Site icon Vistara News

Breast Cancer Treatment | ದೇಶದಲ್ಲೇ ಮೊದಲ ಬಾರಿಗೆ ಸ್ತನ ಕ್ಯಾನ್ಸರ್‌ ಔಷಧಕ್ಕೆ DCGI ಅನುಮತಿ

Lynparza

ನವದೆಹಲಿ:‌ ಕ್ಯಾನ್ಸರ್‌ಅನ್ನು ಆರಂಭದಲ್ಲಿಯೇ ಪತ್ತೆಹಚ್ಚಿ, ಚಿಕಿತ್ಸೆ ಪಡೆದರೆ ಮಾತ್ರ ಬದುಕುಳಿಯಲು ಸಾಧ್ಯ. ಅದರಲ್ಲೂ ಸ್ತನ ಕ್ಯಾನ್ಸರ್‌ ಮಾರಣಾಂತಿಕವಾಗಿದ್ದು, ಚಿಕಿತ್ಸೆ ಪಡೆಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಹಾಗಾಗಿ, ಸ್ತನ ಕ್ಯಾನ್ಸರ್‌ಗೆ ಆರಂಭದಲ್ಲಿಯೇ ಚಿಕಿತ್ಸೆ (Breast Cancer Treatment) ಸಿಗಲಿ ಎಂಬ ಉದ್ದೇಶದಿಂದ ಭಾರತದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್‌ ಔಷಧಕ್ಕೆ ಅನುಮತಿ ನೀಡಲಾಗಿದೆ.

ಕೊರೊನಾ ನಿರೋಧಕ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಅಸ್ಟ್ರಾಜೆನಿಕಾ ಕಂಪನಿಯ ಲಿನ್‌ಪಾರ್ಜಾ (Lynparza-Olaparib) ಎಂಬ ಔಷಧಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI) ಅನುಮತಿ ನೀಡಿದೆ. ಇದಕ್ಕೂ ಮೊದಲು ಕಿಮೊಥೆರಪಿಗೆ ಒಳಗಾದ ವಯಸ್ಕ ರೋಗಿಗಳು ಈ ಔಷಧವನ್ನು ಪಡೆಯಬಹುದಾಗಿದೆ.

ಲಿನ್‌ಪಾರ್ಜಾ ಔಷಧದ ಮೂರನೇ ಹಂತದ ಪ್ರಯೋಗ ಯಶಸ್ವಿಯಾದ ಬಳಿಕ ಡಿಸಿಜಿಐ ಅನುಮತಿ ನೀಡಿದೆ. ಅಮೆರಿಕ, ಯೂರೋಪ್‌, ಜಪಾನ್‌ ಸೇರಿ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಲಿನ್‌ಪಾರ್ಜಾ ಔಷಧಿಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Exit mobile version