ಆಹಾರದ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಗೊಂದಲ ಹೆಚ್ಚಿರುವುದು ಸಹಜ. ಯಾಕೆಂದರೆ, ನಿತ್ಯವೂ ರಾಶಿ ರಾಶಿ ಮಾಹಿತಿಗಳು (food guide) ನಮ್ಮ ಬೆರಳ ತುದಿಗೇ ಸಿಗುತ್ತಿವೆ. ಮಾಹಿತಿಗಳ ಮಹಾಪೂರದಲ್ಲಿ ಓದುಗರು, ಸರಿಯಾದುದೇನು, ತಪ್ಪಿರುವುದು ಎಲ್ಲಿ ಎಂಬ ಬಗ್ಗೆ ಗೊಂದಲಕ್ಕೆ ಬೀಳುವುದು ಸಹಜ. ಹಸಿ ತರಕಾರಿ, ಬೇಯಿಸಿದ ತರಕಾರಿ (boiled vegetables) ವಿಚಾರದಲ್ಲೂ ಬಹುತೇಕರಿಗೆ ಇಂಥದ್ದೇ ಸಮಸ್ಯೆ ಎದುರಾಗುತ್ತದೆ. ಯಾವುದನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರಕ್ಕೆ ಬಂದರೆ, ಕೆಲ ತರಕಾರಿಗಳನ್ನು ಬೇಯಿಸದೆ ಹಸಿ ತಿಂದರೆ ಒಳ್ಳೆಯದು ಎಂಬ ಉತ್ತರ ಸಿಕ್ಕರೆ ಇನ್ನೂ ಕೆಲವನ್ನು ಬೇಯಿಸಿಯೇ ತಿನ್ನಬೇಕು ಎಂಬುದು. ಬೇಯಿಸಿದಾಗ ಪೋಷಕಾಂಶಗಳು (nutrients) ನಷ್ಟವಾಗುತ್ತದೆ ಎಂಬುದನ್ನೇ ನಂಬಿರುವ ಮಂದಿ ಕೆಲವರು. ಆದರೆ, ಕೆಲವು ಆಹಾರಗಳನ್ನು ಬೇಯಿಸಿ (boiled food) ತಿಂದರೆ ಹೆಚ್ಚು ಪೋಷಕಾಂಶಗಳು ದೇಹ ಸೇರುತ್ತವಂತೆ ಎಂದರೆ ನಂಬುತ್ತೀರಾ? ಹಾಗಾದರೆ ಬನ್ನಿ, ಯಾವೆಲ್ಲ ಆಹಾರಗಳನ್ನು ಬೇಯಿಸಿ ತಿಂದರೆ ಬೆಸ್ಟ್ ಎಂಬುದನ್ನು (food tips) ನೋಡೋಣ.
1. ಆಲೂಗಡ್ಡೆ: ಆಲೂಗಡ್ಡೆಯಲ್ಲಿ ನಾರಿನಂಶ ಹೇರಳವಾಗಿದೆ. ಇದನ್ನು ಸರಿಯಾದ ಪ್ರಮಾಣದಲ್ಲಿ ತಿಂದರೆ ತೂಕ ಇಳಿಸಲೂ ಕೂಡಾ ನೆರವಾಗುತ್ತದೆ! ಯಾಕೆಂದರೆ ಇದು ಹೆಚ್ಚು ಹೊತ್ತು ಹೊಟ್ಟೆ ತುಂಬಿಸಿರುವ ಭಾವ ನೀಡುತ್ತದೆ.
2. ಮೊಟ್ಟೆ: ಬೇಯಿಸಿದ ಮೊಟ್ಟೆಯಲ್ಲಿ ಲೀನ್ ಪ್ರೊಟೀನ್ ಅತ್ಯಧಿಕ ಪ್ರಮಾಣದಲ್ಲಿ ಇರುವದರಿಂದ ಬೇಯಿಸಿದ ಮೇಲೂ ಪ್ರೊಟೀನ್ ಏನೂ ಆಗದ ಕಾರಣ, ಬೇಯಿಸಿ ಮೊಟ್ಟೆಯ ಅತ್ಯಧಿಕ ಲಾಭ ಪಡೆಯಬಹುದು.
3. ಕ್ಯಾರೆಟ್: ಕ್ಯಾರೆಟ್ ಹಸಿ ತಿಂದರೆ ಒಳ್ಳೆಯದು ಎಂಬ ನಂಬಿಕೆ ನಮ್ಮಲ್ಲನೇಕರದು. ಆದರೆ ಬೇಯಿಸಿದ ಕ್ಯಾರೆಟ್‌ನಲ್ಲೂ ಯಾವುದೇ ಪೋಷಕಾಂಶಗಳು ನಷ್ಟವಾಗದೆ ಅದರಲ್ಲಿರುವ ಬೀಟಾ ಕೆರೋಟಿನ್ ಅಂಶವನ್ನು ವಿಟಮಿನ್ ಎ ಯಾಗಿ ನಮ್ಮ ದೇಹ ಪರಿವರ್ತಿಸುತ್ತದೆ.
