ಳಬಹುದು. ಬನ್ನಿ ಆ ಪೇಯಗಳಾವುವು ಎಂಬುದನ್ನು ನೋಡೋಣ.
1. ಮೆಂತ್ಯ ವಾಟರ್: ಮೆಂತ್ಯಕಾಳುಗಳನ್ನು ರಾತ್ರಿಯೇ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದರ ನೀರನ್ನು ಮಾತ್ರ ಸೇವಿಸುವುದು, ಹಾಗೂ ಮೆಂತ್ಯ ಕಾಳನ್ನು ಮೊಳಕೆ ಬರಿಸಿ ಸಲಾಡ್ ಹಾಗೂ ಇತರ ಆಹಾರದ ಜೊತೆಗೆ ಬೆರೆಸಿ ಸೇವಿಸುವ ಮೂಲಕವೂ ಕೂಡಾ ಮಧುಮೇಹವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
2. ಹಾಗಲಕಾಯಿ ಜ್ಯೂಸ್: ಹಾಗಲಕಾಯಿಯ ಜ್ಯೂಸ್ ಆಗಾಗ ಬೆಳಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸ ಮಧುಮೇಹಿಗಳಿಗೆ ಒಳ್ಳೆಯದು. ಹಾಗಲಕಾಯಿಯಲ್ಲಿ ಕಬ್ಬಿಣಾಂಶ ಹಾಗೂ ವಿಟಮಿನ್ ಜ್ಯೂಸ್ ಹೇರಳವಾಗಿದ್ದು ರುಚಿಕರವಾಗಿಲ್ಲದಿದ್ದರೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅಷ್ಟೇ ಅಲ್ಲ, ಇದರಲ್ಲಿರುವ ಪಾಲಿಪೆಪ್ಟೈಡ್ ಎಂಬ ಪ್ರೊಟೀನ್ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಇಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಸಕ್ಕರೆ ಕಾಯಿಲೆಯ ಮಂದಿಗೆ ಇದು ಅತ್ಯುತ್ತಮ ಮ್ಯಾಜಿಕ್ ಡ್ರಿಂಕ್.
3. ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಕೂಡಾ ಮಧುಮೇಹಕ್ಕೆ ಒಳ್ಳೆಯ ಮದ್ದು. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಇದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಬರ್ನ್ ಮಾಡಲು ಪ್ರೇರಣೆ ದೊರೆಯುತ್ತದೆ. ಇದರಿಂದ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ರಾತ್ರಿಯೂಟಕ್ಕೂ ಮೊದಲು ಇದನ್ನು ನೀರಿನೊಂದಿಗೆ ಬೆರೆಸು ಸೇವಿಸಬಹುದು.
4. ಕಾಮಕಸ್ತೂರಿ ಅಥವಾ ತುಳಸಿ ಚಹಾ: ಇದೂ ಕೂಡಾ ಮಧುಮೇಹಕ್ಕೆ ಅತ್ಯಂತ ಉತ್ತಮ ಪೇಯ. ಇದು ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ನೀಡಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಇವುಗಳ ನಿರಂತರ ಸೇವನೆ ಬಹಳ ಮುಖ್ಯ. ಬೆಳಗ್ಗೆ ಎದ್ದ ಕೂಡಲೇ ಈ ಚಹಾ ಮಾಡಿ ಸೇವಿಸಿದರೆ ಉತ್ತಮ ಫಲ ಕಾಣಬಹುದು. ಕೇವಲ ನೀರಿನಲ್ಲಿ ಕುದಿಸಿ ಸೋಸಿಕೊಂಡು ಬಿಸಿಯಾಗಿಯೇ ಕುಡಿಯಬಹುದು.
ಇದನ್ನೂ ಓದಿ: Simple Steps to Preventing Diabetes: ಮಧುಮೇಹ ಬಾರದಂತೆ ತಡೆಯಲು ಇಲ್ಲಿವೆ ಸರಳ ಸೂತ್ರಗಳು!