ಜಗತ್ತು ವೇಗವಾಗಿ ಬದಲಾಗುತ್ತಿದೆ. ಹಲವು ಹಳೆಯ ವಿಚಾರಗಳು ಹೊಸ ರೂಪ ಪಡೆದು ಹೊಸತಾಗಿ ಮತ್ತೆ ನಮ್ಮ ಮುಂದೆ ಹಾಜರಾಗುತ್ತದೆ. ಆರೋಗ್ಯದ ಬಗ್ಗೆ ಇತ್ತೀಚೆಗೆ ಜನರ ಕಾಳಜಿ ಹೆಚ್ಚಾಗಿರುವುದರಿಂದ ಹಾಗೆಯೇ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿರುವುದರಿಂದ ನಿಧಾನವಾಗಿ ಹಳೆಯ ಪದ್ಧತಿಗಳು ಮತ್ತೆ ಆರೋಗ್ಯದ ಕಾರಣ ಹೊತ್ತು ಆಚರಣೆಗೂ ಬರುತ್ತಿದೆ ಎಂಬುದು ಒಳ್ಳೆಯ ವಿಚಾರವೇ. ಸ್ಟೀಲ್, ಕಬ್ಬಿಣ, ಸೆರಾಮಿಕ್, ಪ್ಲಾಸ್ಟಿಕ್ ಸೇರಿದಂತೆ ಹಲವು ಬಗೆಯ ಪಾತ್ರೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇತ್ತೀಚೆಗೆ ಹಳೆಯದರ ಮರು ಆಚರಣೆಯೆಂದು ಪ್ರಸಿದ್ಧಿಗೆ ಬಂದವುಗಳಲ್ಲಿ ತಾಮ್ರದ ಪಾತ್ರೆಗಳೂ ಪ್ರಮುಖವಾದವು. ತಾಮ್ರದ ಪಾತ್ರೆಗಳು ಎಷ್ಟೇ ಹಳೆಯದಾದರೂ ತಮ್ಮ ಶ್ರೀಮಂತಿಕೆಯನ್ನು ಎಂದಿಗೂ ಬಿಟ್ಟುಕೊಡದವು. ಆದರೆ, ತಾಮ್ರದ ಪಾತ್ರೆಯ ಬಳಕೆಯ ಸಂದರ್ಭ ನಾವು ಬಹಳಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಯಾಕೆಂದರೆ, ತಾಮ್ರದ ಪಾತ್ರೆಯಲ್ಲಿ ಅಡುಗೆ ಒಳ್ಳೆಯದು ಎಂದುಕೊಂಡು ಅದರಲ್ಲಿ ಅಡುಗೆ ಮಾಡಲು ಆರಂಭಿಸುವ ಅನನುಭವಿ ಮಂದಿ ತಾಮ್ರದ ಪಾತ್ರೆ ಬಳಸುವ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿಡಬೇಕು. ಈ ಕೆಳಗಿನ ಐದು ಆಹಾರಗಳನ್ನು ತಾಮ್ರದ ಪಾತ್ರೆಯಲ್ಲಿ ಎಂದಿಗೂ ಮಾಡಬೇಡಿ.
1. ಟೊಮೇಟೋ: ಬಹಳಷ್ಟು ಅಡುಗೆಗಳಲ್ಲಿ ಟೊಮೆಟೋನ ಪಾತ್ರ ಮಹತ್ವದ್ದು. ಯಾಕೆಂದರೆ ಟೊಮೇಟೋವನ್ನು ನಾವು ಹಲವು ಅಡುಗೆಗಳಿಗೆ ಬಳಸುತ್ತೇವೆ. ಟೊಮೇಟೋದಲ್ಲಿರುವ ಹುಳಿ ರುಚಿ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ, ಟೊಮೇಟೋ ಅಸಿಡಿಕ್ ಆಗಿರುವುದರಿಂದ ಇದರ ಅಡುಗೆಯನ್ನು ತಾಮ್ರದ ಪಾತ್ರೆಯಲ್ಲಿ ಮಾಡಬಾರದು. ತಾಮ್ರವು ಬಿಸಿಯಾಗಿದ್ದಾಗ ಆಸಿಡ್ ಜೊತೆಗೆ ವ್ಯತಿರಿಕ್ತವಾಗಿ ವರ್ತಿಸುತ್ತದೆ.
2. ವಿನೆಗರ್: ಚೈನೀಸ್ ಖಾದ್ಯಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವ ವಿನೆಗರ್ ಕೂಡಾ ಅಸಿಡಿಕ್ ನೇಚರ್ ಉಳ್ಳದ್ದು. ಟೊಮೇಟೋ ಬಳಸದೆ, ಖಾದ್ಯಗಳಲ್ಲಿ ಹುಳಿ ರುಚಿ ಬರಿಸಬಹುದಾದ ವಿಧಾನವಿದು. ಹಾಗಾಗಿ ಇದನ್ನೂ ಕೂಡಾ ತಾಮ್ರದ ಪಾತ್ರೆಯಲ್ಲಿ ಅಡುಗೆ ಮಾಡಬಾರದು.