4. ಬ್ರೊಕೋಲಿ: ಬೇಯಿಸಿದ ಬ್ರೊಕೋಲಿಯಲ್ಲಿ ವಿಟಮಿನ್ ಸಿ ಹಾಗೂ ಫೋಲೇಟ್ ಹಾಗೆಯೇ ಇರುವುದರಿಂದ ಪೋಷಕಾಂಶಗಳೆಲ್ಲವೂ ನಮಗೆ ಸಿಗುತ್ತದೆ.
5. ಪಾಲಕ್: ಬೇಯಿಸಿದ ಪಾಲಕ್ ಹಾಗೂ ಬಸಳೆ ಸೊಪ್ಪು ಕಬ್ಬಿಣಾಂಶ, ವಿಟಮಿನ್ ಎ ಹಾಗೂ ಫೋಲೇಟ್ ಅನ್ನು ಹಾಗೇಯೇ ಉಳಿಸಿಕೊಳ್ಳುತ್ತದೆ.
6. ಕಡಲೆಕಾಳು: ಚೆನ್ನಾ ಅಥವಾ ಕಾಬೂಲಿ ಕಡಲೆ, ಕಪ್ಪು ಕಡಲೆ ಸಸ್ಯಾಹಾರಿಗಳಿಗೆ ಅತ್ಯುತ್ತಮ ಪ್ರೊಟೀನ್ ಮೂಲ. ಇದನ್ನು ಬೇಯಿಸುವುದರಿಂದ ಇದರಲ್ಲಿರುವ ಪ್ರೊಟೀನ್ ನಷ್ಟವಾಗದು.
7. ಚಿಕನ್ ಬ್ರೆಸ್ಟ್: ಚಿಕನ್ ಬ್ರೆಸ್ಟ್ ಕಡಿಮೆ ಕೊಬ್ಬಿನ ಡಯಟ್ ಸಂದರ್ಭ ಬಹುತೇಕರು ಬಳಸುವ ಆಹಾರ. ಇದೂ ಕೂಡಾ, ಬೇಯಿಸದ ನಂತರವೂ ಅತ್ಯಂತ ಹೆಚ್ಚು ಪ್ರೊಟೀನನ್ನು ತನ್ನ ಬಳಿ ಉಳಿಸಿಕೊಂಡಿರುತ್ತದೆ.
8. ಸಿಹಿಗೆಣಸು: ಬೇಯಿಸಿದ ಸಿಹಿಗೆಣಸಿನಲ್ಲಿ ವಿಟಮಿನ್ ಎ ಹಾಗೂ ಸಿ ಹಾಗೆಯೇ ಉಳಿಸಿಕೊಳ್ಳುವ ಗುಣವಿದೆ, ಹೀಗಾಗಿ, ಎಲ್ಲ ಪೋಷಕಾಂಶಗಳು ಬೇಯಿಸಿದ ಮೇಲೂ ನಮಗೆ ಸಿಗುತ್ತದೆ.
9. ಜೋಳ: ಅಮೆರಿಕನ್ ಜೋಳ ಹಾಗೂ ನಮ್ಮ ದೇಶದ ಜೋಳವನ್ನು ಹಸಿಯಾಗಿಯೂ, ಸ್ವ್ಲಪ ಸುಟ್ಟು ತಿನ್ನುವ ಅಭ್ಯಾಸ ನಮಗಿದ್ದರೂ, ಬೇಯಿಸಿ ತಿಂದರೂ ಇದರಲ್ಲಿರುವ ಪೋಷಕಾಂಶಗಳಲ್ಲಿ ವ್ಯತ್ಯಾಸವಾಗದಂತೆ.
ಈವೆಲ್ಲ ಆಹಾರಗಳು ಬೇಯಿಸಿ ತಿಂದರೆ ಒಳ್ಳೆಯದೇನೋ ನಿಜ. ಆದರೆ ಹೇಗೆ ಬೇಯಿಸುತ್ತೇವೆ ಎಂಬುದರಲ್ಲೂ ಇವೆ. ಮುಚ್ಚಳ ತೆರೆದಿಟ್ಟು ಅಥವಾ ಪ್ರೆಶರ್ ಕುಕ್ಕರ್‌ನಲ್ಲಿ ಇವುಗಳನ್ನು ಬೇಯಿಸಿದರೆ ಪೋಷಕಾಂಶ ನಷ್ಟವಾಗದು ಎಂದರೆ ಅದು ತಪ್ಪಾದೀತು. ಹಾಗಾಗಿ ಬಹುಮುಖ್ಯವಾಗಿ ಅತ್ಯಂತ ಉತ್ತಮವಾದ ಹಬೆಯಲ್ಲಿ ಬೇಯಿಸುವ ವಿಧಾನದಲ್ಲಿ ಬೇಯಿಸಿ ಸೇವಿಸಿದರೆ ಒಳ್ಳೆಯದು. ಅತಿಯಾಗಿಯೂ, ಕಡಿಮೆಯೂ ಅಲ್ಲದೆ, ಹದವಾಗಿ ಆಃಆರ ಬೇಯುವುದೂ ಕೂಡಾ ಅಷ್ಟೇ ಮುಖ್ಯ.
ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್ ಇಡ್ಲಿ ಮಾಡಲು ಪಂಚಸೂತ್ರಗಳು!