Site icon Vistara News

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

dry fruits

ಕ್ಯಾನ್ಸರ್‌ (cancer) ಜಗತ್ತಿನಾದ್ಯಂತ ಅತ್ಯಂತ ಭಯ ಹುಟ್ಟಿಸಿರುವ ರೋಗಗಳಲ್ಲಿ ಒಂದು. ಗೊತ್ತೇ ಆಗದಂತೆ ದೇಹದಲ್ಲಿ ಭೂತಾಕಾರವಾಗಿ ಬೆಳೆದುಬಿಡುವ ಸಮಸ್ಯೆ ಇದು. ರೋಗಿಗೆ ತನ್ನ ದೇಹದಲ್ಲೇ ರಾಕ್ಷಸನೊಬ್ಬ ಬೆಳೆಯುತ್ತಿದ್ದಾನೆಂಬ ಅರಿವೂ ಕೂಡಾ ಬಹಳ ಸಲ ಆಗುವುದೇ ಇಲ್ಲ. ಯಾವುದೇ ಅಂಗವನ್ನೂ ಆಕ್ರಮಿಸಿ ನಿಧಾನವಾಗಿ ತನ್ನ ಕಬಂಧ ಬಾಹುಗಳನ್ನು ಚಾಚಿ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವ ಈ ಕ್ಯಾನ್ಸರ್‌ ಎಂಬ ಹೆಮ್ಮಾರಿಯ ಹೆಸರು ಕೇಳಿದೊಡನೆಯೇ ಬಹಳಷ್ಟು ಮಂದಿ ನಡುಗಿಬಿಡುತ್ತಾರೆ. ಇನ್ನು ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಗಳಿಸುವುದೆಂದರೆ ಸುಲಭದ ಮಾತಲ್ಲ. ಆದರೆ, ಅಷ್ಟು ಧೃತಿಗೆಡುವ ಅಗತ್ಯವಿಲ್ಲ, ಅದು ಸಾಧ್ಯವಿದೆ ಎಂದು ಸಾಧಿಸಿ ತೋರಿಸಿ ಫೀನಿಕ್ಸ್‌ನಂತೆ ಎದ್ದು ಬಂದು ನಮ್ಮ ನಡುವೆ ಸ್ಪೂರ್ತಿಯಾಗಿ ಬದುಕುತ್ತಿರುವ ಮಂದಿಯೂ ಇದ್ದಾರೆ.

ಇಂಥ ಕ್ಯಾನ್ಸರ್‌ ನಮಗೆ ಬರದಂತೆ ಕಾಪಾಡುವುದರಲ್ಲಿ ನಮ್ಮ ಕೈಯಲ್ಲೇನಿದೆ ಎಂದು ನಾವು ಕೈಚೆಲ್ಲಿ ಕೂರಬೇಕಿಲ್ಲ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳು ಬರದಂತೆ ನಾವು ಜಾಗ್ರತೆ ವಹಿಸಬಹುದು. ಕೆಲವು ಆಹಾರ ಕ್ರಮಗಳ (Healthy food) ಅಳವಡಿಕೆ, ಜೀವನಕ್ರಮದಲ್ಲಿ ಬದಲಾವಣೆ (Lifestyle change) ಇತ್ಯಾದಿ ಇತ್ಯಾದಿಗಳ ಬಗ್ಗೆ ಅರಿವು ಹೆಚ್ಚು ಮಾಡಿಕೊಳ್ಳುವ ಅಗತ್ಯವೂ ಇದೆ. ಒಂದು ಅಧ್ಯಯನದ ಪ್ರಕಾರ, ಒಣ ಹಣ್ಣುಗಳನ್ನೂ, ಬೀಜಗಳನ್ನೂ ನಿತ್ಯವೂ ಸೇವನೆ ಮಾಡುವ ಮೂಲಕ ಕ್ಯಾನ್ಸರ್‌ ನಿರೋಧಕತೆಯನ್ನು ನಾವು ಬೆಳೆಸಿಕೊಳ್ಳಬಹುದು ಎಂಬುದು. ಹಾಗಂತ, ಇವು ಒಳ್ಳೆಯದೆಂದ ಇವನ್ನೇ ಹೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವ ಅಪಾಯವೂ ಇದೆ. ಆ ಮೂಲಕ ಬೇರೆ ಅಪಾಯಗಳನ್ನು ಸ್ವಾಗತಿಸುವ ಹಾಗಾದೀತು. ಹಾಗಾಗಿ, ಹಿತಮಿತವಾಗಿ ತಿನ್ನುವುದು ಇಲ್ಲಿ ಮುಖ್ಯವೆನಿಸುತ್ತದೆ. ಬನ್ನಿ, ಯಾವೆಲ್ಲ ಒಣಹಣ್ಣು ಹಾಗೂ ಬೀಜಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳಿವೆ ಎಂಬುದನ್ನು ನೋಡೋಣ.