3. ಹಾಲು: ಬಹಳಷ್ಟು ಮಂದಿಗೆ ತಾಮ್ರದ ಪಾತ್ರೆ ಹಾಲಿನ ಜೊತೆಗೆ ವರ್ತಿಸುತ್ತದೆ ಎಂಬ ವಿಚಾರ ತಿಳಿದಿರುವುದಿಲ್ಲ. ಆದರೆ ಹಾಲಿನಲ್ಲಿ ಖನಿಜಾಂಶಗಳು ಇರುವುದರಿಂದ ತಾಮ್ರವೂ ಖನಿಜವೇ ಆಗಿರುವುದರಿMದ ಅವು ಪರಸ್ಪರ ವರ್ತಿಸುತ್ತವೆ. ದು ಫುಡ್ ಪಾಯ್ಸನಿಂಗ್‌ಗೂ ಕಾರಣವಾಗಬಹುದು.
ಇದನ್ನೂ ಓದಿ: Food Tips: ಹಾಲು ಸೀದರೆ ತಲೆ ಕೆಡಿಸಿಕೊಳ್ಳಬೇಡಿ, ಹೀಗೆ ಮಾಡಿಯೂ ಬಳಸಬಹುದು!
4. ಮಜ್ಜಿಗೆ ಹಾಗೂ ಮೊಸರು: ಡೈರಿ ಉತ್ಪನ್ನಗಳಾದ ಮೊಸರು ಹಾಗೂ ಮಜ್ಜಿಗೆಗೂ ಕೂಡಾ ತಾಮ್ರದ ಪಾತ್ರೆ ಸೂಕ್ತವಲ್ಲ. ಯಾಕೆಂದರೆ ಇವೆರಡೂ ತಾಮ್ರದ ಜೊತೆ ವರ್ತಿಸಿ ಕಡು ಬಣ್ಣದ ವಸ್ತುವಾಗಿ ಪರಿವರ್ತನೆಯಾಗಿ ಸೇವಿಸಲು ಯೋಗ್ಯವಲ್ಲದ ದ್ರವವಾಗಿ ಪರಿವರ್ತನೆಯಾಗುತ್ತದೆ.
5. ಬಿಸಿ ನೀರು: ತಾಮ್ರವನ್ನು ಬಿಸಿ ಮಾಡಿದಾಗ ಅದು ಬೇರೆಯದರ ಜೊತೆ ವರ್ತಿಸುತ್ತದೆ. ಬಿಸಿ ನೀರಿಗೂ ಅಷ್ಟೇ. ತಾಮ್ರದ ಪಾತ್ರೆಯಲ್ಲಿ ಬಿಸಿನೀರು ಹಾಕಿದರೆ ಅದು ತಾಮ್ರದ ಜೊತೆ ವರ್ತಿಸುತ್ತದೆ. ಹಾಗಾಗಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಹಾಕಿಡುವ ಅಭ್ಯಾಸವಿದ್ದರೆ ಅದನ್ನು ಸಾಮಾನ್ಯ ಉಷ್ಣತೆಗೆ ತಂದ ಬಳಿಕವೇ ಹಾಕಿಡಿ. ಅಥವಾ ತಾಮ್ರದ ಬಾಟಲ್‌ಗಳ ಬಳಕೆ ಇತ್ತೀಚೆಗೆ ಜಾಸ್ತಿಯಾಗಿರುವುದರಿಂದ, ತಾಮ್ರದ ಬಾಟಲ್‌ಗಳಲ್ಲಿ ಬಿಸಿ ನೀರು ತುಂಬಿಸಿ ಕಚೇರಿಗೆ, ಜಿಮ್‌ಗೆ ಕೊಂಡೊಯ್ಯುವ ಅಭ್ಯಾಸ ಮಾಡಿಕೊಂಡಿದ್ದರೆ, ತಕ್ಷಣ ಬದಲಾಯಿಸಿ. ಸಾಮಾನ್ಯ ಉಷ್ಣತೆಯ ನೀರನ್ನೇ ತುಂಬಿಸಿ ಬಳಸಿ.
ಈ ಕಾರಣಗಳಿಂದ ತಾಮ್ರದ ಪಾತ್ರೆಗಳನ್ನು ನಿತ್ಯ ಬಳಕೆಗೆ ಉಪಯೋಗಿಸುವ ಮೊದಲು ಸಾಕಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ: Food Tips: ಪಾವ್ ಬಾಜಿ ರುಚಿಯಾಗಿರಬೇಕೆಂದರೆ ಈ ಐದು ಸೂತ್ರಗಳನ್ನು ಮರೆಯದಿರಿ!