1. ಬಾದಾಮಿ, ಹೇಜಲ್‌ನಟ್‌, ಪೈನ್‌ ನಟ್‌ ಮೊದಲಾದ ಒಣ ಬೀಜಗಳಲ್ಲಿ ಆಲ್ಫಾ ಟೋಕೋಫೆರಾಲ್‌ ಎಂಬ ವಿಟಮಿನ್‌ ಇ ಇದೆ. ಇದು ಆಂಟಿ ಆಕ್ಸಿಡೆಂಟ್‌ ಗುಣಗಳನ್ನು ಹೊಂದಿರುವುದರಿಂದ ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

2. ವಾಲ್‌ನಟ್‌, ಪಿಸ್ತಾ ಮತ್ತಿತರ ಒಣಬೀಜಗಳಲ್ಲಿಹಾರ್ಬರ್‌ ಟೋಕೋಟ್ರೈನಾಲ್‌ಗಳು ಹಾಗೂ ಗಮ್ಮಾ- ಟೋಕೋಫೆರಾಲ್ಗಳು ಇವೆ. ಇದು ವಿಟಮಿನ್‌ ಇ ಯ ಪರ್ಯಾಯವಾಗಿದ್ದು ಇದು ಆಲ್ಫಾ ಟೋಕೋಫೆರಾಲ್‌ಗಿಂತಲೂ ಒಂದು ಪಟ್ಟು ಹೆಚ್ಚೇ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೊಂದುವ ಮೂಲಕ ಕ್ಯಾನ್ಸರ್‌ ನಿರೋಧಕವಾಗಿಯೂ ದೇಹದಲ್ಲಿ ಕೆಲಸ ಮಾಡುತ್ತದೆ.

nuts

3. ಒಣಹಣ್ಣುಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳಿದ್ದು, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೆಚ್ಚಿವೆ. ಇವುಗಳಲ್ಲಿರುವ ಫೈಟೋ ಕೆಮಿಕಲ್‌ಗಳಾದ, ಟರ್ಪೀನ್‌, ಆಂಥೋಸಯನಿನ್‌, ಕೌಮಾರಿನ್‌, ಕ್ಸಾಂಥೋನ್‌ ಹಾಗೂ ಕೆರೋಟಿನಾಯ್ಡ್‌ಗಳು ಕ್ಯಾನ್ಸರ್‌ ನಿರೋಧಕವಾಗಿ ದೇಹದಲ್ಲಿ ಕೆಲಸ ಮಾಡುತ್ತವೆ.

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

4. ಅಮೆರಿಕನ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಕ್ಯಾನ್ಸರ್‌ ರೀಸರ್ಚ್‌ನ ಪ್ರಕಾರ, ಎಲ್ಲ ಬಗೆಯ ಬೀಜಗಳು ಮುಖ್ಯವಾಗಿ ವಾಲ್ನಟ್‌ ಕ್ಯಾನ್ಸರ್‌ ನಿರೋಧಕ ಗುಣವನ್ನು ಹೊಂದಿವೆ. ವಾಲ್ನಟ್‌ನಲ್ಲಿರುವ ಪೆಡಂಕ್ಯುಲಾಗಿನ್‌ ಅಂಶವು ಯುರೋಲಿಥಿನ್‌ ಆಗ ಬದಲಾಯಿಸುವ ಮೂಲಕ ಸ್ತನ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಹಾಗಾಗಿ ಮಹಿಳೆಯರಿಗೆ ಮುಖ್ಯವಾಗಿ ವಾಲ್ನಟ್‌ ಬಹಳ ಒಳ್ಳೆಯದು.

5. ಒಣದ್ರಾಕ್ಷಿಯ ನಿತ್ಯ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಇದು ಪ್ರೊಸ್ಟಾಗ್ಲಾಂಡಿನ್‌ ಮೆಟಬೋಲೈಟ್‌ ಸ್ರವಿಸುವ ಮೂಲಕ ಕ್ಯಾನ್ಸರ್‌ ಅಂಗಾಂಶಗಳ ಬೆಳವಣಿಗೆಯಾಗದಂತೆ ತಡೆಯುತ್ತದೆ.

6. ಒಣ ಪ್ಲಮ್‌ ಹಣ್ಣಿನಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಬೀಟಾ ಕೆರೋಟಿನ್‌ ಹಾಗೂ ಕಾರ್ಬೋಲಿನ್‌, ಫಿನೋಲಿಕ್‌ ಅಂಶಗಳೂ ಇವೆ. ಇವೆಲ್ಲವೂ, ಹೊಟ್ಟೆ ಹಾಗೂ ಸಂಬಂಧಿತ ಅಂಗಗಳಲ್ಲಿ ಕ್ಯಾನ್ಸರ್‌ ಬರದಂತೆ ತಡೆಯುತ್ತವೆ.

7. ಒಣ ಅಂಜೂರ: ಒಣ ಅಂಜೂರ ಹಣ್ಣಿನಲ್ಲಿ ನಾರಿನಂಶವೂ ಸಾಕಷ್ಟು ವಿಟಮಿನ್‌ಗಳೂ, ಖನಿಜಾಂಶಗಳೂ, ಪಾಲಿಫಿನಾಲ್‌ಗಳೂ ಶ್ರೀಮಂತವಾಗಿದ್ದು ಕ್ಯಾನ್ಸರ್‌ಗೆ ಅತ್ಯುತ್ತಮವಾಗಿದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Exit mobile version